For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಅಪಹರಣ: ನಗರದ ಜಂಜಡ ಬದುಕಿನಲ್ಲೊಂದು ರಾಮಾಯಣ

  |

  ರಾಮಾಯಣ, ಮಹಾಭಾರತ ಮತ್ತಿತರ ಮಹಾಕಾವ್ಯಗಳು ಹಾಗೂ ಪುರಾಣಗಳಿಂದ ಕೆಲವು ಪ್ರಸಂಗಗಳನ್ನು ಹೆಕ್ಕಿ ಅವುಗಳನ್ನು ಆಧುನಿಕ ಕಣ್ಣಿನಿಂದ ನೋಡುವ ಪ್ರಯತ್ನ ಸಾಹಿತ್ಯ ಮತ್ತು ಸಿನಿಮಾ ವಲಯದಲ್ಲಿ ಬಹಳಷ್ಟು ನಡೆದಿವೆ.

  ಇದೇ ದಿಸೆಯಲ್ಲಿ ''ಮತ್ತೊಂದು ಅಪಹರಣ'' ಕಿರುಚಿತ್ರವೂ ಸಾಗುತ್ತದೆ. ಸೀತಾಪಹರಣದ ಪ್ರಸಂಗವೊಂದು ಆಧುನಿಕ ನಗರ ಬದುಕಿನಲ್ಲಿ ವಿಡಂಬನೆಯ ರೂಪ ತಾಳಿರುವುದು ಕಿರುಚಿತ್ರದ ಸಾರ. ಚಿತ್ರದ ಆರಂಭಿಕ ದೃಶ್ಯದಲ್ಲೇ ಬರುವ ರಾಮ, ಲಕ್ಷ್ಮಣ ಮತ್ತು ಸೀತೆಯರ ಚಿತ್ರ ಇದನ್ನು ಪ್ರಾಸಂಗಿಕವಾಗಿ ಮೊದಲೇ ಸಂಕೇತಿಸಿಬಿಡುತ್ತದೆ.

  ರಾಮಾಯಣದಲ್ಲಿ ರಾಮನ ಗಮನ ಬೇರೆಡೆ ಸೆಳೆಯುವ ಮಾಯಾಜಿಂಕೆಯ ಸ್ಥಾನದಲ್ಲಿ ವಾಟ್ಸ್ಅಪ್ನ ಪ್ರಮೋಷನ್ ದೃಶ್ಯವೊಂದು ಇಲ್ಲಿ ಬರುತ್ತದೆ. ರಾಮ ಸಂಕಷ್ಟದಲ್ಲಿರುವುದು ಗೊತ್ತಾಗಿ, ಲಕ್ಷ್ಮಣನನ್ನು ಸಹಾಯಕ್ಕೆ ಕಳುಹಿಸಲು ಯತ್ನಿಸಿ ನಕಾರಾತ್ಮಕ ಉತ್ತರ ಪಡೆದ ಜಾನಕಿ, ತಾನೇ ನೆರವಿಗೆ ಧಾವಿಸುವಾಗಲೂ ಮೇಕ್ ಅಪ್ ಮಾಡಿಕೊಂಡು ಹೊರಡುವುದು ಇವತ್ತಿನ ಬದುಕಿನ ವಿಡಂಬನೆಯಾಗಿದೆ.

  ಆದರೆ ಕಿರುಚಿತ್ರದ ಅಂತ್ಯ ನೀವು ಊಹೆಯೂ ಮಾಡದ ರೀತಿಯಲ್ಲಿ ಧುತ್ತನೆ ಎದುರಾಗುತ್ತದೆ. ನಗರ ಬದುಕಿನ ದೈನಂದಿನ ಸಮಸ್ಯೆಯೊಂದನ್ನು ವಿಡಂಬನೆ ಹಾಗೂ ಹಾಸ್ಯದ ಲೇಪದಲ್ಲಿ ಚಿತ್ರಿಸಲಾಗಿದೆ. ''ಅರ್ಬನ್ ರಾಮಾಯಣ'' ಎಂಬ ಕಿರು ಚಿತ್ರಕ್ಕೆ ಆಪ್ತವಾಗಿದೆ.

  ವೀರನಾರಾಯಣ ಪರಿಕಲ್ಪನೆ, ನಿರ್ದೇಶನ ಮತ್ತು ಸಂಕಲನದ ಈ ಚಿತ್ರಕ್ಕೆ ಹರ್ಷ ರಮೇಶ್ ಕ್ಯಾಮೆರಾ ಹಿಡಿದಿದ್ದಾರೆ. ಮಾಮೂಲಿಯ ನಿರೂಪಣಾ ಶೈಲಿಯ ಹೊರತಾಗಿ, ದೃಶ್ಯಗಳ ಮೂಲಕವೇ ಕಥೆ ಹೇಳಿರುವುದು ಚಿತ್ರದ ವಿಶೇಷ. ಕಿರುಚಿತ್ರದ ಲಿಂಕ್ ಇಲ್ಲಿದೆ:

  English summary
  Mattondu Apaharana Kannada Short Story, Its Urban Ramayana when Ravana enters Bengaluru what happens. Concept-Script-Editing-Direction : Veeranarayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X