ವಿಚ್ಛೇದನ, ಲೈಂಗಿಕ ದೌರ್ಜನ್ಯದ ಬಗ್ಗೆ ರಘು ದೀಕ್ಷಿತ್ ಪತ್ನಿ ಮಯೂರಿ ಟ್ವೀಟ್!

Recommended Video

ರಘು ದೀಕ್ಷಿತ್ ಬಗ್ಗೆ ಮಯೂರಿ ಮಾತುಗಳಿವು..! | FILMIBEAT KANNADA

ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀ ಪಾದ್ ಆರೋಪ ಮಾಡಿದ್ದರು. ಈ ಆರೋಪವನ್ನು ರಘು ದೀಕ್ಷಿತ್ ಕೂಡ ಒಪ್ಪಿಕೊಂಡಿದ್ದರು.

ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದ ರಘು ದೀಕ್ಷಿತ್ ''ಆ ಘಟನೆ ನಡೆದಿರುವುದು ನಿಜ. ತಬ್ಬಿಕೊಂಡು, ಮುತ್ತುಕೊಡಲು ಯತ್ನಿಸಿದ್ದು ನಿಜ ಆದರೆ, ಚಿನ್ಮಯಿ ಅವರು ಹೇಳಿದ ಎಲ್ಲವೂ ಸತ್ಯವಲ್ಲ'' ಎಂದಿದ್ದರು.

ತಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ಟ್ವೀಟ್ ಮಾಡಿದ್ದ ರಘು ದೀಕ್ಷಿತ್ ತಮ್ಮ ವಿಚ್ಛೇದನದ ವಿಷಯವನ್ನು ಅದರಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ, ಈ ಬಗ್ಗೆ ಈಗ ಅವರ ಪತ್ನಿ ಮಯೂರಿ ಅಸಮಾಧಾನಗೊಂಡಿರುವ ಹಾಗೆ ಕಾಣುತ್ತಿದೆ.

ರಘು ದೀಕ್ಷಿತ್ ವಿಚಾರವಾಗಿ ಮಯೂರಿ ಉಪಾದ್ಯ ಸರಣಿ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

ವಿಚ್ಚೇದನದ ವಿಷಯ ಇಲ್ಲಿ ಅನವಶ್ಯಕ.

ವಿಚ್ಚೇದನದ ವಿಷಯ ಇಲ್ಲಿ ಅನವಶ್ಯಕ.

''ನಮ್ಮ ಮದುವೆ ಮತ್ತು ವಿಚ್ಚೇದನದ ವಿಷಯ ಇಲ್ಲಿ ಅನವಶ್ಯಕ. ನಾನು ಮೊದಲು ಹೆಣ್ಣು, ನಂತರ ಹೆಂಡತಿ. ಒಬ್ಬಸೆಲಿಬ್ರಿಟಿ ಆಗಿರಲಿ, ಆಗಿರದೆ ಇರಲಿ ಪ್ರತಿಯೊಬ್ಬ ಪ್ರಜೆಯ ಗೌರವವೂ ಮುಖ್ಯ. ನನಗೆ ಈ ಘಟನೆಯ ಬಗ್ಗೆ ಸತ್ಯಾಸತ್ಯತೆಗಳೆನೆಂಬುದು ತಿಳಿದಿಲ್ಲ.'' - ಮಯೂರಿ ಉಪಾದ್ಯ, ನೃತ್ಯಗಾರ್ತಿ

ನನ್ನ ನಿಲುವು ಸ್ಪಷ್ಟವಾಗಿದೆ

ನನ್ನ ನಿಲುವು ಸ್ಪಷ್ಟವಾಗಿದೆ

''ಆದರೆ, ಇಂತಹ ವಿಷಯಗಳ ಬಗ್ಗೆ ಮಾತಾಡಲು, ತುಂಬ ಧೈರ್ಯ ಬೇಕು. ಅದೂ ಸಾಮಾಜಿಕ ಜಾಲತಾಣಗಳಲ್ಲಿಯೇ ಆಗಿರಲಿ ಅವರ ಆ ಧೈರ್ಯ ಮೆಚ್ಚುವಂತದ್ದು. ಒಂದು ವೇಳೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ನನ್ನ ನಿಲುವು ಅದರ ಬಗ್ಗೆ ಸ್ಪಷ್ಟವಾಗಿದೆ.'' - ಮಯೂರಿ ಉಪಾದ್ಯ, ನೃತ್ಯಗಾರ್ತಿ

ಎಲ್ಲ ಸಂತ್ರಸ್ಥತೆಯರಿಗೆ ನನ್ನ ಬೆಂಬಲವಿದೆ

''ಯಾರಿಗೆ ತನ್ನ ನಡೆವಳಿಕೆ ಬಗ್ಗೆ ಪಶ್ಚಾತ್ತಾಪವಿರುತ್ತದೆಯೋ ಅಂತವರಿಗೆ ಶಿಕ್ಷೆ ಆಗಬೇಕು. ಇದರಿಂದ ಬೇರೆ ಗಂಡಸರು ಹೆಣ್ಣಿನ ಗೌರವವನ್ನು ಕುಂದಿಸಲು ಧೈರ್ಯ ಮಾಡುವುದಿಲ್ಲ. ನಾನು ಎಲ್ಲ ಸಂತ್ರಸ್ಥತೆಯರಿಗೆ ನನ್ನ ಬೆಂಬವಿದೆ.'' - ಮಯೂರಿ ಉಪಾದ್ಯ, ನೃತ್ಯಗಾರ್ತಿ

ಹೆಂಡತಿ ಜೊತೆ ನನ್ನ ಸಂಬಂಧ ಚೆನ್ನಾಗಿರಲಿಲ್ಲ

ಹೆಂಡತಿ ಜೊತೆ ನನ್ನ ಸಂಬಂಧ ಚೆನ್ನಾಗಿರಲಿಲ್ಲ

ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ರಘು ದೀಕ್ಷಿತ್ ''ನನ್ನ ಹೆಂಡತಿ ಮತ್ತು ನನ್ನ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ನನಗೆ ಒಂದು ಕಂಫರ್ಟ್​ ಬೇಕಾಗಿತ್ತು. ಆ ಕ್ಷಣವನ್ನು ನಾನು ತಪ್ಪಾಗಿ ಅರ್ಥ ಮಾಡಿಕೊಂಡೆ. ಆದರೆ, ಚಿನ್ಮಯಿ ತಮ್ಮ ಪೋಸ್ಟ್​ನಲ್ಲಿ ತಿಳಿಸಿರುವ ಎಲ್ಲ ಅಂಶಗಳನ್ನು ನಾನು ಒಪ್ಪುವುದಿಲ್ಲ. ನಾನೊಬ್ಬ ಭಕ್ಷಕನೇ..? ಖಂಡಿತಾ ಅಲ್ಲ.'' ಎಂದಿದ್ದರು.

ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ

ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ

'ನನ್ನಿಂದ ದೂರವಾದ ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ. ಆಕೆ ನಿಜಕ್ಕೂ ಅದ್ಭುತ ವ್ಯಕ್ತಿ. ಹೃದಯದಿಂದ ಸೌಂದರ್ಯವತಿಯೂ ಹೌದು. ನನ್ನ ಅಭಿಮಾನಿಗಳು, ನನ್ನ ಸಂಗೀತವನ್ನು ಪ್ರೀತಿಸುವ ಮತ್ತು ನನ್ನನ್ನು ಇಷ್ಟಪಡುವ ಎಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಮುಂದೊಂದು ದಿನ ಇದನ್ನು ಸರಿಯಾಗುತ್ತದೆ ಎಂಬ ಭರವಸೆ ಇದೆ.'' - ರಘು ದೀಕ್ಷಿತ್, ಸಂಗೀತ ನಿರ್ದೇಶಕ

ಮೂರು ವರ್ಷಗಳಿಂದ ದೂರವಿದ್ದೇನೆ

ಮೂರು ವರ್ಷಗಳಿಂದ ದೂರವಿದ್ದೇನೆ

''ನಾನು ನನ್ನ ಹೆಂಡತಿಗೆ ಒಳ್ಳೆಯ ಗಂಡ ಆಗಿರಲಿಲ್ಲ. ನಾನು ಮೂರು ವರ್ಷಗಳಿಂದ ಆಕೆಯಿಂದ ದೂರವಿದ್ದೇನೆ. ನಾವು ಇನ್ನೇನು ಡೈವೋರ್ಸ್​ ಪ್ರಕ್ರಿಯೆಯನ್ನು ಕೊನೆಯ ಹಂತದಲ್ಲಿ ಇದ್ದೇವೆ. ನನ್ನ ಕಡೆಯಿಂದ ಡೈವೋರ್ಸ್​ ಪ್ರಕ್ರಿಯೆ ಸರಾಗವಾಗಿ ನಡೆಯಲೆಂದು ಕೆಲವು ವೃತ್ತಿಪರ ಸಲಹೆಗಾರರ ಸಂಪರ್ಕವನ್ನು ಪಡೆದಿದ್ದೇನೆ.'' - ರಘು ದೀಕ್ಷಿತ್, ಸಂಗೀತ ನಿರ್ದೇಶಕ

More from Filmibeat

English summary
Mayuri Upadhya reaction about his husband Raghu Dixit sexual harassment issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X