ಕಿಚ್ಚ ಸುದೀಪ್ ಮಗಳು ಸಾನ್ವಿ ಕುತ್ತಿಗೆ ಮೇಲೆ ಹೊಸ ಟ್ಯಾಟೂ; ಏನಿದರ ಅರ್ಥ?
ಇತ್ತೀಚಿನ ವರ್ಷಗಳಲ್ಲಿ ಟ್ಯಾಟೂ ಕ್ರೇಜ್ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನತೆಯಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ. ತಮ್ಮಿಷ್ಟದ ಚಿತ್ರಗಳನ್ನು ಪ್ರೀತಿ ಪಾತ್ರರ ಹೆಸರನ್ನು ಕೈ, ಕಾಲು, ಕುತ್ತಿಗೆ ಮೇಲೆ ಶಾಶ್ವತವಾಗಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಸಿನಿಮಾ ತಾರೆಯರು ಇದಕ್ಕೆ ಹೊರತಲ್ಲ.
ಕೆಲವೊಮ್ಮೆ ಸಿನಿಮಾಗಳಲ್ಲಿ ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಂಡು ನಟ-ನಟಿಯರು ಕಾಣಿಸಿಕೊಳ್ಳುತ್ತಾರೆ. ಇನ್ನುಳಿದಂತೆ ನಟರು ಶಾಶ್ವತ ಟ್ಯಾಟೂ ಹಾಕಿಸಿಕೊಳ್ಳುವುದು ಕಮ್ಮಿ. ನಟಿಯರಲ್ಲಿ ಈ ಕ್ರೇಜ್ ಇದೆ. ಇದೀಗ ನಟ ಸುದೀಪ್ ಮಗಳು ಸಾನ್ವಿ ತಮ್ಮ ಕುತ್ತಿಗೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಖುಷಿಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಶೇರ್ ಮಾಡಿದ್ದಾರೆ.

ಸಾನ್ವಿ ಸುದೀಪ್ ತಮ್ಮ ಕುತ್ತಿಗೆಯ ಮೇಲೆ ಬಲ ಕಿವಿಯ ಹಿಂಭಾಗದಲ್ಲಿ 'ಪೀಕು'(Piku) ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಪೀಕು ಅಂದ್ರೆ ಏನು? ಯಾರಪ್ಪಾ ಈ ಪೀಕು? ಅಂತೆಲ್ಲಾ ಊಹಿಸುವ ಅಗತ್ಯವಿಲ್ಲ. ಯಾಕಂದರೆ ಆ ಬಗ್ಗೆ ಸಾನ್ವಿ ಮಾಹಿತಿ ನೀಡಿದ್ದಾರೆ.
"ಅಯ್ಯೋ ನೀವೆಲ್ಲಾ ಏನೇನೋ ಊಹಿಸುವ ಮುನ್ನ ನಾನೇ ಹೇಳ್ತೀನಿ. ಪೀಕು ಅನ್ನೋದು ನನ್ನ ತಾಯಿಯ ನಿಕ್‌ನೇಮ್. ಅವರಪ್ಪ(ನಮ್ಮ ತಾತ) ಅದೇ ರೀತಿ ಆಕೆಯನ್ನು ಕರೆಯುತ್ತಿದ್ದರು" ಎಂದು ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ಕಿನ್‌ಡೀಪ್ ಟ್ಯಾಟೂ ಸ್ಟುಡಿಯೋದಲ್ಲಿ ಈ ರೀತಿ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಸುದೀಪ್ ಪುತ್ರಿ ಸಾನ್ವಿ ಒಳ್ಳೆ ಗಾಯಕಿ. ಆಗಾಗ್ಗೆ ಇಂಗ್ಲೀಷ್ ಗೀತೆಗಳನ್ನು ಹಾಡಿ ವಿಡಿಯೋ ಶೇರ್ ಮಾಡುತ್ತಾರೆ. ಅತ್ತೆ ಮಗ ಸಂಚಿತ್ ನಟನೆಯ 'ಜಿಮ್ಮಿ' ಚಿತ್ರದ ಥೀಮ್ ಮ್ಯೂಸಿಕ್‌ಗೆ ಆಕೆ ಸಾಹಿತ್ಯ ಬರೆದು ಹಾಡಿದ್ದರು. ಶೀಘ್ರದಲ್ಲೇ ಶಾನ್ವಿ ಕನ್ನಡ ಸಿನಿಮಾಗಳಲ್ಲಿ ಹಾಡುವ ಸಾಧ್ಯತೆಯಿದೆ. ಇನ್ನು ತಂದೆ ಜೊತೆ ಚಿತ್ರರಂಗಕ್ಕೂ ಬರಬಹುದು ಎನ್ನಲಾಗ್ತಿದೆ. 'ಮ್ಯಾಕ್ಸ್' ಚಿತ್ರದ ಸಣ್ಣ ಪಾತ್ರದಲ್ಲಿ ಸಾನ್ವಿ ಬಣ್ಣ ಹಚ್ಚಿದ್ದಾರೆ ಎನ್ನುವ ಗುಲ್ಲಾಗಿದೆ.
ಕೆಲ ದಿನಗಳ ಹಿಂದೆ ಸಾನ್ವಿ ಸುದೀಪ್ ಮಾಡಿಸಿದ್ದ ಫೋಟೊಶೂಟ್ ವೈರಲ್ ಆಗಿತ್ತು. ಬ್ಲಾಕ್ ಟೀಶರ್ಟ್, ಡೆನಿಮ್‌ನಲ್ಲಿ ರಂಗೇರಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳು ಆಕೆ ಚಿತ್ರರಂಗಕ್ಕೆ ಬಹಳ ಬೇಗ ಬರುತ್ತಾರೆ ಎಂದು ಅಂದುಕೊಂಡಿದ್ದಾರೆ. ಸಾನ್ವಿ 'ವಿಕ್ರಾಂತ್ ರೋಣ' ಚಿತ್ರದ 'ರಾ ರಾ ರಕ್ಕಮ್ಮ' ಸಾಂಗ್ ಟ್ರ್ಯಾಕ್ ಹಾಕಿದ್ದರು. ಹಾಗಾಗಿ ಆದಷ್ಟು ಬೇಗ ಆಕೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಲಿದ್ದಾರೆ.
'ಜಿಮ್ಮಿ' ಚಿತ್ರಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೂಡ ಸಾನ್ವಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮೇಕಿಂಗ್ ಬಗ್ಗೆ ಕಲಿಯಲು ಇದು ಸಹಾಯಕವಾಗುತ್ತದೆ. ನನಗೆ ಸಿನಿಮಾ ಮೇಕಿಂಗ್, ನಟನೆ ಬಗ್ಗೆಯೂ ಹೆಚ್ಚು ಆಸಕ್ತಿ ಇದೆ ಮುಂದೆ ನೋಡೋಣ ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಂದೆ ಚಿತ್ರಕ್ಕೆ ಕಥೆ ಬರೆಯುವ ಪ್ರಯತ್ನ ಕೂಡ ಮಾಡುತ್ತೀನಿ ನೋಡೋಣ ಏನೆಲ್ಲಾ ಆಗುತ್ತದೆ ಎಂದಿದ್ದರು.
ಅಭಿಮಾನಿಗಳು ಕೂಡ ಸಾನ್ವಿ ಸುದೀಪ್ ಸಿನಿಎಂಟ್ರಿಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಕಾಮೆಂಟ್‌ಗಳಲ್ಲಿ ಮನವಿ ಮಾಡುತ್ತಿರುತ್ತಾರೆ. ಇನ್ನು ತಂದೆಯ ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಸಾನ್ವಿ ಸುದೀಪ್ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್ ಮಾಡಿದ್ದರು.


Click it and Unblock the Notifications











