ಅಶ್ವಿನಿ ನಕ್ಷತ್ರ ಮಯೂರಿ ದಾಂಪತ್ಯದಲ್ಲಿ 'ಬಿರುಕು' ಅಂತೆ ಹೌದಾ..?

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು.

ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ. ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಣ್ಮರೆಯಾದರೆ ಸಾಕು, ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಮಯೂರಿ ಕ್ಯಾತರಿ ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ.

Mayuri Kyatari has finally responded to speculations about her divorce from spouse Arun

ಹೌದು, "ಅಶ್ವಿನಿ ನಕ್ಷತ್ರ''ದಿಂದ ಕರುನಾಡಿನೆಲ್ಲೆಡೆ ಮನೆ ಮಾತಾದವರು ಮಯೂರಿ ಕ್ಯಾತರಿ. ಆ ನಂತರ ''ಕೃಷ್ಣ ಲೀಲಾ '' ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಮಯೂರಿ ಈ 09 ವರ್ಷದಲ್ಲಿ ಒಂದು ಡಜನ್ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ. ಇಂಥ ಮಯೂರಿ ತಮ್ಮ ಪತಿ ಅರುಣ್ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂದು ಕೆಲವರು ಇತ್ತೀಚೆಗೆ ಹುಯಿಲೆಬ್ಬಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಯೂರಿ ಮದುವೆ ಕಣ್ಮರೆಯಾದ ಹಿನ್ನೆಲೆ ಅನೇಕರು ಈ ಸುದ್ದಿಯನ್ನು ನಿಜ ಎಂದೇ ಅಂದುಕೊಂಡಿದ್ದರು. ಆದರೆ.. ಈ ಅಂತೆ-ಕಂತೆಯ ಸುದ್ದಿ ಸತ್ಯಕ್ಕೆ ದೂರವಾದದ್ದು. ಖುದ್ದು ಮಯೂರಿಯೇ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ನನ್ನ ಮೆದುಳು, ಮನಸ್ಸು, ದೇಹ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ.

''ಗ್ಯಾರಂಟಿ ನ್ಯೂಸ್'' ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಯೂರಿ, ನಾನು ಖುಷಿಯಾಗಿದ್ದೇನೆ.. ನಾವೆಲ್ಲರೂ ಖುಷಿಯಾಗಿದ್ದೇವೆ ಎಂದಿದ್ದಾರೆ. ಇನ್ನೂ.. ನನ್ನ ದಾಂಪತ್ಯ ಬದುಕು ಹಳಿ ತಪ್ಪಿದೆ ಅಂತ ನಾನೇನು ಬಂದು ಯಾರಲ್ಲಿಯೂ ಹೇಳಿಲ್ಲ ಎಂದಿರುವ ಮಯೂರಿ, ಜನ ಒಂದು ಹೆಜ್ಜೆ ಮುಂದೆ ಇಟ್ಟರೂ ಮಾತನಾಡ್ತಾರೆ, ಒಂದು ಹೆಜ್ಜೆ ಹಿಂದೆ ಇಟ್ಟರೂ ಮಾತನಾಡ್ತಾರೆ ಎಂದಿದ್ದಾರೆ. ಹೀಗಾಗಿಯೇ ಅವರಿಗೆಲ್ಲ ಏನು ಹೇಳಲು ಆಗಲ್ಲ ಎಂದು ಕೂಡ ಹೇಳಿದ್ದಾರೆ.

Mayuri Kyatari has finally responded to speculations about her divorce from spouse Arun

ಮುಂದುವರೆದು ಮಾತನಾಡಿರುವ ಮಯೂರಿ ಕ್ಯಾತರಿ, ನಾನು ತುಂಬಾ ಪಾಸಿಟೀವ್‌ ಪರ್ಸನ್‌. ಪಬ್ಲಿಕ್‌ ಫಿಗರ್‌ ಆದ್ಮೇಲೆ ಜನಕ್ಕೆ ನಮ್ಮ ಜೀವನದ ಬಗ್ಗೆ ಕುತೂಹಲ ಇದ್ದೇ ಇರುತ್ತೆ ಹೀಗಾಗಿ ಏನಾಗ್ತಿದೆ ಅಂತ ತಿಳಿದುಕೊಳ್ಳೋಕೆ ಎದುರು ನೋಡ್ತಾರೆ ಅದು ಅವರ ತಪ್ಪಲ್ಲ ಎಂದಿದ್ದಾರೆ. ನಾನು ಯಾರ ವೈಯಕ್ತಿಕ ವಿಷ್ಯಕ್ಕೂ ತಲೆಹಾಕಲ್ಲ ಎಂದಿದ್ದಾರೆ. ನಾನು ಆ ತರಹದ ಹೆಣ್ಣುಮಗಳಲ್ಲ. ಬೇರೆಯವರ ಸಂಸಾರದಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳುವಂತಹ ಕುತೂಹಲ ನನ್ನಲಿಲ್ಲ ಎಂದು ಹೇಳಿದ್ದಾರೆ.

ಇನ್ನೂ ರಸ್ತೆ ಮಧ್ಯೆ ಹೋಗುತ್ತಿರುವಾಗ ಎಷ್ಟೋ ಆಕ್ಸಿಡೆಂಟ್‌ ನೋಡ್ತೇವೆ, ಸ್ಥಳದಲ್ಲೇ ಎಷ್ಟೋ ಮಂದಿ ಸಾವನ್ನಪ್ಪುತ್ತಾರೆ. ಮುಂದಿನ ಕ್ಷಣ ಏನಾಗುತ್ತೆ ಅಂತ ಗೊತ್ತಿಲ್ಲ. ಹೀಗಾಗಿ, ಎಲ್ಲರೂ ಬೇರೆಯವರ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅವರವರ ಜೀವನದ ಬಗ್ಗೆ ಗಮನ ಕೊಟ್ಟರೆ ಬದುಕು ಚೆನ್ನಾಗಿರುತ್ತೆ ಎಂದಿರುವ ಮಯೂರಿ, ನನ್ನ ಬದುಕು ಚೆನ್ನಾಗಿದೆ,ಬೆಳವಣಿಗೆ ಕೂಡ ಇದೆ. ನಾನಂತೂ ಖುಷಿಯಾಗಿದ್ದೇನೆ. ಮೆದುಳು, ಮನಸ್ಸು, ದೇಹ ಎಲ್ಲವೂ ಚೆನ್ನಾಗಿದೆ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ಬದುಕಿ ಬದುಕಲು ಬಿಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ ಮಯೂರಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X