ಸ್ಯಾಂಡಲ್ ವುಡ್ ನಲ್ಲಿ ಎದುರಿಸಿದ ಕಿರುಕುಳದ ಬಗ್ಗೆ ಮೌನ ಮುರಿದ ನಟಿ ಸಂಗೀತ ಭಟ್.!
'ಪ್ರೀತಿ ಗೀತಿ ಇತ್ಯಾದಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸಂಗೀತ ಭಟ್. ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಂಗೀತ ಭಟ್ ಇದೀಗ ಸಿನಿಮಾ ಫೀಲ್ಡ್ ಗೆ ಗುಡ್ ಬೈ ಹೇಳಿದ್ದಾರೆ. ಅದಕ್ಕೆ ಕಾರಣ ಚಿತ್ರರಂಗದಲ್ಲಿ ಅವರು ಅನುಭವಿಸಿರುವ ನರಕ ಯಾತನೆ.!
ಹೌದು, ಚಿತ್ರರಂಗಕ್ಕೆ ದೊಡ್ಡ ನಮಸ್ಕಾರ ಹಾಕಿರುವ ಸಂಗೀತ ಭಟ್ ಸೋಷಿಯಲ್ ಮೀಡಿಯಾದಲ್ಲಿ ತಮಗಾಗಿರುವ ನೋವನ್ನ ಹಂಚಿಕೊಂಡಿದ್ದಾರೆ. ಎಲ್ಲೆಡೆ #ಮೀಟೂ ಅಭಿಯಾನ ಸದ್ದು ಮಾಡುತ್ತಿರುವುದರಿಂದ ತಮಗಾದ ಕಹಿ ಅನುಭವಗಳನ್ನ ನಟಿ ಸಂಗೀತ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊರ ಹಾಕಿದ್ದಾರೆ.
ಹತ್ತನೇ ಕ್ಲಾಸ್ ನಲ್ಲಿ ತಂದೆ ತೀರಿಕೊಂಡ ಮೇಲೆ ಹೊಟ್ಟೆಪಾಡಿಗಾಗಿ ಚಿತ್ರರಂಗಕ್ಕೆ ಬಂದ ಸಂಗೀತ ಭಟ್ ಎದುರಿಸಿದ ಕರಾಳ ಅನುಭವಗಳು ಒಂದೆರಡಲ್ಲ.

ಕಾಸ್ಟಿಂಗ್ ಡೈರೆಕ್ಟರ್, ಡೈರೆಕ್ಟರ್, ಹೇರ್ ಡ್ರೆಸ್ಸರ್, ಆಕ್ಟರ್ ಸೇರಿದಂತೆ ಹಲವರಿಂದ ನಟಿ ಸಂಗೀತ ಭಟ್ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ. ಸಂಗೀತ ಭಟ್ ಅಭಿನಯಿಸಿದ ಎಷ್ಟೋ ಸಿನಿಮಾಗಳು ತೆರೆಗೆ ಬರಲಿಲ್ಲ. ಹೀಗಾಗಿ, ಆಕೆಗೆ ಸಿಗಬೇಕಾದ ಸಂಭಾವನೆ ಕೂಡ ಸಿಕ್ಕಿಲ್ಲ.
ನಟಿ ಸಂಗೀತ ಭಟ್ ತಿಂಗಳಿಗೆ ಎಂಟು ಸಾವಿರಕ್ಕಿಂತ ಕಮ್ಮಿ ದುಡಿಯುತ್ತಿದ್ದರು ಅಂದ್ರೆ ನೀವೇ ಊಹಿಸಿ ಅವರ ಪರಿಸ್ಥಿತಿ ಹೇಗಿರಬಹುದು ಅಂತ.! ಅವಕಾಶಗಳಿಗಾಗಿ ತಾವು ಮದುವೆಯಾಗಿರುವುದನ್ನೂ ನಟಿ ಸಂಗೀತ ಭಟ್ ಮುಚ್ಚಿಟ್ಟಿದ್ದರಂತೆ. ಆದ್ರೀಗ, ಚಿತ್ರರಂಗದಿಂದ ದೂರ ಸರಿದು ಪತಿಯೊಂದಿಗೆ ನೆಮ್ಮದಿಯಿಂದ ಸಂಗೀತ ಭಟ್ ಬದುಕು ಸಾಗಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ತಾವು ಅನುಭವಿಸಿದ ಯಮಯಾತನೆ ಬಗ್ಗೆ ಸಂಗೀತ ಭಟ್ ಮೂರು ಪುಟಗಳಲ್ಲಿ ವಿವರಿಸಿದ್ದಾರೆ. ಓದಿರಿ...


Click it and Unblock the Notifications











