'ಒಡೆಯ' ಚಿತ್ರವನ್ನು ನೋಡಿ ಮೆಚ್ಚಿದ ದರ್ಶನ್ ತಾಯಿ ಮೀನಾ ತೂಗುದೀಪ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ತಮಿಳಿನ 'ವೀರಂ' ಚಿತ್ರದ ರೀಮೇಕ್ ಆಗಿದ್ದರೂ, 'ಒಡೆಯ' ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಕ್ಕಿದೆ. 'ದಾಸ'ನ ಅಭಿಮಾನಿಗಳಂತೂ 'ಒಡೆಯ'ನಿಗೆ ಜೈಕಾರ ಹಾಕುತ್ತಿದ್ದಾರೆ.

ಬಿಡುಗಡೆ ಆದ ಮೊದಲ ದಿನ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡ 'ಒಡೆಯ' ಸಿನಿಮಾ ಸುಮಾರು 3 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಸೆಂಟಿಮೆಂಟ್, ಆಕ್ಷನ್, ಕಾಮಿಡಿ, ಲವ್ ಎಲ್ಲಾ ಮಿಕ್ಸ್ ಆಗಿರುವ 'ಒಡೆಯ' ಚಿತ್ರವನ್ನ ದರ್ಶನ್ ತಾಯಿ ಮೀನಾ ತೂಗುದೀಪ ಕಣ್ತುಂಬಿಕೊಂಡಿದ್ದಾರೆ.

ಮೊಮ್ಮಗ ಚಂದು ಜೊತೆಗೆ ಮಾಲ್ ವೊಂದರಲ್ಲಿ ಮೀನಾ ತೂಗುದೀಪ 'ಒಡೆಯ' ಚಿತ್ರವನ್ನ ವೀಕ್ಷಿಸಿದ್ದಾರೆ. ಕೌಟುಂಬಿಕ ಚಿತ್ರವಾಗಿರುವ 'ಒಡೆಯ' ಕಥೆ ಮೀನಾ ತೂಗುದೀಪ ಅವರ ಮನಸ್ಸಿಗೆ ಖುಷಿ ಕೊಟ್ಟಿದೆ. ದರ್ಶನ್ ಮತ್ತು ಸನಾ ತಿಮ್ಮಯ್ಯ ಆಕ್ಟಿಂಗ್ ಗೆ ಭೇಷ್ ಎಂದಿದ್ದಾರೆ ಮೀನಾ ತೂಗುದೀಪ.

meena-thoogudeepa-watches-darshan-starrer-odeya-movie

ಅಸಲಿಗೆ, 'ಒಡೆಯ' ಚಿತ್ರದ ನಾಯಕಿ ಪಾತ್ರಕ್ಕೆ ಸನಾ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಿ ಎಂದು ನಿರ್ಮಾಪಕ ಸಂದೇಶ್ ಗೆ ಹೇಳಿದ್ದು ಮೀನಾ ತೂಗುದೀಪ. ಇದೀಗ ತೆರೆ ಮೇಲೆ ದರ್ಶನ್ ಮತ್ತು ಸನಾ ಕಾಂಬಿನೇಶನ್ ನೋಡಿ ಮೀನಾ ತೂಗುದೀಪ ಸಂತಸ ಪಟ್ಟಿದ್ದಾರೆ.

ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳಿರುವ 'ಒಡೆಯ' ಚಿತ್ರ 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. 'ಕುರುಕ್ಷೇತ್ರ' ಮತ್ತು 'ಯಜಮಾನ' ಚಿತ್ರದಂತೆ ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ 'ಒಡೆಯ'ನ ಆರ್ಭಟ ಪಕ್ಕಾ.!

More from Filmibeat

English summary
Meena Thoogudeepa watches Darshan starrer Odeya movie.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X