twitter
    For Quick Alerts
    ALLOW NOTIFICATIONS  
    For Daily Alerts

    'ಅಧೀರ' ಸಂಜಯ್ ದತ್ ಮುಖದ ಮೇಲಿನ ಟ್ಯಾಟೂ ಅರ್ಥ ಏನು ?

    |

    Recommended Video

    KGF 2 : ಜುಲೈ 29ರಂದು ಅಧೀರ ಪೋಸ್ಟರ್ ರಿಲೀಸ್ | ಆದರೆ ಅಧೀರ ಮುಖದ ಮೇಲಿನ ಟ್ಯಾಟೂ ಅರ್ಥವೇನು | FILMIBEAT KANNADA

    'ಕೆ ಜಿ ಎಫ್ 2' ಸಿನಿಮಾದ 'ಅಧೀರ'ನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು (ಜುಲೈ 29) ಸಂಜಯ್ ದತ್ ಹುಟ್ಟುಹಬ್ಬದ ವಿಶೇಷವಾಗಿ ಅಧೀರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

    ಫಸ್ಟ್ ಲುಕ್ ನಲ್ಲಿ ಸಂಜಯ್ ದತ್ ಮುಖದ ಮೇಲಿನ ಟ್ಯಾಟೂ ಆಕರ್ಷಕವಾಗಿದೆ. ಆದರೆ, ಈ ಟ್ಯಾಟೂದಲ್ಲಿ ಬರೆದಿರುವುದು ಏನು..?, ಆ ಪದದ ಅರ್ಥ ಏನಿರಬಹುದು ಎನ್ನುವ ಪ್ರಶ್ನೆ ಮೂಡುತ್ತಿದೆ.

    ರಿವೀಲ್ ಆಯ್ತು ಕೆಜಿಎಫ್ ಚಿತ್ರದ ಬಿಗ್ ನ್ಯೂಸ್ : ಜುಲೈ 29ಕ್ಕೆ ನಿರೀಕ್ಷಿಸಿ ಸರ್ಪ್ರೈಸ್ ರಿವೀಲ್ ಆಯ್ತು ಕೆಜಿಎಫ್ ಚಿತ್ರದ ಬಿಗ್ ನ್ಯೂಸ್ : ಜುಲೈ 29ಕ್ಕೆ ನಿರೀಕ್ಷಿಸಿ ಸರ್ಪ್ರೈಸ್

    ಅಂದಹಾಗೆ, ಸಂಜಯ್ ದತ್ ಮುಖದ ಮೇಲೆ ''ಯುದ್ಧ ಏವೋ ಜಗ ತತ್ರಚಾ'' ಎಂದು ಬರೆಯಲಾಗಿದೆ. ಇದು ಸಂಸ್ಕೃತ ಪದವಾಗಿದೆ. ಯುದ್ಧದ ಹಿನ್ನಲೆಯಲ್ಲಿ ಈ ಪದಗಳು ಬರುತ್ತದೆ.

    Meaning Of Adheeras Tattoo In Kgf 2 Movie

    'ಯುದ್ಧ ಏವೋ ಜಗ ತತ್ರಚಾ' ಎಂದರೆ, 'ಜಗತ್ತಿಗೆ ಯುದ್ಧದ ಆಗಮನ ಆಗುತ್ತಿದೆ', 'ಜಗತ್ತಿನ ಸಾರವೇ ಯುದ್ಧ' ಹಾಗೂ 'ಜಗತ್ತಿನ ತುಂಬ ಯುದ್ಧ ತುಂಬಿಕೊಂಡಿದೆ' ಎಂಬ ಅರ್ಥಗಳು ಬರುತ್ತದೆ.

    'ಕೆಜಿಎಫ್' ಪ್ರಪಂಚದಲ್ಲಿ ಅಧೀರನ ಮೂಲಕ ದೊಡ್ಡ ಯುದ್ಧ ಪ್ರಾರಂಭವಾಗಿದೆ ಎಂದು ಚಿತ್ರತಂಡ ಈ ರೀತಿ ಸುಳಿವು ನೀಡಿರಬಹುದು. ಇದರ ಜೊತೆಗೆ ಅಧೀರನನ್ನು ಸಂಘರ್ಷಗಳ ತಾಯಿ ಎಂದು ಕೂಡ ಚಿತ್ರತಂಡ ವರ್ಣಿಸಿದೆ.

    1 ನಿಮಿಷದ 'ಕೆಜಿಎಫ್ 2' ಆಡಿಷನ್ ಗೆ ಹನುಮಂತನ ಬಾಲಕ್ಕಿಂತ ಉದ್ದದ ಸಾಲು 1 ನಿಮಿಷದ 'ಕೆಜಿಎಫ್ 2' ಆಡಿಷನ್ ಗೆ ಹನುಮಂತನ ಬಾಲಕ್ಕಿಂತ ಉದ್ದದ ಸಾಲು

    ಅಧೀರನ ಬಗ್ಗೆ ನಾವೇನೆ ಲೆಕ್ಕ ಹಾಕಿದರು. ಸಿನಿಮಾ ನೋಡಿದ ಮೇಲೆಯೇ ಅದರ ಸರಿಯಾದ ಉತ್ತರ ಸಿಗುತ್ತದೆ. 'ಕೆಜಿಎಫ್ 2' ಚಿತ್ರದ ಈ ಪಾತ್ರದ ಮೂಲಕ ಸಂಜಯ್ ದತ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯಶ್ ಈ ಸಿನಿಮಾದ ನಾಯಕನಾಗಿದ್ದು, ಪ್ರಶಾಂತ್ ನೀಲ್ ಸಿನಿಮಾದ ನಿರ್ದೇಶಕ

    English summary
    Meaning of Adheera's tattoo in 'KGF 2' movie. Actor Sanjay Dutt playing Adheera role in Yash's 'KGF 2'.
    Monday, July 29, 2019, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X