ಸಾಮಾಜಿಕ ಜಾಲತಾಣದಲ್ಲಿ 'ಮೀಸೆ ಮತ್ತು ಜಡೆ' ವೈರಲ್
ಯೂ ಟ್ಯೂಬ್ ನಲ್ಲಿ 'ಯಜಮಾನ' ಮತ್ತು 'ಪೈಲ್ವಾನ್' ರೀತಿಯ ದೊಡ್ಡ ದೊಡ್ಡ ಸಿನಿಮಾಗಳ ವಿಡಿಯೋಗಳು ಟ್ರೆಂಡ್ ಆಗುತ್ತಿವೆ. ಇನ್ನೊಂದು ಕಡೆ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೇ 'ಮೀಸೆ ಮತ್ತು ಜಡೆ'.
'ಮೀಸೆ ಮತ್ತು ಜಡೆ' ವಿಡಿಯೋ ದೊಡ್ಡ ಪ್ರಶಂಸೆ ಪಡೆದಿದೆ. ಸಖತ್ ಕಾಮಿಡಿಯಾಗಿರುವ ಈ ವಿಡಿಯೋ ಇಂದಿನ ಜಮಾನಕ್ಕೆ ಹೇಳಿ ಮಾಡಿಸಿದ ಹಾಗಿದೆ. ಅಂದಹಾಗೆ, ಈ ವಿಡಿಯೋದ ಹಿಂದೆ ಇರುವವರು ನಿರ್ದೇಶಕ ಜೋತಿರಾವ್ ಮೋಹಿತ್. ಈ ಹಿಂದೆ ಇವರು 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡಿ' ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಜೋತಿರಾವ್ ಮೋಹಿತ್ ಒಂದು ಹೊಸ ಸಿನಿಮಾಗೆ ನಿರ್ಮಾಪಕರ ಹುಡುಕಾಟ ನಡೆಸಿದ್ದರು. ತಮ್ಮ ಪ್ರತಿಭೆ ತೋರಿಸುವ ಉದ್ದೇಶದಿಂದ 'ಮೀಸೆ ಮತ್ತು ಜಡೆ' ವಿಡಿಯೋ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಲು ಶುರುವಾಯ್ತು.

'ಮೀಸೆ ಮತ್ತು ಜಡೆ' ವಿಡಿಯೋಗೆ ಸಿಕ್ಕ ಪ್ರತಿಕ್ರಿಯೆ ಜೋತಿರಾವ್ ಮೋಹಿತ್ ಅವರಿಗೂ ಶಕ್ತಿ ತುಂಬಿದೆ ಈ ವಿಡಿಯೋ ನೋಡಿ ಚಿತ್ರರಂಗದ ಅನೇಕರು ಕರೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವು ನಿರ್ಮಾಪಕರ ಜೊತೆಗೆ ಮಾತುಕತೆಗಳು ಸಹ ನಡೆಯುತ್ತಿದೆಯಂತೆ.
ಯುವ ಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡುವ ಜೋತಿರಾವ್ ಮೋಹಿತ್ 'ಮೀಸೆ ಮತ್ತು ಜಡೆ'ಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ಅಂದಹಾಗೆ, ಈ ವಿಡಿಯೋದಲ್ಲಿ ಆನಂದ್ ವೈಭವ್, ಪ್ರತೀಕ್ ಶೆಟ್ಟಿ ಹಾಗೂ ತನು ಗೌಡ ನಟಿಸಿದ್ದಾರೆ.


Click it and Unblock the Notifications











