Max Collection Day 11; ಶನಿವಾರ ಡಬಲ್ ಆಯ್ತು ಕಲೆಕ್ಷನ್; 'ಮ್ಯಾಕ್ಸ್' ಓಟಕ್ಕೆ ಬ್ರೇಕ್ ಹಾಕುವವರಿಲ್ಲ

ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾದ 'ಮ್ಯಾಕ್ಸ್' ಕಲೆಕ್ಷನ್ 2ನೇ ವಾರವೂ ಜೋರಾಗಿದೆ. ವಾರದ ದಿನಗಳಲ್ಲಿ ಕೊಂಚ ಕಮ್ಮಿ ಆಗಿದ್ದರೂ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಸದ್ದು ಮಾಡ್ತಿದೆ. ಬೇರೆ ಯಾವುದೇ ಹೊಸ ಸಿನಿಮಾಗಳು ಬರದ ಕಾರಣ ಕಿಚ್ಚ ಆರ್ಭಟ ಅನಾಯಾಸವಾಗಿ ಮುಂದುವರೆದಿದೆ.

ಸಂಕ್ರಾಂತಿ ಸಂಭ್ರಮದಲ್ಲಿ ಕನ್ನಡದಲ್ಲಿ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿದೆ. 'ಸಂಜು ವೆಡ್ಸ್ ಗೀತಾ-2' ಹಾಗೂ 'ಛೂಮಂತರ್' ಚಿತ್ರಗಳು ಈ ಶುರುವಾರ ತೆರೆಗೆ ಬರಲಿವೆ. ಆದರೂ 'ಮ್ಯಾಕ್ಸ್' ಚಿತ್ರ 3ನೇ ವಾರವೂ ಭರ್ಜರಿ ಪ್ರದರ್ಶನ ಕಾಣುವ ಸುಳಿವು ಸಿಗುತ್ತಿದೆ. ಈಗಾಗಲೇ 11 ದಿನ ಪೂರೈಸಿ 2 ಭಾನುವಾರಕ್ಕೆ ಸಿನಿಮಾ ಕಾಲಿಟ್ಟಿದೆ. 'ಮ್ಯಾಕ್ಸ್' ಮ್ಯಾಕ್ಸಿಮಮ್ ಮನರಂಜನೆಗೆ ಪ್ರೇಕ್ಷಕರು ಮನಸೋತಿದ್ದಾರೆ.

Max box office Day 11 Sudeep starrer Records A 100 Jump On Second Saturday

'ಮ್ಯಾಕ್ಸ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಚಿತ್ರದ ಗೆಲುವು ಚಿತ್ರತಂಡಕ್ಕೆ ಖುಷಿ ತಂದಿದೆ. ವಿತರಕರು ಈಗಾಗಲೇ ಲಾಭ ನೋಡಲು ಆರಂಭಿಸಿದ್ದಾರೆ. ಸಿನಿಮಾ ಶೀಘ್ರದಲ್ಲೇ 50 ಕೋಟಿ ಗ್ರಾಸ್ ಕಲೆಕ್ಷನ್ ಕ್ಲಬ್ ಸೇರುತ್ತದೆ ಎನ್ನುವ ನಿರೀಕ್ಷೆಯಿದೆ. ಸುದೀಪ್ ಸಿನಿಮಾ ಪ್ರಚಾರ ಮುಂದುವರೆಸಿದ್ದಾರೆ. ಸಕ್ಸಸ್ ಸಂಭ್ರಮದಲ್ಲಿ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಜೀಕನ್ನಡ ಸರೆಗಮಪ ವೇದಿಕೆಗೂ ಬಂದಿದ್ದಾರೆ.

ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ 'ಮ್ಯಾಕ್ಸ್' ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಆದರೆ ತಮಿಳು, ತೆಲುಗಿನಲ್ಲಿ ದರ್ಬಾರ್ ಕೊಂಚ ತಗ್ಗಿದೆ. ಆದರೂ ಚೆನ್ನೈನಲ್ಲಿ ವೀಕೆಂಡ್ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಎರಡು ಶೋ ಫಾಸ್ಟ್ ಫಿಲ್ಲಿಂಗ್ ನಡೀತಿದೆ. ಹೈದರಾಬಾದ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಸಿನಿಮಾ ಪ್ರದರ್ಶನ ಮುಂದುವರೆದಿದೆ. ಕರ್ನಾಟಕದಲ್ಲಿ 'ಮ್ಯಾಕ್ಸ್' ಆರ್ಭಟ ಎಗ್ಗಿಲ್ಲದೇ ಸಾಗಿದೆ.

ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ 'ಮ್ಯಾಕ್ಸ್' ಕಲೆಕ್ಷನ್ ಡಬಲ್ ಆಗಿದೆ. sacnilk.com ವರದಿ ಪ್ರಕಾರ 'ಮ್ಯಾಕ್ಸ್' 11 ದಿನದ ನೆಟ್ ಕಲೆಕ್ಷನ್ 40 ಕೋಟಿ ದಾಟಿದೆ. ಶುಕ್ರವಾರ 1 ಕೋಟಿ ಗಳಿಸಿದ ಸಿನಿಮಾ ಶನಿವಾರ ಅಂದಾಜು 2 ಕೋಟಿ ಬಾಚಿರುವ ಲೆಕ್ಕಾಚಾರ ಇದೆ. ಒಟ್ಟು 40.95 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ.

ಭಾನುವಾರ ಸಹಜವಾಗಿಯೇ ರಜೆ ಇರುವುದರಿಂದ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಇನ್ನು ಬರೀ ಬುಕ್‌ಮೈ ಶೋನಲ್ಲಿ 7 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿ 'ಮ್ಯಾಕ್ಸ್' ದಾಖಲೆ ಬರೆದಿದೆ. ಸುದೀಪ್ ಕರಿಯರ್‌ನಲ್ಲೇ ಇದು ದೊಡ್ಡ ಹಿಟ್ ಎಂದು ಬಣ್ಣಿಸಲಾಗುತ್ತಿದೆ. ಅದು ಕೂಡ ಕೇವಲ 11 ದಿನಕ್ಕೆ ಎನ್ನುವುದು ವಿಶೇಷ. 'ವಿಕ್ರಾಂತ್ ರೋಣ' ಚೆನ್ನಾಗಿ ಕಲೆಕ್ಷನ್ ಮಾಡಿದ್ದರೂ ಆ ಚಿತ್ರದ ಬಜೆಟ್ ಹೆಚ್ಚಾಗಿತ್ತು.

'ಮ್ಯಾಕ್ಸ್' ಚಿತ್ರದ 11 ದಿನಗಳ ಗ್ರಾಸ್ ಕಲೆಕ್ಷನ್ 43 ಕೋಟಿ ದಾಟಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಸ್ಯಾಟಲೈಟ್ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದೆ. ಡಿಜಿಟಲ್ ರೈಟ್ಸ್ ಯಾರಿಗೆ ಸಿಕ್ಕಿದೆ ಎನ್ನುವ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ. 'ಮ್ಯಾಕ್ಸ್' ಚಿತ್ರದ ಆಡಿಯೋ ರೈಟ್ಸ್ ಕೂಡ ಒಳ್ಳೆ ಮೊತ್ತಕ್ಕೆ ಮಾರಾಟವಾಗಿತ್ತು.

'ಮ್ಯಾಕ್ಸ್' ಭರ್ಜರಿ ಸಕ್ಸಸ್ ಸಹಜವಾಗಿಯೇ ಸುದೀಪ್ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿದೆ. ಮುಂದೆ ಯಾವ ಸಿನಿಮಾ ಮಾಡುತ್ತಾರೆ? ಎನ್ನುವ ಕುತೂಹಲ ಮೂಡುವಂತಾಗಿದೆ. ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಸಿನಿಮಾ ಶೀಘ್ರದಲ್ಲೇ ಸೆಟ್ಟೇರುವ ಸುಳಿವು ಸಿಗುತ್ತಿದೆ. ಚೇರನ್ ಜೊತೆ ಒಂದು ಸಿನಿಮಾ ಬರಬೇಕಿದೆ. ಬಳಿಕ ಸ್ವತಃ ಸುದೀಪ್ ನಿರ್ದೇಶಿಸಿ ನಟಿಸುವ ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ. ಮುಂದೆ ಹೆಚ್ಚು ಹೆಚ್ಚು ಸಿನಿಮಾ ಮಾಡುವುದಾಗಿ ಕಿಚ್ಚ ಭರವಸೆ ನೀಡಿದ್ದಾರೆ.

More from Filmibeat

English summary
Max box office Day 11; Unstoppable 2nd week for Kichcha Sudeep's film;
Read more about: max sudeep box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X