ಶೀಘ್ರದಲ್ಲೇ ಬಣ್ಣ ಹಚ್ಚಲಿದ್ದಾರೆ ಸುದೀಪ್ ಪುತ್ರಿ ಸಾನ್ವಿ; ಹೇಗಿದೆ ಗೊತ್ತಾ ತಯಾರಿ?

By ಫಿಲ್ಮಿಬೀಟ್ ಡೆಸ್ಕ್

ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಸದ್ಯ ಕಿಚ್ಚನ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ತಮ್ಮದೇ ಬ್ಯಾನರ್‌ನಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಹೀರೊ ಆಗುತ್ತಿದ್ದಾರೆ.

ಸುದೀಪ್ ಪುತ್ರಿ ಸಾನ್ವಿ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಗಾಯಕಿಯಾಗಿ ಆಕೆ ಈಗಾಗಲೇ ಎಲ್ಲರಿಗೂ ಪರಿಚಿತರಾಗಿದ್ದಾರೆ. ಇತ್ತೀಚೆಗೆ ಸರಿಗಮಪ ವೇದಿಕೆಯಲ್ಲಿ ಸಾನ್ವಿ ಗಾಯನಕ್ಕೆ ವೀಕ್ಷಕರು ಮನಸೋತಿದ್ದರು. ತಂದೆ-ತಾಯಿಯ ಎದುರು ಹಾಡು ಹಾಡಿ ಸೈ ಎನಿಸಿಕೊಂಡಿದ್ದರು. ತಂದೆ- ಮಗಳ ಬಾಂಧವ್ಯದ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Max actor Kichcha Sudeep s daughter Sanvi s Video From Acting School Goes Viral

'ಜಸ್ಟ್‌ ಮಾತ್‌ಮಾತಲ್ಲಿ' ಹಾಡಿಗೆ ದನಿಯಾಗಿ ಸಾನ್ವಿ ಸುದೀಪ್ ಮೋಡಿ ಮಾಡಿದ್ದಾರೆ. ಕಿಚ್ಚ ಕೂಡ ನಟನೆ ಮಾತ್ರವಲ್ಲ ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ತಾನಾಗಿಯೇ ಸಾನ್ವಿ ಹಾಡುವುದನ್ನು ಕಲಿತಿದ್ದಾರೆ. ಇಂಗ್ಲೀಷ್ ಹಾಡುಗಳನ್ನು ಹಾಡಿ ಆಗಾಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. 'ಜಿಮ್ಮಿ' ಚಿತ್ರದ ಟೈಟಲ್ ಟೀಸರ್‌ಗೂ ದನಿಯಾಗಿದ್ದರು. ಇದೆಲ್ಲದರ ನಡುವೆ ಸಾನ್ವಿ ಬಣ್ಣ ಹಚ್ಚುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.

ಸಾನ್ವಿ ಜೀ ಕನ್ನಡ ಸರಿಗಮಪ ವೇದಿಕೆಗೆ ಬಂದು ಹೋದ ಬೆನ್ನಲ್ಲೇ ಆಕೆಯ ಆಕ್ಟಿಂಗ್ ಕಲಿಕೆಯ ವೀಡಿಯೊವೊಂದು ವೈರಲ್ ಆಗುತ್ತಿದೆ. ಇದು ಹೈದರಾಬಾದ್‌ನಲ್ಲಿರುವ 'ಅನ್ನಪೂರ್ಣ ಕಾಲೇಜ್ ಆಫ್ ಫಿಲ್ಮ್ ಅಂಡ್ ಮೀಡಿಯಾ' ಆಕ್ಟಿಂಗ್ ಸ್ಕೂಲ್ ವೀಡಿಯೋ. ತೆಲುಗು ನಟ ನಾಗಾರ್ಜುನ ಅವರ ಒಡೆತನದ ಸಂಸ್ಥೆ ಇದು. ಅಲ್ಲಿ ಕೆಲ ತಿಂಗಳ ಹಿಂದೆ ಸಾನ್ವಿ ನಟನೆ ಕಲಿತ್ತಿರುವಂತೆ ಕಾಣುತ್ತಿದೆ.

ರಫ್ ಅಂಡ್ ಟಫ್ ಲುಕ್‌ನಲ್ಲಿ ಗನ್ ಹಿಡಿದು ಕಿಡಿಗೇಡಿಯೊಬ್ಬನ ಕೆನ್ನೆಗೆ ಬಾರಿಸಿ ಡೈಲಾಗ್ ಹೊಡೆಯುವಂತವ ಸನ್ನಿವೇಶದಲ್ಲಿ ಸಾನ್ವಿ ನಟಿಸಿದ್ಧಾರೆ. ಇದ್ದಕ್ಕಿಂದಂತೆ ಈಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೆಯುತ್ತಿದೆ. ವೀಡಿಯೋ ನೋಡಿದವರು ಖಡಕ್ ನಟನೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದಷ್ಟು ಬೇಗ ಚಿತ್ರರಂಗಕ್ಕೆ ಬನ್ನಿ ಎಂದು ಶುಭ ಕೋರುತ್ತಿದ್ದಾರೆ.

ಸಾನ್ವಿ ಈವರೆಗೆ ಬಣ್ಣ ಹಚ್ಚುವ ಬಗ್ಗೆ ಮಾತನಾಡಿಲ್ಲ. ಸುದೀಪ್ ಕೂಡ ಮಗಳು ಚಿತ್ರರಂಗಕ್ಕೆ ಬರುವ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ ಸಾನ್ವಿಗೂ ನಟನೆಯ ಕಡೆ ಒಲವು ಇರುವಂತೆ ಕಾಣುತ್ತಿದೆ. ಅದಕ್ಕಾಗಿಯೇ ಆಕ್ಟಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದಾರೆ ಎನ್ನಲಾಗ್ತಿದೆ. ಹೈದರಾಬಾದ್‌ನಲ್ಲಿ 'ಅನ್ನಪೂರ್ಣ ಕಾಲೇಜ್ ಆಫ್ ಫಿಲ್ಮ್ ಅಂಡ್ ಮೀಡಿಯಾ' ಸಂಸ್ಥೆ ಬಹಳ ಜನಪ್ರಿಯತೆ ಸಾಧಿಸಿದೆ. ಚಿತ್ರರಂಗಕ್ಕೆ ಬರುವ ಕನಸನ್ನು ಹೊತ್ತು ಸಾಕಷ್ಟು ಜನ ಅಲ್ಲಿ ಕಲಿಯುತ್ತಿದ್ದಾರೆ. ಅಲ್ಲೇ ಸಾನ್ವಿ ಕಲಿತಿರುವಂತೆ ಕಾಣುತ್ತದೆ.

'ವಿಕ್ರಾಂತ್ ರೋಣ' ಚಿತ್ರದ ಚಿತ್ರೀಕರಣದ ವೇಳೆ ಅನ್ನಪೂರ್ಣ ಸ್ಟುಡಿಯೋದಲ್ಲಿ ನಟ ಸುದೀಪ್ ಬಹಳ ದಿನ ಕಳೆದಿದ್ದರು. ಅಲ್ಲೇ ಸೆಟ್ ಹಾಕಿ ಸಾಕಷ್ಟು ಚಿತ್ರೀಕರಣ ನಡೆಸಲಾಗಿತ್ತು. ಆ ಸಮಯದಲ್ಲಿ ಈ ಆಕ್ಟಿಂಗ್ ಸ್ಕೂಲ್ ಬಗ್ಗೆ ಸಾನ್ವಿ ಅವರಿಗೆ ಗೊತ್ತಾಯಿತು ಎನಿಸುತ್ತಿದೆ. ಎಷ್ಟು ದಿನ ಕೋರ್ಸ್ ಅದು, ಸುದೀಪ್ ಪುತ್ರಿ ಎಷ್ಟು ದಿನ ಅಲ್ಲಿ ಕಲಿತರು ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಾನ್ವಿ ಸುದೀಪ್ ಆಗಾಗ್ಗೆ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಸ್ಪೆಷಲ್ ಫೋಟೊಶೂಟ್ ಮಾಡಿಸಿದ್ದರು. ಆ ಫೋಟೊಗಳು ಸಖತ್ ವೈರಲ್ ಆಗಿತ್ತು. ಒಟ್ಟಾರೆ ಸರಿಗಮಪ ವೇದಿಕೆಯಲ್ಲಿ ಸಾನ್ವಿ ಗಾಯನವನ್ನು ನೋಡಿದ ಅಭಿಮಾನಿಗಳು ಆದಷ್ಟು ಬೇಗ ಚಿತ್ರರಂಗಕ್ಕೆ ಬನ್ನಿ ಎಂದು ಕೋರುತ್ತಿದ್ದಾರೆ.

More from Filmibeat

English summary
Buzz; Actor Sudeep and Priya's daughter Sanvi to make her Sandalwood debut soon?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X