For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ಪಾಸ್ ಆದ 'ಮಟಾಶ್'ಗೆ ಸಿಕ್ತು ಯು/ಎ ಸರ್ಟಿಫಿಕೇಟ್

  |

  ನೋಟ್ ಬ್ಯಾನ್ ಕುರಿತು ತಯಾರಾಗಿರುವ 'ಮಟಾಶ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.

  2016ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಅಂತ 500, 1000 ರೂಪಾಯಿ ನೋಟುಗಳನ್ನ ನಿಷೇಧ ಮಾಡಿದರು. ಇದರಿಂದ ಏನೆಲ್ಲಾ ಬೆಳವಣಿಗೆಗಳು ಆಯಿತು, ಯಾರಿಗೆ ಸಮಸ್ಯೆ ಆಯ್ತು, ಯಾರಿಗೆ ಲಾಭ ಆಯ್ತು ಎಂಬ ಕಥೆಯನ್ನಿಟ್ಟು 'ಮಟಾಶ್' ಚಿತ್ರ ಮನರಂಜನಾತ್ಮಕ ಮೂಡಿಬಂದಿದೆಯಂತೆ.

  ಸದ್ಯ, ಚಿತ್ರದ ಟೀಸರ್ ಮತ್ತು ಲಿರಿಕಲ್ ಹಾಡುಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿರುವ 'ಚವಳಿಕಾಯಿ' ಸಖತ್ ಸದ್ದು ಮಾಡಿದ್ದು, ಅದರ ಜೊತೆ, 'ನಮೋ ವೆಂಕಟೇಶಾ' ಹಾಗೂ 'ವಾಟ್‌ ಎ ಟ್ರ್ಯಾಜಿಡಿ' ಹಾಡುಗಳು ಕೂಡ ವಿಶೇಷವಾಗಿ ಗಮನ ಸೆಳೆದಿದೆ.

  ನೋಟ್ ಬ್ಯಾನ್ ಚರಿತ್ರೆ ಹೇಳುತ್ತಿದೆ 'ನಮೋ' ವೆಂಕಟೇ'ಶಾ' ಹಾಡು.! ನೋಟ್ ಬ್ಯಾನ್ ಚರಿತ್ರೆ ಹೇಳುತ್ತಿದೆ 'ನಮೋ' ವೆಂಕಟೇ'ಶಾ' ಹಾಡು.!

  ಈಗ ಸೆನ್ಸಾರ್ ಮಂಡಳಿಯಿಂದ ಪಾಸ್ ಆಗಿರುವ ಚಿತ್ರಕ್ಕೆ ಸೆನ್ಸಾರ್ ಅಧಿಕಾರಿಗಳು ಕೂಡ ಖುಷ್ ಆಗಿದ್ದಾರೆ. ಸಿನಿಮಾ ನೋಡಿ, ಒಳ್ಳೆಯ ಸಂದೇಶದ ಜೊತೆ ಮನರಂಜನೆ ಸೇರಿದೆ. ಜನರನ್ನ ಎಂಟರ್ ಟೈನ್ ಮಾಡಲು ಇದು ಒಳ್ಳೆಯ ಚಿತ್ರ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರಂತೆ.

  ಇನ್ನುಳಿದಂತೆ ಜುಗಾರಿ ಅರವಿಂದ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಮರ್ಥ ನರಸಿಂಹ ರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರಾಧ್ವಜ್, ರೂಪ ಶ್ರೀಧರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಡಿಸೆಂಬರ್ 7 ರಂದು ಮಟಾಶ್ ಸಿನಿಮಾ ಬಿಡುಗಡೆಯಾಗಲಿದೆ.

  English summary
  Censor Board granted U/A certificate to the Matash film. directed by jugari aravind and movie will release on december 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X