For Quick Alerts
  ALLOW NOTIFICATIONS  
  For Daily Alerts

  'ನನ್ನ ತಾಕತ್ ತೋರಿಸುವ ಚಿತ್ರವಿದು': ಮುಗ್ದ ಪ್ರಮೋದ್ ಈಗ ಖಡಕ್ ಹೀರೋ

  |

  ಗೀತಾ ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿ ಚಿತ್ರಗಳಲ್ಲಿ ಮುಗ್ದ ಹುಡುಗನಾಗಿ ಗಮನ ಸೆಳೆದ ನಟ ಪ್ರಮೋದ್ ಈಗ 'ಮತ್ತೆ ಉದ್ಭವ' ಚಿತ್ರದಲ್ಲಿ ಖಡಕ್ ಹೀರೋ ಆಗಿ ಎಂಟ್ರಿಯಾಗಿದ್ದಾರೆ.

  1990ರಲ್ಲಿ ಕೊಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದ 'ಉದ್ಭವ' ಸಿನಿಮಾ ಅಂದಿನ ಕಾಲಕ್ಕೆ ಯಶಸ್ಸು ಕಂಡಿತ್ತು. ಅನಂತ್ ನಾಗ್ ನಟನೆ ಮತ್ತು ಆ ಚಿತ್ರದ ಕಥೆ ಪ್ರೇಕ್ಷಕರನ್ನು ರಂಜಿಸಿತ್ತು. ಈಗ ಅದೇ ಯಶಸ್ಸಿನ ಮುಂದುವರೆದ ಭಾಗ ಎಂಬಂತೆ 'ಮತ್ತೆ ಉದ್ಭವ' ಬರ್ತಿದೆ. ಅನಂತ್ ನಾಗ್ ಅವರ ಬದಲು ಪ್ರಮೋದ್ ಬಣ್ಣ ಹಚ್ಚಿದ್ದಾರೆ.

  ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್ಅಂದು ರಸ್ತೆಯಲ್ಲಿ ನಿಂತು ದರ್ಶನ್ ಸನ್ಮಾನ ನೋಡಿದ ಬಾಲಕ ಈಗ ಸ್ಟಾರ್

  ಫೆಬ್ರವರಿ 7 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಮನರಂಜನೆಯಿಂದ ಕೂಡಿದೆ. ಉದ್ಭವದಂತೆ ಮತ್ತೆ ಉದ್ಭವ ಚಿತ್ರವೂ ಟ್ರೆಂಡ್ ಹುಟ್ಟುಹಾಕುತ್ತೆ ಎಂಭ ಭರವಸೆ ಮೂಡಿಸುತ್ತಿದೆ. ಈ ಕುರಿತು ಚಿತ್ರದ ನಾಯಕ ಪ್ರಮೋದ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಮುಂದೆ ಓದಿ...

  ನನ್ನ ತಾಕತ್ ಪ್ರದರ್ಶಿಸುವ ಚಿತ್ರವಿದು

  ನನ್ನ ತಾಕತ್ ಪ್ರದರ್ಶಿಸುವ ಚಿತ್ರವಿದು

  ''ಗೀತಾ ಬ್ಯಾಂಗಲ್ ಸ್ಟೋರ್, 'ಪ್ರೀಮಿಯರ್ ಪದ್ಮಿನಿ' ಚಿತ್ರಗಳಲ್ಲಿ ಮುಗ್ದ ಹುಡುಗನ ಪಾತ್ರ ನಿರ್ವಹಿಸಿದ್ದೆ. ಆ ಇಮೇಜ್ ಇಂದ ಹೊರಬರಬೇಕಿತ್ತು. ತನ್ನ ತಾಕತ್ ಏನು ಎನ್ನುವುದನ್ನು ಪ್ರದರ್ಶಿಸಬೇಕಿತ್ತು. ಮಾಸ್ ಸಿನಿಮಾಗಳು ಅಂದ್ರೆ ನನಗೆ ಇಷ್ಟ. ಡ್ಯಾನ್ಸ್, ಫೈಟ್, ಡೈಲಾಗ್, ಕಾಮಿಡಿ ಹೀಗೆ ಕಮರ್ಷಿಯಲ್ ಆಗಿ ಹೀರೋ ಎಂದು ಸಾಬೀತು ಪಡಿಸಬೇಕಿತ್ತು. ಅದಕ್ಕೆ ತಕ್ಕಂತೆ ಸಿಕ್ಕ ಸಿನಿಮಾ ಮತ್ತೆ ಉದ್ಭವ'' - ಪ್ರಮೋದ್

  ನನ್ನ ಮನಸ್ಸಿನಲ್ಲೂ ಅದೇ ಇತ್ತು

  ನನ್ನ ಮನಸ್ಸಿನಲ್ಲೂ ಅದೇ ಇತ್ತು

  ''ನೋಡುವುದಕ್ಕೆ ದರ್ಶನ್ ಅವರಂತೆ ಕಾಣುತ್ತೀರಾ, ನಿಮ್ಮನ್ನು ನೋಡಿದ್ರೆ ಮಾಸ್ ಫೀಲ್ ಇದೆ' ಎಂದು ಹೇಳುತ್ತಿದ್ದರು. ಈ ಮಾತು ಕೇಳಿದ ಪ್ರತಿ ಬಾರಿಯೂ ಆ ತರ ಸಿನಿಮಾ ಮಾಡ್ಬೇಕು ಎಂಬ ಯೋಚನೆ ನನ್ನ ತಲೆಯಲ್ಲಿತ್ತು. ಎಮೋಷನ್, ಫೀಲಿಂಗ್ ಇದೆಲ್ಲವನ್ನು ಬಿಟ್ಟು ಇಡೀ ಸಿನಿಮಾದಲ್ಲಿ ನಾನು ಆಕ್ಟೀವ್ ಆಗಿರಬೇಕು ಎಂದು ಕಾಯುತ್ತಿದ್ದೆ. ಈ ನಡುವೆ ಹಲವು ಕಥೆ ಬಂತು. ಆದರೆ ಅದ್ಯಾವುದು ನನ್ನ ಆಲೋಚನೆಗೆ ಹತ್ತಿರವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಸಿಕ್ಕ ಚಿತ್ರವೇ ಮತ್ತೆ ಉದ್ಭವ'' - ಪ್ರಮೋದ್

  ಇಷ್ಟ ಪಟ್ಟು ಆಯ್ಕೆ ಮಾಡಿದ ನಿರ್ದೇಶಕರು

  ಇಷ್ಟ ಪಟ್ಟು ಆಯ್ಕೆ ಮಾಡಿದ ನಿರ್ದೇಶಕರು

  ''ಪ್ರೀಮಿಯರ್ ಪದ್ಮಿನಿ ಸಿನಿಮಾ ನೋಡಿದ ಕೊಡ್ಲು ರಾಮಕೃಷ್ಣ ಅವರ ನನಗೆ ಈ ಚಿತ್ರ ಮಾಡುವಂತೆ ಅವಕಾಶ ಕೊಟ್ಟರು. ಕಥೆ ಕೇಳಿದ ಮೇಲೆ ನಿಜಕ್ಕೂ ಇಷ್ಟ ಆಯಿತು. ಅಂದು ಅನಂತ್ ನಾಗ್ ಸರ್ ಮಾಡಿದ್ದಕ್ಕಿಂತ ಹೆಚ್ಚು ಆಕ್ಟೀವ್ ಆಗಿರುವ ಪಾತ್ರ ಇದು. ಆ ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಅನಂತ್ ನಾಗ್ ಸರ್ ಮಗನ ಪಾತ್ರ ನನ್ನದು. ತಂದೆ-ತಾಯಿ, ಪ್ರೀತಿಸುವ ಹುಡುಗಿ, ಬಿಲ್ಡರ್, ರಾಜಕರಾಣಿ, ಸ್ವಾಮೀಜಿ ಹೀಗೆ ಅನೇಕ ಪಾತ್ರಗಳು ಬರುತ್ತೆ. ಪ್ರತಿಯೊಬ್ಬರ ಬಳಿಯೂ ಒಂದೊಂದು ರೀತಿ ನಡೆದುಕೊಳ್ಳುವ ಹೀರೋ ಪಾತ್ರ'' - ಪ್ರಮೋದ್

  ಮೊದಲ ದೃಶ್ಯದಲ್ಲೇ ನಿರ್ದೇಶಕರು ಖುಷಿ ಪಟ್ಟರು

  ಮೊದಲ ದೃಶ್ಯದಲ್ಲೇ ನಿರ್ದೇಶಕರು ಖುಷಿ ಪಟ್ಟರು

  ''ನನ್ನ ಮೊದಲ ದೃಶ್ಯ ಚಿತ್ರೀಕರಣ ನೋಡಿದ್ಮೇಲೆ ನಿರ್ದೇಶಕರು ಖುಷಿಯಾದರು. ನನ್ನ ಚಿತ್ರಕ್ಕೆ ಈ ಹುಡುಗ ಕರೆಕ್ಟ್ ಹುಡುಗ. ತುಂಬಾ ಚೆನ್ನಾಗಿ ಮಾಡಿದೆ' ಎಂದು ಹೇಳಿದರು. ನಿರ್ದೇಶಕರು ಕೂಡ ಅಷ್ಟೇ ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ. ಪ್ರೊಡಕ್ಷನ್ ತಂಡ ಅಂದುಕೊಂಡಂತೆ ಅಚ್ಚುಕಟ್ಟಾಗಿ ಶೂಟಿಂಗ್ ಮಾಡಿದೆ. ಟ್ರೈಲರ್ ಗೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ'' ಎಂದು ಪ್ರಮೋದ್ ಆತ್ಮ ವಿಶ್ವಾಸದ ಮಾತನ್ನಾಡಿದ್ದಾರೆ.

  ಮತ್ತೆ ಉದ್ಭವ ಚಿತ್ರದ ಬಗ್ಗೆ

  ಮತ್ತೆ ಉದ್ಭವ ಚಿತ್ರದ ಬಗ್ಗೆ

  ಕೊಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಮಿಲನ ನಾಗರಾಜ್ ನಾಯಕಿಯಾಗಿದ್ದಾರೆ. ರಂಗಾಯಣ ರಘು, ಮೋಹನ್, ಅವಿನಾಶ್, ಸುಧಾ ಬೆಳವಾಡಿ, ಶುಭರಕ್ಷಾ, ಗಿರೀಶ್ ಭಟ್, ಪಿಡಿ ಸತೀಶ್ ಸೇರಿದಂತೆ ಹಲವರು ನಟಿಸಿದ್ದಾರೆ. ವಿ ಮನೋಹರ್ ಸಂಗೀತವಿದೆ. ಕೆಂಪರಾಜು ಬಿಎಸ್ ಸಂಕಲನ ವೈಟ್ ಪ್ಯಾಂಥರ್ಸ್ ಪ್ರಿಯೇಟಿವ್ ಮತ್ತು ಇನ್ಫಿನಿಟಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ.

  English summary
  Kannada actor Pramod starrer Matte udbhava movie releasing on february 7th. the movie directed by kodlu ramakrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X