'ಕಾಟೇರ' ದಾಖಲೆ ಮುರಿಯುವಲ್ಲಿ ಹಿಂದೆ ಬಿದ್ದ 'ಮ್ಯಾಕ್ಸ್'
ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಭಾರೀ ಸದ್ದು ಮಾಡಿದ್ದ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಈ ವರ್ಷ ತೆರೆಕಂಡ ಕನ್ನಡ ಸಿನಿಮಾಗಳಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ತನ್ನದಾಗಿಸಿಕೊಂಡಿದೆ.
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ಕಳೆದ ವಾರ ತೆರೆಕಂಡು ಗಮನ ಸೆಳೆದಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸಿನಿಮಾ 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 'ಯುಐ' ಆರ್ಭಟದ ನಡುವೆಯೂ 'ಮ್ಯಾಕ್ಸ್' ಮೇನಿಯಾ ಜೋರಾಗಿದೆ. ವರ್ಷದ ಕೊನೆಗೆ ಬಂದ ಎರಡೂ ಸಿನಿಮಾಗಳು ಗೆದ್ದು ಸ್ಯಾಂಡಲ್‌ವುಡ್‌ನಲ್ಲಿ ಸಂತಸ ಮೂಡುವಂತೆ ಮಾಡಿವೆ.

ಇಂಡಸ್ಟ್ರಿ ಟ್ರೇಡಿಂಗ್ ವೆಬ್ ಪೋರ್ಟಲ್ sacnilk.com ವರದಿ ಪ್ರಕಾರ 'ಮ್ಯಾಕ್ಸ್' ಸಿನಿಮಾ ಮೊದಲ ದಿನ 8.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳ ಮಳೆ ಸುರಿಸುತ್ತಿದ್ದಾರೆ. ಮುಖ್ಯವಾಗಿ 'ಕಾಟೇರ' vs 'ಮ್ಯಾಕ್ಸ್' ಎನ್ನುವ ಚರ್ಚೆ ಜೋರಾಗಿದೆ.
ಕಳೆದ ವರ್ಷ ಹೆಚ್ಚು ಕಮ್ಮಿ ಇದೇ ಸಮಯಕ್ಕೆ ದರ್ಶನ್ ನಟನೆಯ 'ಕಾಟೇರ' ಸಿನಿಮಾ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿನಿಮಾ ಅಂದಾಜು 100 ಕೋಟಿ ರೂ. ಕಲೆಕ್ಷನ್ ಮಾಡಿದ್ದಾರೆ ಚರ್ಚೆ ನಡೆದಿತ್ತು. ಇನ್ನು ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಇದೇ sacnilk.com ಪೋರ್ಟಲ್ ಮೊದಲ ದಿನ 'ಕಾಟೇರ' ಬರೋಬ್ಬರಿ 11 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿ ಮಾಡಿತ್ತು. ಆ ಲೆಕ್ಕದಲ್ಲಿ 'ಮ್ಯಾಕ್ಸ್' ಸಿನಿಮಾ ಹಿಂದೆ ಉಳಿದಿದೆ.
ಬುಕ್‌ಮೈಶೋನಲ್ಲಿ ಇತ್ತೀಚೆಗೆ ಎಷ್ಟು ಟಿಕೆಟ್ ಬುಕ್ ಆಗುತ್ತದೆ ಎನ್ನುವ ಮಾಹಿತಿ ಸಿಗುತ್ತಿದೆ. ಹಾಗಾಗಿ ಅಡ್ವಾನ್ಸ್ ಬುಕ್ಕಿಂಗ್, ಮೊದಲ ದಿನದ ಬುಕ್ಕಿಂಗ್ ಹೀಗೆ ಎಲ್ಲದರ ಬಗ್ಗೆಯೂ ಅಭಿಮಾನಿಗಳು ತಾಳೆ ಹಾಕಿ ನೋಡುತ್ತಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್ ಈ ವಿಚಾರದಲ್ಲಿ 'ಮ್ಯಾಕ್ಸ್' ಈ ವರ್ಷದ ನಂಬರ್ 1 ಸಿನಿಮಾ ಎನಿಸಿಕೊಂಡಿದೆ. ಚಿತ್ರದ ಮೊದಲ ಪ್ರದರ್ಶನ ಆರಂಭವಾಗುವ ಮುನ್ನ 1 ಲಕ್ಷದ 8 ಸಾವಿರ ಟಿಕೆಟ್ ಬುಕ್ ಆಗಿತ್ತು.
ಕ್ರಿಸ್‌ಮಸ್ ಹಬ್ಬದ ರಜೆ 'ಮ್ಯಾಕ್ಸ್' ಚಿತ್ರಕ್ಕೆ ವರವಾಗಿತ್ತು. ಆದರೂ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ 'ಕಾಟೇರ'(1 ಲಕ್ಷದ 30 ಸಾವಿರ) ದಾಖಲೆ ಮುರಿಯಲಿಲ್ಲ ಎಂದು ದರ್ಶನ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಮೊದಲ ದಿನ ಬುಕ್ಕಿಂಗ್ ಲೆಕ್ಕವೂ ಈಗ ನಡೀತಿದೆ. ಮೊದಲ ದಿನ 'ಕಾಟೇರ' ಚಿತ್ರಕ್ಕೆ 1 ಲಕ್ಷದ 4 ಸಾವಿರ ಟಿಕೆಟ್ ಬುಕ್ ಆಗಿತ್ತು. 'ಮ್ಯಾಕ್ಸ್' ಚಿತ್ರದ 99 ಸಾವಿರ ಟಿಕೆಟ್ ಮಾತ್ರ ಮಾರಾಟವಾಗಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಒಟ್ಟಾರೆ ಮೊದಲ ದಿನ 'ಕಾಟೇರ' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಸೇರಿ 2 ಲಕ್ಷದ 37 ಸಾವಿರ ಟಿಕೆಟ್ ಬುಕ್ ಆಗಿತ್ತು. ಆದರೆ 'ಮ್ಯಾಕ್ಸ್' ಚಿತ್ರಕ್ಕೆ 2 ಲಕ್ಷದ 8 ಸಾವಿರ ಟಿಕೆಟ್ ಮಾತ್ರ ಮಾರಾಟವಾಗಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಕಾಟೇರ' ಚಿತ್ರ ಬಿಡುಗಡೆ ದಿನ ರಜೆ ಇರಲಿಲ್ಲ. ಆದರೆ 'ಮ್ಯಾಕ್ಸ್' ಚಿತ್ರಕ್ಕೆ ಕ್ರಿಸ್‌ಮಸ್ ರಜೆ ಇತ್ತು ಎನ್ನುವುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ.
ವಾರದ ದಿನವಾಗಿರುವುದರಿಂದ 2ನೇ ದಿನ 'ಮ್ಯಾಕ್ಸ್' ಬುಕ್ಕಿಂಗ್ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಸಂಜೆ ಮೇಲೆ ಶೋಗಳು ಹೌಸ್‌ಫುಲ್ ಆಗುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲಿ ಸಿನಿಮಾ ಮತ್ತೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.


Click it and Unblock the Notifications











