»   » ಮಾಧ್ಯಮಗಳಲ್ಲಿ ಬಂದ ವರದಿಗಳೆಲ್ಲ ಸುಳ್ಳು ಎಂದ ಸದಾಶಿವ ಬ್ರಹ್ಮಾವರ್

ಮಾಧ್ಯಮಗಳಲ್ಲಿ ಬಂದ ವರದಿಗಳೆಲ್ಲ ಸುಳ್ಳು ಎಂದ ಸದಾಶಿವ ಬ್ರಹ್ಮಾವರ್

Posted By:
Subscribe to Filmibeat Kannada

600ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ್ ಬೀದಿಪಾಲಾಗಿದ್ದಾರೆ. ಮನೆಯಿಂದ ಮಕ್ಕಳೇ ಅವರನ್ನ ಹೊರಹಾಕಿದ್ದಾರೆ. ಊಟಕ್ಕೆ ಹಣವಿಲ್ಲದೆ, ಮಲಗಲು ಜಾಗವಿಲ್ಲದೆ ಸದಾಶಿವ ಬ್ರಹ್ಮಾವರ್ ಪರದಾಡುತ್ತಿದ್ದಾರೆ ಅಂತೆಲ್ಲಾ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಆದ್ರೆ, ಅದೆಲ್ಲ ಶುದ್ಧ ಸುಳ್ಳು ಎನ್ನುತ್ತಾರೆ ಸದಾಶಿವ ಬ್ರಹ್ಮಾವರ್.

ಸದಾಶಿವ ಬ್ರಹ್ಮಾವರ್ ಗೆ ನೆರವು ನೀಡಲು ಮುಂದಾದ ಡಾ.ರಾಜ್ ಕುಟುಂಬ

''ನಾನು ಬೈಲಹೊಂಗಲದಲ್ಲಿರುವ ನನ್ನ ಮಗನ ಮನೆಯಲ್ಲಿ ಆರಾಮಾಗಿದ್ದೀನಿ'' ಎಂದು ಸ್ವತಃ ಸದಾಶಿವ ಬ್ರಹ್ಮಾವರ್ ಅವರೇ ಹೇಳಿದ್ದಾರೆ.

Media reports are not true says Sadashiva Brahmavar

ಬೀದಿಪಾಲಾಗಿದ್ದ ಹಿರಿಯ ನಟನಿಗೆ ಕಿಚ್ಚ ಸುದೀಪ್ ನೆರವು

''ನಾನು ಚೆನ್ನಾಗಿದ್ದೇನೆ. ನನ್ನ ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ'' ಎನ್ನುತ್ತಾರೆ ಸದಾಶಿವ ಬ್ರಹ್ಮಾವರ್.

ಬೈಲಹೊಂಗಲದಲ್ಲಿ ಪ್ರತ್ಯಕ್ಷವಾದ ಹಿರಿಯ ನಟ ಸದಾಶಿವ ಬ್ರಹ್ಮಾವರ್

sadashiva brahmavar : controversy new twist

''ಉಡುಪಿ ಜಿಲ್ಲೆಯ ಬ್ರಹ್ಮಾವರ ನಮ್ಮ ಊರು. ಕೆಲಸದ ನಿಮಿತ್ತ ಎರಡ್ಮೂರು ದಿನಗಳ ಹಿಂದೆ ಅಲ್ಲಿಗೆ ಹೋಗಿದ್ದೆ ಹೊರತು ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತಲ್ಲ. ಮಕ್ಕಳು ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನಗೆ ಯಾವುದೇ ತೊಂದರೆ ನೀಡುತ್ತಿಲ್ಲ'' ಎಂದು ಸದಾಶಿವ ಬ್ರಹ್ಮಾವರ್ ತಿಳಿಸಿದ್ದಾರೆ.

English summary
''Media reports are not true'' says Kannada Actor Sadashiva Brahmavar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada