MAX Teaser: 'ಮ್ಯಾಕ್ಸ್' ಕಿಚ್ಚನ ಮ್ಯಾಕ್ಸಿಮಮ್ ಆಕ್ಷನ್ ಕಿಕ್; ಲಾಸ್ಟ್ ಪಂಚ್ ಮಾತ್ರ ಸಿಂಪ್ಲಿ ಸೂಪರ್
ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ 'ಮ್ಯಾಕ್ಸ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಅರ್ಜುನ್ ಮಹಾಕ್ಷಯ್ ಆಗಿ ಕಿಚ್ಚನ ಆರ್ಭಟ ಸಖತ್ ಕಿಕ್ ಕೊಡ್ತಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಎಂಟರ್ಟ್ರೈನರ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮ್ಯಾಕ್ಸ್' ಸಿನಿಮಾ ನಿರ್ಮಾಣವಾಗುತ್ತಿದೆ. ಜಬರ್ದಸ್ತ್ ಆಕ್ಷನ್ ಎಪಿಸೋಡ್ ಮಿಕ್ಸ್ ಮಾಡಿ ಟೀಸರ್ ಕಟ್ ಮಾಡಲಾಗಿದೆ. ಬಾ ಬಾ ಬ್ಲಾಕ್ ಶೀಪ್ ಎಂದು ಸುದೀಪ್ ಇಂಗ್ಲೀಷ್ ರೈಮ್ಸ್ ಅನ್ನು ಕೊಂಚ ಬದಲಿಸಿ ಹೇಳುವುದರೊಂದಿಗೆ ಟೀಸರ್ ಶುರುವಾಗುತ್ತದೆ. ಕಿಚ್ಚನ ಖಡಕ್ ವಾಯ್ಸ್ ಮತ್ತಷ್ಟು ಕಿಕ್ ಕೊಡುತ್ತದೆ. ನಾಯಕ- ನಾಯಕಿ, ವಿಲನ್ ಎನ್ನುವ ರೊಟೀನ್ ಸಬ್ಜೆಕ್ಟ್ ಬಿಟ್ಟು ವಿಭಿನ್ನವಾಗಿ ಕಥೆ ಹೇಳುತ್ತಿರುವುದು ಗೊತ್ತಾಗುತ್ತಿದೆ.

ನೆಗೆಟಿವ್ ರೋಲ್‌ನಲ್ಲಿ ತೆಲುಗು ನಟ ಸುನೀಲ್ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಪವರ್‌ಫುಲ್ ರೋಲ್‌ನಲ್ಲಿ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಮಿಂಚಿದ್ದಾರೆ. ಚೇತನ್ ಡಿಸೋಜಾ ಕಂಪೋಸ್ ಮಾಡಿರುವ ಆಕ್ಷನ್ ಸೀಕ್ವೆಲ್ ಮಜಾ ಕೊಡ್ತಿದೆ. ಕೊನೆಗೆ ಕಾಳಿ ವೇಷಧಾರಿಯ ಮುಂದೆ ಕಿಚ್ಚ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಾ ನಡೆದು ಬರುವುದಂತೂ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತದೆ.
ಅಜನೀಶ್ ಲೋಕನಾಥ್ ಬಿಜಿಎಂ ಜೊತೆಗೆ ಇಂಟ್ರೆಸ್ಟಿಂಗ್ ಆಗಿ ಟೀಸರ್ ಡಿಸೈನ್ ಮಾಡಲಾಗಿದೆ. ಮೇಕಿಂಗ್, ವಿಷ್ಯುವಲ್ಸ್ ಹುಬ್ಬೇರಿಸುವಂತಿದೆ. ಇನ್ನು ಕಿಚ್ಚನ ಪವರ್‌ಫುಲ್ ಪರ್ಫಾರ್ಮನ್ಸ್ ನೆಕ್ಸ್ಟ್ ಲೆವೆಲ್ ಎಂದೇ ಹೇಳಬೇಕು. 'ವಿಕ್ರಾಂತ್ ರೋಣ' ಬಂದೋಗಿ 2 ವರ್ಷಗಳ ಬಳಿಕ 'ಮ್ಯಾಕ್ಸ್' ಸಿನಿಮಾ ಬರ್ತಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಿದೆ. ಟೀಸರ್ ನೋಡಿದ ಮೇಲೆ ಮತ್ತಷ್ಟು ಕುತೂಹಲ ಮೂಡಿದೆ.
ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಹಾಬಲಿಪುರಂನಲ್ಲಿ ಸೆಟ್ ಹಾಕಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಸುದೀಪ್ ಜೊತೆಗೆ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಇದು ಎಂದು ಹೇಳಲಾಗುತ್ತಿದೆ. ಟೀಸರ್‌ನಲ್ಲಿ ಕಿಚ್ಚನ ಖಡಕ್ ಲುಕ್, ಆಕ್ಷನ್ ಮಾತ್ರ ಅಭಿಮಾನಿಗಳ ಗಮನ ಸೆಳೆದಿದೆ. ಟೀಸರ್ ನೋಡಿದವರು ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಟೀಸರ್ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಸುದೀಪ್ ಆಟಿಟ್ಯೂಡ್, ವಾಯ್ಸ್ ಪದೇ ಪದೇ ಟೀಸರ್ ನೋಡುವಂತೆ ಮಾಡುತ್ತಿದೆ.
ಟೀಸರ್ ಬಿಡುಗಡೆ ಆಗಿದ್ದರೂ ಸಿನಿಮಾ ರಿಲೀಸ್ ಡೇಟ್ ಮಾತ್ರ ರಿವೀಲ್ ಆಗಿಲ್ಲ. ಆದಷ್ಟು ಬೇಗ ಎಂದಷ್ಟೇ ಟೀಸರ್‌ನಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ ವೇಳೆಗೆ ಸಿನಿಮಾ ಬರಬಹುದು ಎನ್ನುವ ಅಂದಾಜಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಆ ಸಂಭ್ರಮ ಹೆಚ್ಚಿಸಲು ಸಿನಿಮಾ ತೆರೆಗೆ ಬಂದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











