ನೋಟ್ ಬ್ಯಾನ್ ಬಗ್ಗೆ ಪುನೀತ್ ರಾಜ್ ಕುಮಾರ್ ಸಿನಿಮಾ

ನಟ ಪುನೀತ್ ರಾಜ್ ಕುಮಾರ್ ತಮ್ಮದೆ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. 'ಕವಲುದಾರಿ' ಸಿನಿಮಾದ ನಂತರ ಎರಡನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಆ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ.

'ಮಾಯಾ ಬಜಾರ್' ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಸಿನಿಮಾ ಯಾವ ವಿಷಯದ ಬಗ್ಗೆ ಇದೆ ಎನ್ನುವುದು ಟೀಸರ್ ಮೂಲಕ ತಿಳಿದಿದೆ. ನೋಟ್ ಬ್ಯಾನ್ ಬಗ್ಗೆ ಸಿನಿಮಾದ ಕಥಾ ವಸ್ತು ಇದೆ. 2016 ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗದುಕೊಂಡ ನಗದು ಅಪಮೌಲ್ಯೀಕರಣ ನಿರ್ಧಾರದ ಮೇಲೆ ಚಿತ್ರದ ಕಥೆ ಮಾಡಲಾಗಿದೆ.

500 ಹಾಗೂ 1000 ರೂಪಾಯಿ ನೋಟ್ ಬ್ಯಾನ್ ಆದ ಸಂದರ್ಭ ಇಟ್ಟುಕೊಂಡು ಚಿತ್ರದ ಕೆಲವು ಪಾತ್ರಗಳು ಅದನ್ನು ಹೇಗೆ ನಿಬಾಯಿಸುತ್ತವೆ ಎನ್ನುವುದು ಚಿತ್ರದಲ್ಲಿ ತೋರಿಸಲಾಗಿದೆ. ಟೀಸರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಪಿ ಆರ್ ಕೆ ಆಡಿಯೋನಲ್ಲಿ ಟೀಸರ್ ಬಿಡುಗಡೆಯಾಗಿದೆ. ಟೀಸರ್ 95 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.

Mayabazar Kannada Movie Teaser Out

ನಟ ರಾಜ್ ಬಿ ಶೆಟ್ಟಿ, ಅಚ್ಚುತ್ ಕುಮಾರ್, ವಸಿಷ್ಟ ಸಿಂಹ, ಸುಧಾರಾಣಿ, ಚೈತ್ರ ರಾವ್, ಸಾಧು ಕೋಕಿಲ ಹಾಗೂ ಪ್ರಕಾಶ್ ರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ.

ರಾಧ ಕೃಷ್ಣ ರೆಡ್ಡಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಅಭಿಷೇಕ್ ಜಿ ಕಾಸರಗೋಡಿಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಟೆಕ್ನಿಕಲಿ ಟೀಸರ್ ತುಂಬ ಚೆನ್ನಾಗಿದೆ. ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರುತ್ತಿದೆ.

More from Filmibeat

English summary
Mayabazar kannada movie teaser out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X