»   » ಇಂಗ್ಲೀಷ್ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ ನಟಿ ಮಯೂರಿ

ಇಂಗ್ಲೀಷ್ ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿದ ನಟಿ ಮಯೂರಿ

Posted By:
Subscribe to Filmibeat Kannada
Mayuri, Kannada Actress acts in English Album | Filmibeat Kannada

ನಟಿ ಮಯೂರಿ ಕಿರುತೆರೆಯಿಂದ ಕೆರಿಯರ್ ಶುರು ಮಾಡಿ ನಂತರ 'ಕೃಷ್ಣ ಲೀಲಾ' ಮತ್ತು 'ಇಷ್ಟಕಾಮ್ಯ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದರು. ಆದರೆ ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಮಯೂರಿ ಇಂಗ್ಲೀಷ್ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

'ಕರಿಯ 2' ಸಿನಿಮಾದ ನಂತರ ಇದೀಗ ಮಯೂರಿ ಒಂದು ಇಂಗ್ಲೀಷ್ ಆಲ್ಬಂನಲ್ಲಿ ನಟಿಸಿದ್ದಾರೆ. 'ಗರ್ಲ್ ನಾಟ್ ಸಿನ್' ಎಂಬ ಇಂಗ್ಲೀಷ್ ಮ್ಯೂಸಿಕ್ ಆಲ್ಬಂನಲ್ಲಿ ಮಯೂರಿ ಹೆಚ್ಚೆ ಹಾಕಿದ್ದಾರೆ. ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಈ ಹಾಡು ಹೊರಬರಲಿದೆ.

Mayuri shaked her legs in English music album

ಬೆಂಗಳೂರಿನವರೇ ಆದ ಅಭಿ‍ಶೇಕ್ ಛಜೇಡ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಈ ಹಾಡು ಇದ್ದು, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ದೃಷ್ಟಿಯಿಂದ ಈ ಹಾಡನ್ನು ಮಾಡಲಾಗಿದೆಯಂತೆ. ಲಿಂಗ ತಾರತಮ್ಯ ಹೊಗಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶವಾಗಿದೆಯಂತೆ. ಮುಂದಿನ ತಿಂಗಳು 'ಗರ್ಲ್ ನಾಟ್ ಸಿನ್' ಆಲ್ಬಂ ಬಿಡುಗಡೆಯಾಗಲಿದೆ.

English summary
Kannada Actress Mayuri, of 'krishna leela' Fame is shaked her legs in 'Girl Not Seen' english music album.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada