»   » 'ಲೀಲಾ ಡಾರ್ಲಿಂಗ್' ಮಯೂರಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿ

'ಲೀಲಾ ಡಾರ್ಲಿಂಗ್' ಮಯೂರಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ನೂರು ದಿನಗಳನ್ನು ಪೂರೈಸಿದ 'ಕೃಷ್ಣ ಲೀಲಾ' ಚಿತ್ರದಲ್ಲಿ ಅಜೇಯ್ ರಾವ್ ಜೋಡಿಯಾಗಿ ಕಾಣಿಸಿಕೊಂಡಿದ್ದ ಬೇಬಿ ಡಾಲ್ ಮಯೂರಿ ಇಂದು (ಜುಲೈ 11) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.['ಕೃಷ್ಣ ಲೀಲಾ' ವಿಶೇಷಗಳನ್ನು ಬಿಚ್ಚಿಟ್ಟ ನಿರ್ದೇಶಕ ಶಶಾಂಕ್ ]

ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಮೊದಲ ಅಭಿನಯದ ಚಿತ್ರದಲ್ಲಿಯೇ ಗ್ರ್ಯಾಂಡ್ ಸಕ್ಸಸ್ ಕಂಡುಕೊಂಡ ಮಯೂರಿ ಅಲಿಯಾಸ್ ಅಶ್ವಿನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ತಮ್ಮ ಫ್ಯಾಮಿಲಿ ಹಾಗೂ ಹತ್ತಿರದ ಗೆಳೆಯರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಗಿ ಮಯೂರಿ ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ 'ಸೂಪರ್ ಸ್ಟಾರ್' ಜೆ,ಕೆಯ ಮುದ್ದಿನ 'ಹೆಂಡ್ತಿ' ಯಾಗಿ ನಟಿಸುತ್ತಿರುವ ಮಯೂರಿ ಈ ಧಾರವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು.

mayuri

ಕಿರುತೆರೆಯ ಮೂಲಕ ಅಭಿನೇತ್ರಿ ಎನಿಸಿಕೊಂಡ ಮಯೂರಿ ಹೆಚ್ಚಿನವರಿಗೆ ಅಶ್ವಿನಿಯಾಗಿಯೇ ಇಷ್ಷ ಆಗುತ್ತಾಳೆ. ಅಲ್ಲದೇ ಮಯೂರಿಗಿಂತ ಅಭಿಮಾನಿಗಳಿಗೆಲ್ಲಾ ಅಶ್ವಿನಿಯೇ ಹೆಚ್ಚು ಪರಿಚಯ.

ಇದೀಗ ತುಂಬಾ ಅಭಿಮಾನಿಗಳನ್ನು ಹೊಂದಿರುವ ಮಯೂರಿಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ. 'ಅಗ್ನಿ ಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ (ಸಿದ್ದಾರ್ಥ್) ಜೊತೆ ಮುಂದಿನ ಚಿತ್ರದಲ್ಲಿ ನಟಿಸಲು ಮಯೂರಿ ತಯಾರಿ ನಡೆಸುತ್ತಿದ್ದಾರೆ.

ಇದೀಗ ತಾನೇ ಬಿಗ್ ಸ್ಕ್ರೀನ್ ಪ್ರವೇಶ ಮಾಡಿರುವ ಮಯೂರಿ ಇನ್ನು ತುಂಬಾ ಎತ್ತರಕ್ಕೇರಲಿ ಎಂದು ಹಾರೈಸುತ್ತಾ, ಅವರಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

English summary
Kannada actress Mayuri, celebrated his birthday Today (July 11) with his family members and close friends. Mayuri played lead role in recent hit Kannada Movie 'Krishna leela', The movie is directed by Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada