Max: ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಹೆಸರಲ್ಲಿ ಉಚಿತ ಆಂಬುಲೆನ್ಸ್ ಸೇವೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಆರಂಭವಾದಾಗಿನಿಂದ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಅದರ ಜೊತೆಗೆ ತಮ್ಮ ಮುಂದಿನ ಸಿನಿಮಾ 'ಮ್ಯಾಕ್ಸ್' ಚಿತ್ರದ ಶೂಟಿಂಗ್‌ನಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಬಗ್ಗೆ ಅಭಿಮಾನಿಗಳು ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನು, ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಕೂಡ 'ಮ್ಯಾಕ್ಸ್' ಸಿನಿಮಾ ಬಗ್ಗೆ ಸಂಪೂರ್ಣ ನಿರೀಕ್ಷೆ ಇಟ್ಟುಕೊಂಡಿದ್ದು, ಚಿತ್ರದ ಪ್ರಮೋಷನ್‌ಗೆ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ನಟ ಸುದೀಪ್ ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ನಟನ ದಾರಿಯಲ್ಲಿ ನಡೆಯುತ್ತಿದ್ದಾರೆ.

Max Movie: Actor Kichcha Sudeep Fans Start Free Ambulance Service

ಮ್ಯಾಕ್ಸ್ ಸಿನಿಮಾ ಹೆಸರಲ್ಲಿ ಆಂಬುಲೆನ್ಸ್ ಸೇವೆ

ನಟ ಕಿಚ್ಚ ಸುದೀಪ್ ತಮ್ಮ ನಟನೆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಸದ್ದಿಲ್ಲದೇ, ಕಷ್ಟ ಎಂದುಕೊಂಡು ಬಂದವರಿಗೆ ಸಹಾಯಹಸ್ತ ಕೂಡ ಚಾಚಿದ್ದಾರೆ. ಈಗಾಗಲೇ ತಮ್ಮ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಮಾಡಿರುವ ಸಹಾಯಗಳು ಜನರ ಕಣ್ಣಮುಂದಿವೆ. ಹಲವು ಗ್ರಾಮ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯದ ನೆರವು ನೀಡಿದ್ದಾರೆ.

ಕಿಚ್ಚನ ಹೆಸರಿನ ಟ್ರಸ್ಟ್ ಹೊರತಾಗಿ ಅವರ ಅಭಿಮಾನಿಗಳೇ ಸಂಸ್ಥಾಪಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಕೂಡ ಸಾವಿರಾರು ಜೀವಗಳ ಉಳಿವಿಗೆ ನೆರವಾಗಿದೆ. ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಪ್ರಾರಂಭಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಿದೆ. ಅದರಂತೆ ಈ ಟ್ರಸ್ಟ್ ಈಗ ಮ್ಯಾಕ್ಸ್ ಹೆಸರಿನ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದೆ.

Max Movie: Actor Kichcha Sudeep Fans Start Free Ambulance Service

ಆಂಬುಲೆನ್ಸ್ ಲೋಕಾರ್ಪಣೆ ಮಾಡಿದ ಕಿಚ್ಚ ಸುದೀಪ್

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ತಂದಿರುವ 'ಮಾಕ್ಸ್' ಹೆಸರಿನ ಆಂಬುಲೆನ್ಸ್ ಅನ್ನು ಕಿಚ್ಚ ಸುದೀಪ್ ಜನವರಿ 19 ರಂದು ಸಾವರ್ಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದ್ದಾರೆ. ಈ ಆಂಬ್ಯುಲೆನ್ಸ್ ಸೇವೆ ಸಹಾಯದ ನಿರೀಕ್ಷೆಯಲ್ಲಿರುವ ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸಲಿದೆ.

ಮ್ಯಾಕ್ಸ್ ಸಿನಿಮಾ

'ಮ್ಯಾಕ್ಸ್' ಕಿಚ್ಚ ನಟನೆಯ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಮ್ಯಾಕ್ಸ್ ಚಿತ್ರದಲ್ಲಿ ನಟ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್‌ನ ಖ್ಯಾತ ಡೈರೆಕ್ಟರ್‌ ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದಾರೆ. ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪ್ಪುಲಿ ಎಸ್ ಥಾನು ಹಣ ಹಾಕಿದ್ದಾರೆ.

ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಪುನರಾರಂಭವಾಗಿದ್ದು, ಈಗಾಗಲೇ ಚಿತ್ರೀಕರಣ ಮಾಡಲಾಗಿರುವ ಭಾಗಗಳಿಗೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ. ಮ್ಯಾಕ್ಸ್ ಒಂದು ವಿಭಿನ್ನ ಕಥೆ ಎನ್ನಲಾಗಿದೆ. ಮ್ಯಾಕ್ಸ್‌ ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇರಲಿದ್ದು, ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡು‌, ಕಾಮರಾಜ್, ಸುಕೃತಾ ವಾಗ್ಲೆ ಸೇರಿದಂತೆ ಹಲವರು ಪ್ರಮುಖ ನಟರು ನಟಿಸಿದ್ದಾರೆ.

More from Filmibeat

English summary
Kichcha Sudeep fans start free ambulance service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X