»   » ಲಿವ್ ಇನ್ ನಂಬಿ ಮೀರಾ ಜಾಸ್ಮಿನ್ ಮದುವೆಗೆ ಗೋಲಿ

ಲಿವ್ ಇನ್ ನಂಬಿ ಮೀರಾ ಜಾಸ್ಮಿನ್ ಮದುವೆಗೆ ಗೋಲಿ

Posted By:
Subscribe to Filmibeat Kannada
ಮಲಯಾಳಂ ಮೂಲದ ಖ್ಯಾತ ನಟಿ ಮೀರಾ ಜಾಸ್ಮಿನ್ 'ಲಿವ್ ಇನ್ ರಿಲೇಶನ್ ಶಿಪ್' ಒಪ್ಪಿಕೊಂಡಿದ್ದಾರೆ. ಲಿವ್ ಇನ್ ಸಂಬಂಧವನ್ನೇ ಸದ್ಯಕ್ಕೆ ಅಪ್ಪಿಕೊಂಡಿರುವ ಮೀರಾ ಜಾಸ್ಮಿನ್, ಮ್ಯಾಂಡೋಲಿನ್ ವಾದಕ ಯು ರಾಜೇಶ್ ಅವರ ಜೊತೆ ವಾಸಿಸುತ್ತಿದ್ದಾರೆ. ಅವರಿಗೆ ಮದುವೆಯಾಗುವ ಯಾವುದೇ ಯೋಚನೆ ಇಲ್ಲವಂತೆ.

ದಕ್ಷಿಣ ಭಾರತದಲ್ಲಿ ಮೀರಾ ಜಾಸ್ಮಿನ್ ಹೆಸರು ಚಿರಪರಿಚಿತ. ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿ ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೆಲದಿನಗಳ ಹಿಂದೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ "ನಾನು ಮ್ಯಾಂಡೋಲಿನ್ ವಾದಕ ರಾಜೇಶ್ ಅವರನ್ನು ಇಷ್ಟಪಟ್ಟಿದ್ದೇನೆ. ಮದುವೆಯಾಗುವುದಾದರೆ ಅವರನ್ನೇ ಎಂದಿದ್ದರು ಮೀರಾ ಜಾಸ್ಮಿನ್.

ಆದರೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಅವರು "ನಾನು ಇಷ್ಟಪಟ್ಟಿರುವ ರಾಜೇಶ್ ಅವರೊಂದಿಗೇ ಈಗ ನಾನು ವಾಸಿಸುತ್ತಿದ್ದೇನೆ. ನಮ್ಮದು ಲಿವ್ ಇನ್ ರಿಲೇಶನ್ ಶಿಪ್. ಮದುವೆಯಾಗುವ ಯೋಚನೆ ಸದ್ಯಕ್ಕಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮೀರಾ ಜಾಸ್ಮಿನ್ ತಾವು ಕದ್ದು-ಮುಚ್ಚಿ ಏನನ್ನೂ ಮಾಡುತ್ತಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.

ಮದುವೆ ಬಗ್ಗೆ ಕೇಳಲಾದ ಪ್ರಶ್ನೆಗೆ "ನಾನು ಈಗಾಗಲೇ ಅವರ ಜೊತೆಯಲ್ಲೇ ವಾಸಿಸುತ್ತಿದ್ದೇನೆ ಅಂದಮೇಲೆ ಮತ್ತೆ ಮದುವೆ ಯಾಕಾಗಬೇಕು. ನಾನು ಈಗಾಗಲೇ ಅವರೊಂದಿಗೆ ನನ್ನ ಬದುಕು ನಡೆಸುತ್ತಿದ್ದೇನೆ. ನನಗೆ ಮದುವೆ ಎಂಬ ಸಂಪ್ರದಾಯದಲ್ಲಿ ನಂಬಿಕೆಯಿಲ್ಲ. ಹೀಗಾಗಿ ನಾನು ಆ ಪದ್ಧತಿಗೆ ಒಳಗಾಗದೇ ರಾಜೇಶ್ ಅವರೊಂದಿಗೆ ಬದುಕು ನಡೆಸುತ್ತಿದ್ದೇನೆ.

ನನ್ನ ಪ್ರಕಾರ ಮದುವೆಯಾಗದೇ ಜೀವಿಸುವುದರಲ್ಲಿ ಹಲವಾರು ಅನುಕೂಲತೆಗಳಿವೆ. ವಿಚ್ಛೇದನ ಹಾಗೂ ಕೋರ್ಟ್-ಕಾನೂನು ಎಂಬ ಜಂಜಾಟವಿಲ್ಲದಿರುವುದು ಅದರಲ್ಲಿ ಮುಖ್ಯವಾದ ಅಂಶಗಳಲ್ಲೊಂದು. ನಾನು ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳ ಮದುವೆ ಹಾಗೂ ಡೈವೋರ್ಸ್ ಗಳನ್ನು ಕಣ್ಣಾರೆ ನೋಡಿದ್ದೇನೆ. ಹಾಗಾಗಿ ನಾನು ಮದುವೆ ಎಂಬ ಸಂಪ್ರದಾಯದಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ" ಎಂದಿದ್ದಾರೆ. (ಏಜೆನ್ಸೀಸ್)

English summary
Actress Meera Jasmine is in a live-in relationship with Mandolin maestro U. Rajesh and has no plans to marry. Malayalam based this actress acted in many languages
 
Please Wait while comments are loading...