twitter
    For Quick Alerts
    ALLOW NOTIFICATIONS  
    For Daily Alerts

    ಈ ತಿಂಗಳಿನಲ್ಲಿ ನಡೆಯುತ್ತೆ ಸುಮಲತಾ ಬದುಕಿನ 4 ಮಹಾ ಘಟನೆಗಳು!

    |

    Recommended Video

    ಈ ತಿಂಗಳು ಸುಮಲತಾ ಬಾಳಲ್ಲಿ ನಡೆಯಲಿದೆ 4 ಪ್ರಮುಖ ಘಟನೆಗಳು..!? | FILMIBEAT KANNADA

    ನಟಿ ಸುಮಲತಾಗೆ ಮಂಡ್ಯ ಚುನಾವಣಾ ಬಳಿಕ ಕೊಂಚ ಬಿಡುವು ಸಿಕ್ಕಿದೆ. ನಿರಂತರ ‌ಪ್ರಚಾರ ಕೆಲಸದ ನಡುವೆ ಈಗ ಫಲಿತಾಂಶಕ್ಕಾಗಿ ಅವರು ಕಾಯುತ್ತಿದ್ದಾರೆ.

    ಈ ತಿಂಗಳು ಸುಮಲತಾ‌ ಬದುಕಿನಲ್ಲಿ ಬಹಳ‌ ಮುಖ್ಯವಾಗಿದೆ. ಮೇ 23 ರಿಂದ 31 ವರೆಗೆ ಅಂದರೆ ಕೇವಲ 8 ದಿನಗಳಲ್ಲಿ ಅವರ ಬದುಕಿನ ನಾಲ್ಕು ಮಹಾ ಘಟನೆಗಳು ನಡೆಯುತ್ತದೆ. ಸಿನಿಮಾ, ರಾಜಕೀಯ ಹಾಗೂ ವೈಯಕ್ತಿಕ ಕಾರಣಗಳಿಂದ ಈ ತಿಂಗಳು ಸುಮಲತಾ ಪಾಲಿಗೆ ಬಹಳ ವಿಶೇಷವಾಗಿದೆ

    ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು? ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?

    ಈ ವರ್ಷದ ಮೇ ತಿಂಗಳು ಸುಮಲತಾ ಅವರಿಗೆ ಏಕೆ ಅಷ್ಟೊಂದು ಮುಖ್ಯ ಎನ್ನುವ ಕುತೂಹಲ ನಿಮಗೂ ಇದ್ಯಾ ಹಾಗಾದರೆ ಅದರ ಸಂಪೂರ್ಣ ವಿವರ ಇಲ್ಲಿದೆ...

    ಮೇ 23ಕ್ಕೆ ಚುನಾವಣಾ ಫಲಿತಾಂಶ

    ಮೇ 23ಕ್ಕೆ ಚುನಾವಣಾ ಫಲಿತಾಂಶ

    2019 ನೇ ಸಾಲಿನ ಲೋಕಸಭಾ ಚುನಾವಣಾ ಫಲಿತಾಂಶ ಮಾರ್ಚ್ 23 ರಂದು ಬರುತ್ತದೆ.‌ ಈ ಬಾರಿ ಎಲ್ಲರ ಕಣ್ಣು ಮಂಡ್ಯದ ಮೇಲೆ ಇದೆ. ನಿಖಿಲ್ ಕುಮಾರ್ ವಿರುದ್ಧ ಸುಮಲತಾ ಗೆದ್ದರೆ, ಅವರ ರಾಜಕೀಯ ಜೀವನದ ಅಧ್ಯಾಯ ಶುರು ಆಗಲಿದೆ. ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದ‌ ಸುಮಲತಾಗೆ ಈ ಫಲಿತಾಂಶ ಬಹಳ‌ ಮುಖ್ಯವಾಗಿದೆ.

    ಮೇ 23ಕ್ಕೆ ಫಲಿತಾಂಶ, ಮೇ 24ಕ್ಕೆ ಸುಮಲತಾ ಸಿನಿಮಾ ರಿಲೀಸ್ ಮೇ 23ಕ್ಕೆ ಫಲಿತಾಂಶ, ಮೇ 24ಕ್ಕೆ ಸುಮಲತಾ ಸಿನಿಮಾ ರಿಲೀಸ್

    ಮೇ 24ಕ್ಕೆ 'ಡಾಟರ್ ಆಫ್ ಪಾರ್ವತಮ್ಮ'

    ಮೇ 24ಕ್ಕೆ 'ಡಾಟರ್ ಆಫ್ ಪಾರ್ವತಮ್ಮ'

    ಸುಮಲತಾ ನಟನೆಯ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ಚುನಾವಣಾ ಫಲಿತಾಂಶದ‌ ನಂತರ ದಿನ ಅಂದರೆ ಮೇ 24 ರಂದು ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ಚಿತ್ರದ ನಾಯಕಿಯಾಗಿದ್ದರೂ, ಸಿನಿಮಾದಲ್ಲಿ ಸುಮಲತಾ ಪಾತ್ರಕ್ಕೆ ಅಷ್ಟೇ ಪ್ರಾಮುಖ್ಯತೆ ಇದೆ. ಇಲ್ಲಿ ಪಾರ್ವತಮ್ಮನಾಗಿ ಸುಮಲತಾ ಕಾಣಿಸಿಕೊಂಡಿದ್ದಾರೆ.

    ಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾ ಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾ

    ಮೇ 29ಕ್ಕೆ ಅಂಬಿ ಇಲ್ಲದ ಹುಟ್ಟುಹಬ್ಬ

    ಮೇ 29ಕ್ಕೆ ಅಂಬಿ ಇಲ್ಲದ ಹುಟ್ಟುಹಬ್ಬ

    ಮೇ 29 ನಟ ಅಂಬರೀಶ್ ಹುಟ್ಟುಹಬ್ಬ. ಪ್ರತಿ ವರ್ಷ ಕೂಡ ಅಭಿಮಾಗಳು ಹಾಗೂ ಕುಟುಂಬದ ಜೊತೆಗೆ ಹಬ್ಬ ಆಚರಿಸುತ್ತಿದ್ದ ರೆಬಲ್ ಸ್ಟಾರ್ ಈ ವರ್ಷ ಇಲ್ಲ. ಅಂಬಿ ಇಲ್ಲದ ಮೊದಲ ಹುಟ್ಟುಹಬ್ಬ ಈಗ ಸುಮಲತಾ ಮುಂದೆ ಬಂದಿದೆ. ‌ಪ್ರತಿ ವರ್ಷ ಸಂತೋಷ ನೀಡುತ್ತಿದ್ದ ಈ ದಿ‌ನ, ಈಗ ಅಂಬಿ ಇಲ್ಲದ ನೋವು ನೀಡುತ್ತಿದೆ.

    ಮೇ 31ಕ್ಕೆ ಮಗನ ಮೊದಲ ಚಿತ್ರ

    ಮೇ 31ಕ್ಕೆ ಮಗನ ಮೊದಲ ಚಿತ್ರ

    ಸುಮಲತಾ ಮಗ ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ 'ಅಮರ್' ಸಹ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಮೇ 31 ರಂದು ಸಿನಿಮಾ ಅಭಿಮಾನಿಗಳ‌ ಮುಂದೆ ಬರುತ್ತಿದೆ. ಸುಮಲತಾ ರಾಜಕೀಯ ಭವಿಷ್ಯ ಒಂದು ಕಡೆಯಾದರೆ, ಮಗ ಕೂಡ ಇದೇ ತಿಂಗಳು ಚಿತ್ರರಂಗಕ್ಕೆ ಮೊದಲ‌ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ 'ಅಮರ್' ಹಾಡುಗಳು ಹಿಟ್ ಆಗಿದೆ, ಸಿನಿಮಾದ ಮೇಲೆ ಕುತೂಹಲ ಹುಟ್ಟಿದೆ.

    English summary
    May month is very important for Sumalatha Ambareesh. Here is the four reasons.
    Monday, May 6, 2019, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X