For Quick Alerts
  ALLOW NOTIFICATIONS  
  For Daily Alerts

  ನಾನು-ದಿಗಂತ್ ಈಗಾಗಲೇ ಅಪ್ಪ-ಅಮ್ಮ ಆಗಿದ್ದೀವಿ: ಐಂದ್ರಿತಾ ರೇ

  |

  ಸ್ಯಾಂಡಲ್‌ವುಡ್‌ ನ ಕ್ಯೂಟ್ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಪೋಷಕರಾಗುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ನಟಿ ಐಂದ್ರಿತಾ ರೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

  'ನಾನು-ದಿಗಂತ್ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ನಾನು ಮತ್ತು ದಿಗಂತ್ ಈಗಾಗಲೇ ಪೋಷಕರಾಗಿದ್ದೇವೆ' ಎಂದಿದ್ದಾರೆ ಐಂದ್ರಿತಾ ರೇ. ಹಾಗೆಂದ ಮಾತ್ರಕ್ಕೆ ಈ ದಂಪತಿ ಮಕ್ಕಳನ್ನು ಹೊಂದಿದ್ದಾರೆ ಎಂದರ್ಥವಲ್ಲ.

  'ನಾನು ದಿಗಂತ್ ಎರಡು ನಾಯಿಗಳನ್ನು ನಮ್ಮ ಮಕ್ಕಳಂತೆಯೇ ಸಾಕುತ್ತಿದ್ದೇವೆ. (ಡಾಗ್ ಪೇರೆಂಟ್ಸ್) ಇನ್ನು ಮುಂದೆಯೂ ಹೀಗೆ ಇರಬೇಕು ಎಂದುಕೊಂಡಿದ್ದೇವೆ' ಎಂದಿದ್ದಾರೆ ನಟಿ ಐಂದ್ರಿತಾ ರೇ.

  ಇತ್ತೀಚೆಗೆ ನಟ ದಿಗಂತ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಂದರ್ಶಕಿಯು ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಕೇಳಿದಾಗ, 'ಸುಮ್ಮನಿರಿ ಅದರ ಬಗ್ಗೆ ಮಾತನಾಡಬೇಡಿ' ಎಂದು ತಮಾಷೆಯಾಗಿ ಸನ್ನೆ ಮಾಡಿದ್ದರು. ಇದೇ ಕಾರಣಕ್ಕೆ ದಿಗಂತ್-ಐಂದ್ರಿತಾ ಮಗುವಿನ ನಿರೀಕ್ಷೆಯಲ್ಲಿರಬಹುದು ಎನ್ನಲಾಗಿತ್ತು.

  ಇವ್ರೇ ನೋಡಿ ಅನು ಸಿರಿಮನೆಯ ಬಾಯ್ ಫ್ರೆಂಡ್ | Filmibeat Kannada

  2018 ರ ಡಿಸೆಂಬರ್ ತಿಂಗಳಲ್ಲಿ ಈ ಯುವ ಜೋಡಿ ವಿವಾಹವಾಗಿದ್ದರು. ಇಬ್ಬರೂ ಸಹ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿರುವುದರ ಜೊತೆಗೆ ಹಲವಾರು ಸಾಹಸಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ರಿವರ್‌ ರ್ಯಾಫ್ಟಿಂಗ್, ಸೈಕ್ಲಿಂಗ್, ವ್ಯಾಯಾಮ, ಕಸರತ್ತು, ಸರ್ಫಿಂಗ್ ಹೀಗೆ ಹಲವು ಸಾಹಸ ಕ್ರೀಡೆಗಳಲ್ಲಿ ಈ ಜೋಡಿ ತೊಡಗಿಕೊಂಡಿದ್ದಾರೆ.

  English summary
  Aindrita Ray said, me and Diganth were not expecting baby. We are dog parents now always be that way.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X