ಮ್ಯಾಕ್ಸ್ vs ಯುಐ: "ಉಪೇಂದ್ರ ಅವರಿಗೆ ಇಲ್ಲದ ತಲೆನೋವು ನಿಮಗ್ಯಾಕೆ?: ಸುದೀಪ್ ಪ್ರತಿಕ್ರಿಯೆ

ಉಪೇಂದ್ರ 'ಯುಐ' ಹಾಗೂ ಸುದೀಪ್ 'ಮ್ಯಾಕ್ಸ್' ಚಿತ್ರಗಳು 5 ದಿನಗಳ ಅಂತರದಲ್ಲಿ ತೆರೆಗೆ ಬರ್ತಿದೆ. ಇದು ಬಾಕ್ಸಾಫೀಸ್ ಕ್ಲ್ಯಾಶ್‌ಗೆ ವೇದಿಕೆ ಆಗುತ್ತಾ? ಎನ್ನುವ ಚರ್ಚೆ ನಡೀತಿದೆ. ಎರಡೂ ಕನ್ನಡ ಸಿನಿಮಾಗಳೇ. ಎರಡೂ ಚಿತ್ರಗಳ ಮೇಲೆ ನಿರೀಕ್ಷೆ ಇದೆ. ಯಾರೋ ಒಟ್ಟೊಟ್ಟಿಗೆ ಬರ್ತಿದ್ದಾರೆ? ಎನ್ನುವ ಪ್ರಶ್ನೆ ಕೆಲವರದ್ದು.

'ಯುಐ' ಬೆನ್ನಲ್ಲೇ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ಸ್ವತಃ ಸುದೀಪ್ ಮಾತನಾಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಉಪೇಂದ್ರ ಅವರಿಗೆ ಇಲ್ಲದ ತಲೆನೋವು ನಿಮಗ್ಯಾಕೆ? ಎಂದು ಸುದೀಪ್ ಮರು ಪ್ರಶ್ನೆ ಎಸೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ 'ಮ್ಯಾಕ್ಸ್' ಚಿತ್ರದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿದ್ದಾರೆ.

Max Actor Kichcha Sudeep opens up about clash with Upendra s UI

"ಎರಡೂ ಸಿನಿಮಾಗಳ ನಡುವೆ ಯಾವುದೇ ಪೈಪೋಟಿ ಇಲ್ಲ. ಉಪೇಂದ್ರ ಸರ್ ಸ್ಟಾರ್‌ಡಮ್ ಬಗ್ಗೆ ಮಾತನಾಡುವುದಕ್ಕೆ ಆಗಲ್ಲ. ಅವರಿಗೆ ಕಾಂಪಿಟೇಷನ್ ಸಾಧ್ಯನೇ ಇಲ್ಲ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರನ್ನು ನೋಡಿ ಕಲಿತವರು ನಾವೆಲ್ಲಾ. ಉಪೇಂದ್ರ ಅವರಿಗೆ ಇಲ್ಲದ ತಲೆ ನೋವು, ನಮಗೆ ನಿಮಗೆ ಯಾಕೆ?" ಎಂದು ಸುದೀಪ್ ಹೇಳಿದ್ದಾರೆ.

"ಉಪೇಂದ್ರ ಸರ್ ಎಲ್ಲೂ ಮಾತನಾಡುತ್ತಿಲ್ಲ. ಎಲ್ಲಾ ಅವರಿಗೆ ಗೊತ್ತು. ಕನ್ನಡ ಸಿನಿಮಾಗಳ ಬರದೇ ಇದ್ದರೆ ಬೇರೆ ಭಾಷೆಯ ಚಿತ್ರಗಳು ಬರುತ್ತದೆ. ಅಷ್ಟು ರಜೆ ಇರುವಾಗ ಯಾಕೆ ಎರಡು ಸಿನಿಮಾ ಬರಬಾರದು, ನನ್ನ ಸಿನಿಮಾ ಅಲ್ಲದೇ ಇದ್ದರೂ ಉಪೇಂದ್ರ ಸರ್ ಸಿನಿಮಾ ನಂಬಿ. ನನಗೆ ಅವರ ಮೇಲೆ ಅಪಾರ ಗೌರವ ಪ್ರೀತಿ ಇದೆ. ನಾನೇ ಪದೇ ಪದೆ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಹೇಳುತ್ತಿದ್ದೆ" ಸುದೀಪ್ ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಸುದೀಪ್ "ಇದೇ ಡೇಟ್‌ಗೆ ಸಿನಿಮಾ ರಿಲೀಸ್ ಮಾಡ್ಬೇಕಾ? ಎನ್ನುವ ಪ್ರಶ್ನೆಗೆ ಒಂದು ವಿಚಾರ ಹೇಳ್ತೀನಿ. ನಿರ್ಮಾಪಕರು ಎಲ್ಲಾ ನಿರ್ಧಾರ ತೆಗೆದುಕೊಳ್ತಾರೆ. ಆಗಸ್ಟ್ ಅಲ್ಲಿ ಬರಬೇಕಿತ್ತು. ಒಂದು ತಿಂಗಳು ತಡ ಮಾಡೋಣ ಎಂದೆ. ನಿರ್ಮಾಪಕರು ಎರಡು ತಿಂಗಳು ನಿಧಾನ ಆಗುತ್ತೆ ಎಂದರು. ಹಾಗಾಗಿ ತಡವಾಯಿತು" ಎಂದು ಸ್ಪಷ್ಟನೆ ನೀಡಿದ್ದಾರೆ.

"ಯುಐ ದೊಡ್ಡ ಸಿನಿಮಾ. ಅವರ ಸಿನಿಮಾ ಮುಂದೆ ಬರುವುದಕ್ಕೆ ನಮಗೆ ಭಯವಾಗುತ್ತಿದೆ. ಅವರು ಯಾಕೆ ಭಯ ಪಡುತ್ತಾರೆ. ಇಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ. ಗುರು ಬರ್ತಿದ್ದಾರೆ, ಬಳಿಕ ಪಕ್ಕದಲ್ಲೇ ಶಿಷ್ಯ ಆಗಿ ನಾನು ಬರ್ತಿದ್ದೀನಿ. ನಮ್ಮ ಇಂಡಸ್ಟ್ರಿಯಲ್ಲಿ ಯಾವುದೇ ಕ್ಲ್ಯಾಶ್ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದನೆಲ್ಲಾ ನೋಡಿದಾಗ ಅದೆಲ್ಲಾ ಸಿಲ್ಲಿ ಎನಿಸುತ್ತದೆ" ಎಂದು ಸುದೀಪ್ ವಿವರಿಸಿದ್ದಾರೆ.

ಡಿಸೆಂಬರ್ 20ಕ್ಕೆ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ತೆರೆಗೆ ಬರ್ತಿದೆ. ಬಳಿಕ ಡಿಸೆಂಬರ್ 25ಕ್ಕೆ 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಲಿದೆ. ಎರಡೂ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗಪ್ಪಳಿಸಲಿವೆ. ವರ್ಷದ ಬಹುನಿರೀಕ್ಷಿತ ಸಿನಿಮಾಗಳಿವು. ಬಹುಕೋಟಿ ವೆಚ್ಚದಲ್ಲಿ ಚಿತ್ರಗಳು ಮೂಡಿ ಬಂದಿವೆ.

'ಮ್ಯಾಕ್ಸ್' ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳಿನ ಕಲೈಪುಲಿ ಎಸ್. ತನು ಹಣ ಹೂಡಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಅಜನೀಶ್ ಸಂಗೀತ ಚಿತ್ರಕ್ಕಿದೆ.

ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ 'ಯುಐ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಹಳ ದಿನಗಳ ನಂತರ ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ತಮ್ಮ ವಿಭಿನ್ನ ಶೈಲಿಯಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಟೀಸರ್, ಸಾಂಗ್ಸ್‌ನಲ್ಲೇ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.

More from Filmibeat

English summary
UI vs Max: Sudeep says the clash doesn't bother him, Upendra Also knows everything
Read more about: max ui sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X