Max Boxoffice Day 6; ಸೋಮವಾರದ ಪರೀಕ್ಷೆ ಪಾಸ್ ಆದ್ನಾ 'ಮ್ಯಾಕ್ಸ್'?; ಡಲ್ಲಾಗಿದ್ದು ಎಲ್ಲಿ?

ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್‌' ಭರ್ಜರಿಯಾಗಿ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಈ ವರ್ಷದ ಸೂಪರ್ ಹಿಟ್ ಕನ್ನಡ ಸಿನಿಮಾಗಳ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕಿಚ್ಚನ ಮ್ಯಾಕ್ಸಿಮಮ್ ಮನರಂಜನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಫಸ್ಟ್ ವೀಕೆಂಡ್ ಮುಗಿಸಿ ಸೋಮವಾರ ಪರೀಕ್ಷೆ ದಾಟಿ 'ಮ್ಯಾಕ್ಸ್' ಸದ್ದು ಮಾಡ್ತಿದ್ದಾನೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ ತೆರೆಗೆ ಬಂದಿತ್ತು. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆಕ್ಷನ್ ಅದಕ್ಕೆ ದೊಡ್ಡ ಶಕ್ತಿಯಾಗಿದೆ. ಬಹಳ ದಿನಗಳ ಬಳಿಕ ಕಿಚ್ಚನನ್ನು ರಗಡ್ ಅವತಾರದಲ್ಲಿ ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಲಾಜಿಕ್ ಎಲ್ಲಾ ಪಕ್ಕಕ್ಕಿಟ್ಟು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

Max box office Day 6 Kichcha Sudeep starrer sees drop on first Monday

ಮೊದಲ ದಿನವೇ 'ಮ್ಯಾಕ್ಸ್' ಸಿನಿಮಾ ಅಂದಾಜು 14ರಿಂದ 15 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಬಳಿಕ ಡಿಸೆಂಬರ್ 28ರಂದು ಒಳ್ಳೆ ಗಳಿಕೆ ಆಗಿತ್ತು. ಶನಿವಾರ, ಭಾನುವಾರ ಸಿನಿಮಾ ಭರ್ಜರಿ ಸೌಂಡ್ ಮಾಡಿತ್ತು. ಆದರೆ ಸೋಮವಾರ ಕೊಂಚ ಡಲ್ಲಾಗಿದೆ. ವಾರದ ದಿನ ಆಗಿರುವುದರಿಂದ ಸಹಜವಾಗಿ ಈ ರೀತಿ ಆಗುತ್ತದೆ. ಜನ ರಜೆ ಮುಗಿಸಿ ಕೆಲಸ, ಕಾರ್ಯಗಳತ್ತ ಮುಖ ಮಾಡುತ್ತಾರೆ. ಹಾಗಾಗಿ ಎಲ್ಲಾ ಚಿತ್ರಗಳ ವಿಚಾರದಲ್ಲೂ ಇದು ಸರ್ವೇ ಸಾಮಾನ್ಯ.

ಹೊಸ ವರ್ಷದ ಸಂಭ್ರಮದಲ್ಲಿ 'ಮ್ಯಾಕ್ಸ್' ಸಿನಿಮಾ ಗಳಿಕೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು 'ಮ್ಯಾಕ್ಸ್' ಬಿಡುಗಡೆಗೂ 5 ದಿನ ಮುನ್ನ 'ಯುಐ' ಸಿನಿಮಾ ತೆರೆಗೆ ಬಂದಿತ್ತು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಫಸ್ಟ್ ವೀಕೆಂಡ್ ದಾಖಲೆಯ ಗಳಿಕೆ ಮಾಡಿತ್ತು. ಆದರೆ 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಸದ್ದು ಕೊಂಚ ಕಮ್ಮಿ ಆಗಿದೆ.

ನೆಟ್‌ ಕಲೆಕ್ಷನ್ ವಿಚಾರದಲ್ಲಿ 6 ದಿನಕ್ಕೆ 'ಮ್ಯಾಕ್ಸ್' ಸಿನಿಮಾ 'ಯುಐ' ಚಿತ್ರವನ್ನು ಹಿಂದಿಕ್ಕಿದೆ. sacnilk.com ವರದಿ ಪ್ರಕಾರ 6 ದಿನಕ್ಕೆ 'ಮ್ಯಾಕ್ಸ್' ಸಿನಿಮಾ ಭಾರತದಲ್ಲಿ 30.15 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. 'ಯುಐ' ಸಿನಿಮಾ 11 ದಿನಕ್ಕೆ 30. 10 ಕೋಟಿ ರೂ. ಮಾತ್ರ ಗಳಿಸಿದೆ. 6ನೇ ದಿನವಾದ ಸೋಮವಾರ 'ಮ್ಯಾಕ್ಸ್' 2.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನುವ ಅಂದಾಜಿದೆ.

Max box office Day 6 Kichcha Sudeep starrer sees drop on first Monday

ಕ್ರಿಸ್‌ಮಸ್ ಹಬ್ಬದ ದಿನ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿತ್ತು. ರಜೆಯ ಕಾರಣಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಮರುದಿನ ಯಾವುದೇ ರಜೆ ಇಲ್ಲದ ಕಾರಣ ಮತ್ತೆ ಗಳಿಕೆ ಕಮ್ಮಿ ಆಗಿತ್ತು. 27ರ ಸರ್ಕಾರಿ ರಜೆ ದಿನ ಮತ್ತೆ ಚೇತರಿಕೆ ಕಂಡಿತ್ತು. ಬಳಿಕ ವೀಕೆಂಡ್ ಕಲೆಕ್ಷನ್ ಚೆನ್ನಾಗಿತ್ತು. ಭಾನುವಾರ ಸಿನಿಮಾ ಅಕ್ಷರಶಃ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹಾಗಾಗಿ ಸೋಮವಾರ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ರೆಸ್ಪಾನ್ಸ್ ಕಮ್ಮಿ ಆಗಿತ್ತು. ಆದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಮ್ಯಾಕ್ಸ್' ಮ್ಯಾಜಿಕ್ ನಡೀತಿದೆ.

'ಮ್ಯಾಕ್ಸ್' ಸಿನಿಮಾ ಸಕ್ಸಸ್ ಚಿತ್ರತಂಡಕ್ಕೆ ಖುಷಿ ತಂದಿದೆ. ಸಕ್ಸಸ್ ಮೀಟ್ ಮಾಡಿ ಸುದೀಪ್ ಮಾತನಾಡಿದ್ದಾರೆ. ಇನ್ನು ವಿಜಯತಯಾತ್ರೆಗೂ ಚಿತ್ರತಂಡ ಮುಂದಾಗಿದೆ. ನಗರದ ನರ್ತಕಿ ಚಿತ್ರಮಂದಿರದಿಂದ ಯಾತ್ರೆ ಆರಂಭವಾಗಲಿದೆ. ಸಿನಿಮಾ ಮೇಲೆ ಪ್ರೇಕ್ಷಕರ ತೋರಿದ ಪ್ರೀತಿಗೆ ಧನ್ಯವಾದ ತಿಳಿಸಲು ಸುದೀಪ್ ಮುಂದಾಗಿದ್ದಾರೆ. ಅಭಿಮಾನಿಗಳು 'ಮ್ಯಾಕ್ಸ್' ಪ್ರೀಕ್ವೆಲ್ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ ಅರ್ಜುನ್ ಮಹಾಕ್ಷಯ್ ಹಿಂದಿನ ಕಥೆ ತಿಳಿದುಕೊಳ್ಳಬಹುದು.

More from Filmibeat

English summary
Sudeep starrer Max beats Upendra's UI boxoffice collection on day 6
Read more about: max sudeep box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X