»   » ತೀರ್ಥಹಳ್ಳಿಯಲ್ಲಿ ಮುಂದುವರಿದ ಮತದಾನ

ತೀರ್ಥಹಳ್ಳಿಯಲ್ಲಿ ಮುಂದುವರಿದ ಮತದಾನ

Posted By: Staff
Subscribe to Filmibeat Kannada

ಅಕ್ಕಾ - ಚೆಕ್‌ ವಿವಾದ ಖ್ಯಾತಿಯ ಸಿ. ಅಶ್ವತ್‌ ಮತದಾನಕ್ಕಾಗಿ ಬುಧವಾರ ತೀರ್ಥಹಳ್ಳಿಗೆ ತೆರಳಿದ್ದಾರೆ. ಈಗ ಇಲ್ಲಿ ನಡೆಯುತ್ತಿರುವುದು ಎರಡನೇ ಹಂತದ ಮತದಾನ. ದೀಪಾವಳಿಗೆ ಮುನ್ನ ಮೊದಲ ಹಂತದ ಮತದಾನ ಮುಗಿದಿತ್ತು. ಮಾಯಾಮೃಗ ಟೆಲಿ ಧಾರಾವಾಹಿ ಖ್ಯಾತಿಯ ಟಿ.ಎನ್‌. ಸೀತಾರಾಂ ಮತದಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ಕುವೆಂಪು ಅವರ ಕಾನೂರು ಹೆಗ್ಗಡಿತಿಯನ್ನು ತೆರೆಗೆ ತಂದು ಸಾಕಷ್ಟು ಪ್ರಶಸ್ತಿಗಳನ್ನೂ ಬಾಚಿಕೊಂಡ ಅನಿಕೇತನ ಚಿತ್ರ ಸಂಸ್ಥೆ ಎಸ್‌.ಎಲ್‌. ಭೈರಪ್ಪನವರ ಮತದಾನ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನ ಚಿತ್ರ ತಯಾರಿಸುತ್ತಿದೆ. ಸೀತಾರಾಮ್‌ ಅವರೇ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಿ. ಅಶ್ವತ್‌ ಹಾಗೂ ವಿ. ಮನೋಹರ್‌ ಪ್ರಥಮ ಬಾರಿಗೆ ಜತೆಗೂಡಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಒಟ್ಟು 7 ಹಾಡುಗಳನ್ನು ಚಿತ್ರಕ್ಕೆ ನೀಡಿದ್ದಾರೆ.

ಸುರೇಶ್‌ ಅರಸ್‌ ಸಂಕಲನದ ಈ ಚಿತ್ರದಲ್ಲಿ ಅನಂತನಾಗ್‌, ದೇವರಾಜ್‌, ತಾರಾ, ಸುಂದರರಾಜ್‌, ಮುಖ್ಯಮಂತ್ರಿ ಚಂದ್ರು, ನಾಗೇಂದ್ರ ಶಾ, ವನಮಾಲಾ ವಿಶ್ವನಾಥ್‌ ನಟಿಸುತ್ತಿದ್ದಾರೆ.

ಪ್ರಾರ್ಥನೆಯಾಂದಿಗೆ ಆರಂಭ - ಅಂತ್ಯ ಕಂಡ ಚಂದನದ ಚಿಗುರು

ಕನ್ನಡದ ಮೇರು ಚಿತ್ರಗಳಲ್ಲಿ ಒಂದಾದ ಬಿ.ಆರ್‌. ಪಂತಲೂ ಅವರ ಅಭಿನಯದ ಸ್ಕೂಲ್‌ ಮಾಸ್ಟರ್‌ ಇನ್ನೂ ನಿಮ್ಮ ನೆನಪಿನಲ್ಲಿ ಹಚ್ಚ ಹಸಿರಾಗಿರಬಹುದು. ಈಗ ಹೊಸದೊಂದು ಚಿತ್ರ ಅತಿ ಶೀಘ್ರದಲ್ಲೇ ಬರಲಿದೆ ಅದು ಸ್ಕೂಲ್‌ ಮೇಡಂ. ಆದರೆ, ಚಿತ್ರದ ಹೆಸರು ಸ್ಕೂಲ್‌ ಮೇಡಂ ಎಂದಲ್ಲ, ಈ ಚಿತ್ರಕ್ಕೆ ನಿರ್ದೇಶಕ ಅಬ್ದುಲ್‌ ರೆಹಮಾನ್‌ ಪಾಶಾ ಅವರು ಚಂದನದ ಚಿಗುರು ಎಂದು ಹೆಸರಿಟ್ಟಿದ್ದಾರೆ.

ಬಹುಕಾಲ ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ಕನ್ನಡದ ಚಂದುಳ್ಳಿ ಚೆಲವೆ ಸುಧಾರಾಣಿ ಈ ಚಿತ್ರದಲ್ಲಿ ಸ್ಕೂಲ್‌ ಮೇಡಂ ಪಾತ್ರ ನಿರ್ವಹಿಸಿದ್ದಾರೆ. ಮಕ್ಕಳ ಭವಿಷ್ಯದ ಅಡಿಪಾಯದ ಮೇಲೆ ನಿಂತಿರುವ ಈ ಚಿತ್ರದ ಕಥಾವಸ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಶೈಕ್ಷಣಿಕ ಸಮಸ್ಯೆ. ಅದಕ್ಕೆ ಪರಿಹಾರವನ್ನೂ ನೀಡುವ ಪ್ರಯತ್ನ ಇಲ್ಲಿ ನಡೆದಿದೆ.

ಪ್ರಾರ್ಥನೆಯಾಂದರಿಂದ ಆರಂಭವಾಗುವ ಚಂದನದ ಚಿಗುರು ಪ್ರಾರ್ಥನೆಯಾಂದಿಗೆ ಕೊನೆಗೊಂಡಿದೆ. ಚಿತ್ರಕ್ಕಾಗಿ ಐದು ರೀತಿಯ ಪ್ರಾರ್ಥನೆಗಳನ್ನು ಐದು ಶಾಲೆಗಳಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಸಂವಹನ ಪರಿಣಿತ ಅಬ್ದುಲ್‌ ರೆಹಮಾನ್‌ ಪಾಶಾರ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಎಚ್‌. ದಾಸ್‌ ಅವರ ಛಾಯಾಗ್ರಹಣವಿದೆ. ತಾರಾಬಳಗದಲ್ಲಿ ಸುಧಾರಾಣಿ, ಗೋವಿಂದ್‌, ಬಿ.ವಿ. ರಾಧಾ ಮತ್ತಿತರರಿದ್ದಾರೆ.

English summary
tirtahalli matadana nothing to do with american election
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada