'Buckaasuura' ಟೈಟಲ್ ನಲ್ಲಿ ಮೂರು ಅರ್ಥವಿದೆ: ಸಾಧ್ಯವಾದ್ರೆ ಊಹಿಸಿ.?
Recommended Video

ರಾಕ್ ಸ್ಟಾರ್ ರೋಹಿತ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಬಕಾಸುರ' ಸಿನಿಮಾ ಇದೇ ವಾರ ಅಂದ್ರೆ ಏಪ್ರಿಲ್ 27 ರಂದು ಬಿಡುಗಡೆಯಾಗುತ್ತಿದೆ. 'ಕರ್ವ' ಖ್ಯಾತಿಯ ನಿರ್ದೇಶಕ ನವನೀತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಟಿ ಕಾವ್ಯ ಗೌಡ ನಾಯಕಿಯಾಗಿ ನಟಿಸಿದ್ದಾರೆ.
'ಬಕಾಸುರ' ಚಿತ್ರದ ಟ್ರೈಲರ್ ನೋಡಿದಾಗ ಇದೊಂದು ಹಣದ ಸುತ್ತಾ ನಡೆಯುವ ಕಥೆ ಎನ್ನುವುದು ಹೇಳುತ್ತಿದೆ. ಇನ್ನೇನು ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ ಅದನ್ನ ಚಿತ್ರಮಂದಿರದಲ್ಲೇ ನೋಡಬಹುದು.
ಈಗ ವಿಷ್ಯ ಏನಪ್ಪಾ ಅಂದ್ರೆ, ಬಕಾಸುರ ಚಿತ್ರದ ಟೈಟಲ್ ನಲ್ಲಿ ಮೂರು ಅರ್ಥವಿದೆ. ಅದು ಏನು ಎಂಬುದು ಈಗ ಕುತೂಹಲ. ಅಷ್ಟಕ್ಕೂ, ಬಕಾಸುರ ಅಂದ್ರೆ, ಪುರಾಣದಲ್ಲಿ ಬರುವ ರಾಕ್ಷಸನ ಹೆಸರು. ಆದ್ರೆ, ಬಕಾಸುರ ಚಿತ್ರದಲ್ಲಿ ಅದಕ್ಕೆ ಬೇರೆಯದ್ದೇ ರೀತಿಯಲ್ಲಿ ಅರ್ಥ ನೀಡಿದೆ.

ಈ ಬಗ್ಗೆ ನಟ ರೋಹಿತ್ ವಿವರಿಸಿದ್ದು, ಇಂಗ್ಲೀಷ್ನಲ್ಲಿ 'ಬಕಾಸುರ'ದ ಸ್ಪೆಲ್ಲಿಂಗ್ Bakasuru ಅಂತಿದೆ. ಆದ್ರೆ, ಚಿತ್ರತಂಡ ಬಳಸಿರುವುದು 'Buckaasuura' ಅಂತ. ಈ ಟೈಟಲ್ ನಲ್ಲಿ 'Buck' ಅಂದ್ರೆ ಹಣ, 'kaasu' ಅಂದ್ರೆ ಹಣ ಮತ್ತು 'suura' ಒಳ್ಳೆಯವನು ಎಂದರ್ಥ.
Buck - ಹಣ
kaasu - ಹಣ
suura - ಒಳ್ಳೆಯವನು
Buckaasuura - ರಾಕ್ಷಸ
ಈ ಮೂರು ಅರ್ಥಗಳನ್ನ ಒಟ್ಟುಗೂಡಿಸಿದ್ರೆ, ''ಒಬ್ಬ ಒಳ್ಳೆ ವ್ಯಕ್ತಿ ದುಡ್ಡು ಹಿಂದೆ ಹೋದ್ರೆ ಹೇಗೆ ರಾಕ್ಷಸ ಆಗ್ತಾನೆ ಎನ್ನುವುದು ಚಿತ್ರದ ಕಥೆ''.


Click it and Unblock the Notifications











