'ಅಧೀರ' ಸಂಜಯ್ ದತ್ ಮುಖದ ಮೇಲಿನ ಟ್ಯಾಟೂ ಅರ್ಥ ಏನು ?
Recommended Video
'ಕೆ ಜಿ ಎಫ್ 2' ಸಿನಿಮಾದ 'ಅಧೀರ'ನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು (ಜುಲೈ 29) ಸಂಜಯ್ ದತ್ ಹುಟ್ಟುಹಬ್ಬದ ವಿಶೇಷವಾಗಿ ಅಧೀರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಫಸ್ಟ್ ಲುಕ್ ನಲ್ಲಿ ಸಂಜಯ್ ದತ್ ಮುಖದ ಮೇಲಿನ ಟ್ಯಾಟೂ ಆಕರ್ಷಕವಾಗಿದೆ. ಆದರೆ, ಈ ಟ್ಯಾಟೂದಲ್ಲಿ ಬರೆದಿರುವುದು ಏನು..?, ಆ ಪದದ ಅರ್ಥ ಏನಿರಬಹುದು ಎನ್ನುವ ಪ್ರಶ್ನೆ ಮೂಡುತ್ತಿದೆ.
ಅಂದಹಾಗೆ, ಸಂಜಯ್ ದತ್ ಮುಖದ ಮೇಲೆ ''ಯುದ್ಧ ಏವೋ ಜಗ ತತ್ರಚಾ'' ಎಂದು ಬರೆಯಲಾಗಿದೆ. ಇದು ಸಂಸ್ಕೃತ ಪದವಾಗಿದೆ. ಯುದ್ಧದ ಹಿನ್ನಲೆಯಲ್ಲಿ ಈ ಪದಗಳು ಬರುತ್ತದೆ.

'ಯುದ್ಧ ಏವೋ ಜಗ ತತ್ರಚಾ' ಎಂದರೆ, 'ಜಗತ್ತಿಗೆ ಯುದ್ಧದ ಆಗಮನ ಆಗುತ್ತಿದೆ', 'ಜಗತ್ತಿನ ಸಾರವೇ ಯುದ್ಧ' ಹಾಗೂ 'ಜಗತ್ತಿನ ತುಂಬ ಯುದ್ಧ ತುಂಬಿಕೊಂಡಿದೆ' ಎಂಬ ಅರ್ಥಗಳು ಬರುತ್ತದೆ.
'ಕೆಜಿಎಫ್' ಪ್ರಪಂಚದಲ್ಲಿ ಅಧೀರನ ಮೂಲಕ ದೊಡ್ಡ ಯುದ್ಧ ಪ್ರಾರಂಭವಾಗಿದೆ ಎಂದು ಚಿತ್ರತಂಡ ಈ ರೀತಿ ಸುಳಿವು ನೀಡಿರಬಹುದು. ಇದರ ಜೊತೆಗೆ ಅಧೀರನನ್ನು ಸಂಘರ್ಷಗಳ ತಾಯಿ ಎಂದು ಕೂಡ ಚಿತ್ರತಂಡ ವರ್ಣಿಸಿದೆ.
ಅಧೀರನ ಬಗ್ಗೆ ನಾವೇನೆ ಲೆಕ್ಕ ಹಾಕಿದರು. ಸಿನಿಮಾ ನೋಡಿದ ಮೇಲೆಯೇ ಅದರ ಸರಿಯಾದ ಉತ್ತರ ಸಿಗುತ್ತದೆ. 'ಕೆಜಿಎಫ್ 2' ಚಿತ್ರದ ಈ ಪಾತ್ರದ ಮೂಲಕ ಸಂಜಯ್ ದತ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯಶ್ ಈ ಸಿನಿಮಾದ ನಾಯಕನಾಗಿದ್ದು, ಪ್ರಶಾಂತ್ ನೀಲ್ ಸಿನಿಮಾದ ನಿರ್ದೇಶಕ


Click it and Unblock the Notifications











