»   » 'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಈಗ 'ಆಟಕ್ಕುಂಟು ಲೆಕ್ಕಕ್ಕಿಲ್ಲ'

'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಈಗ 'ಆಟಕ್ಕುಂಟು ಲೆಕ್ಕಕ್ಕಿಲ್ಲ'

Posted By:
Subscribe to Filmibeat Kannada

ಶೀರ್ಷಿಕೆ ನೋಡಿದ ತಕ್ಷಣ ''ನಟಿ ಮಯೂರಿ 'ಆಟಕ್ಕುಂಟು ಲೆಕ್ಕಕ್ಕಿಲ್ವಾ'? ಕನ್ನಡದಲ್ಲಿ ಈಗ ಮಯೂರಿಗೆ ಡಿಮ್ಯಾಂಡ್ ಇಲ್ವಾ?'' ಅಂತೆಲ್ಲ ಯೋಚನೆ ಮಾಡಬೇಡಿ. ಯಾಕಂದ್ರೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎನ್ನುವುದು ಮಯೂರಿ ಮುಂದಿನ ಚಿತ್ರದ ಹೆಸರು.

ಇಂಗ್ಲೀಷ್ ಹಾಡಿನಲ್ಲಿ ಹೇಗೆ ಕಾಣುತ್ತಾರೆ ನೋಡಿ 'ಕೃಷ್ಣಲೀಲಾ' ಮಯೂರಿ

'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎನ್ನುವ ಹೊಸ ಚಿತ್ರದಲ್ಲಿ ಮಯೂರಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಮಯೂರಿ ತೆಗೆದುಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸೀರೆ ಉಟ್ಟು ಮಯೂರಿ ವಿವಾಹಿತ ಮಹಿಳೆಯಂತೆ ಕಾಣಿಸಿಕೊಂಡಿದ್ದಾರೆ.

Mayuri next movie titled as 'Aatakunttu Lekakkilla'

ಅಂದಹಾಗೆ, ಈಗಾಗಲೇ 'ಕೃಷ್ಣ ಲೀಲಾ', 'ಇಷ್ಟ ಕಾಮ್ಯ' ಚಿತ್ರಗಳಲ್ಲಿ ಮಯೂರಿ ನಟಿಸಿದ್ದಾರೆ. ಜೊತೆಗೆ ಅವರ 'ಕರಿಯ 2' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಜೊತೆಗೆ ಇತ್ತೀಚಿಗಷ್ಟೆ ಇಂಗ್ಲೀಷ್ ಹಾಡೊಂದರಲ್ಲಿ ಮಯೂರಿ ಹೆಜ್ಜೆ ಹಾಕಿದ್ದರು.

English summary
Kannada Actress Mayuri next movie titled as 'Aatakunttu Lekakkilla'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada