ವಿರಾಟ್ ಮತ್ತು ಶ್ರೀಲೀಲಾ 'ಕಿಸ್'ಗೆ ಮಯೂರಿ ಸಾಥ್

ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಿಸ್ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈಗಾಗಲೆ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ವಿರಾಟ್ ನಾಯಕನಾಗಿ ಕಾಣಿಸಿಕೊಂಡರೆ ನಾಯಕಿಯಾಗಿ ಶ್ರೀಲೀಲಾ ಮಿಂಚಿದ್ದಾರೆ.

ಮೊದಲ ಚಿತ್ರದ ಟ್ರೈಲರ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸೆಳೆದಿದ್ದಾರೆ ವಿರಾಟ್ ಮತ್ತು ಶ್ರೀಲೀಲಾ. ವಿಶೇಷ ಅಂದ್ರೆ ಕಿಸ್ ಚಿತ್ರದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಹೌದು, ಕಿಸ್ ಚಿತ್ರಕ್ಕೆ ನಟಿ ಮಯೂರಿ ಸೇರಿಕೊಂಡಿದ್ದಾರೆ. ಅಂದ್ರೆ ಚಿತ್ರದಲ್ಲಿ ಮಯೂರಿ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಅಂತ ಅಂದ್ಕೋಬೇಡಿ.

ಶ್ರೀಲೀಲಾ ಪಾತ್ರಕ್ಕೆ ನಟಿ ಮಯೂರಿ ವಾಯ್ಸ್ ನೀಡಿದ್ದಾರೆ. ಶ್ರೀಲೀಲಾ ಮೊದಲ ಚಿತ್ರವಾದ್ದರಿಂದ ಅಭಿನಯದ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರಂತೆ. ಹಾಗಾಗಿ ಅವರ ಪಾತ್ರಕ್ಕೆ ಬಡ್ಡಿಂಗ್ ಮಾಡಿಲ್ಲ. ಶ್ರೀಲೀಲಾ ಪಾತ್ರಕ್ಕೆ ನಟಿ ಮಯೂರಿ ಬಳಿ ಡಬ್ ಮಾಡಿಸಿದೆ ಚಿತ್ರತಂಡ. ಮಯೂರಿ ಬಳಿ ಡಬ್ ಮಾಡುವಂತೆ ಕಿಸ್ ಚಿತ್ರತಂಡದ ಮನವಿ ಮಾಡಿಕೊಂಡಿದ್ದರಂತೆ. ಚಿತ್ರತಂಡದ ಮನವಿಗೆ ಒಪ್ಪಿ ಮಯೂರಿ ಧ್ವನಿ ನೀಡಿದ್ದಾರೆ.

Mayuri Dubs For Shree Leelas Character In Kiss Film

ವಿಶೇಷ ಅಂದ್ರೆ ಚಿತ್ರದ ಟ್ರೈಲರ್ ಗೆ ಧ್ರುವ ಸರ್ಜಾ ಧ್ವನಿ ನೀಡಿದ್ದರು. ಚಿತ್ರದ ಒಂದು ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಹಾಡುಗಳನ್ನು ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಸಾಕಷ್ಟು ಕಲಾವಿದರ ಶುಭಹಾರೈಕೆಯೊಂದಿಗೆ ಕಿಸ್ ಸಿನಿಮಾ ತೆರೆಗೆ ಬರುತ್ತಿದೆ. ಇದೆ ತಿಂಗಳ 27ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಅದೆ ದಿನ ಗಣೇಶ್ ಅಭಿನಯದ ಗೀತಾ ಸಿನಿಮಾ ಕೂಡ ತೆರೆಗೆ ಬರುತ್ತಿದೆ.

More from Filmibeat

English summary
Kannada actress Mayuri dubs for Shree Leela Character in kiss film. This movie is Directed by AP Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X