For Quick Alerts
  ALLOW NOTIFICATIONS  
  For Daily Alerts

  ಈ ಜೂನಿಯರ್ ದೇವರಾಜ್ ಯಾರು ಅಂತ ನಿಮಗೆ ಗೊತ್ತೇ?

  By Harshitha
  |

  ನೋಡೋಕೆ ಒಂದು ಆಂಗಲ್ ನಿಂದ ಡೈನಾಮಿಕ್ ಸ್ಟಾರ್ ದೇವರಾಜ್ ರಂತೆ ಕಾಣುವ ಈ ಯುವ ಪ್ರತಿಭೆ ಹೆಸರು ಸೂರ್ಯ ಅಂತ. ಮೂಲತಃ ಮೈಸೂರಿನವರು. ಬಿ.ಕಾಂ ಪದವೀಧರ.

  ದೇವರಾಜ್ ರವರನ್ನ ಕೊಂಚ ಹೋಲುತ್ತಾರೆ ಎಂಬ ಕಾರಣಕ್ಕೆ ನಿರ್ದೇಶಕ ರತ್ನಜ, ಯುವ ಪ್ರತಿಭೆ ಸೂರ್ಯಗೆ 'ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದ್ದಾರೆ. ['ನೆನಪಿರಲಿ' ರತ್ನಜ ಅವರ ಹೊಸ ಚಿತ್ರ 'ಪ್ರೀತಿಯಲ್ಲಿ ಸಹಜ']

  'ಪ್ರೀತಿಯಲ್ಲಿ ಸಹಜ' ಚಿತ್ರದಲ್ಲಿ ನಿರ್ದೇಶಕ ರತ್ನಜ ಮೂರು ಕಾಲ ಘಟ್ಟದಲ್ಲಿ ಪ್ರೀತಿಯ ಕಥೆ ಹೇಳಿದ್ದಾರೆ. ಅದರಲ್ಲೊಂದಾದ ದೇವರಾಜ್ ಮತ್ತು ಸುಹಾಸಿನಿ ಅವರ ತಾರುಣ್ಯದ ಪ್ರೇಮ ಕಥೆಯಲ್ಲಿ, ಡೈನಾಮಿಕ್ ಸ್ಟಾರ್ ರವರ ತಾರುಣ್ಯ ಹೋಲುವ ಯುವಕನ ಹುಡುಕಾಟದಲ್ಲಿದ್ದಾಗ ರತ್ನಜ ಕಣ್ಣಿಗೆ ಸೂರ್ಯ ಬಿದ್ದಿದ್ದಾರೆ.

  ಹಾಗ್ನೋಡಿದರೆ, ರತ್ನಜ ರವರಿಗೆ ಸೂರ್ಯ ಹಳೇ ಪರಿಚಯ. ರತ್ನಜ ರವರ 'ಪ್ರೇಮಿಸಂ' ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಸೂರ್ಯ ಅಭಿನಯಿಸಿದ್ದರು. ಅದಾದ ಬಳಿಕ ಮಂಡ್ಯ ರಮೇಶ್ ರವರ 'ನಟನ' ಡ್ರಾಮಾ ಸ್ಕೂಲ್ ನಲ್ಲಿ ನಟನೆ ಕಲಿತ ಸೂರ್ಯ, 'ದೇವಿ' ಮತ್ತು 'ಅಕ್ಕ' ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.

  ಅಂದು 'ಪ್ರೇಮಿಸಂ' ಚಿತ್ರದಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಸೂರ್ಯ, ಇಂದು 'ಪ್ರೀತಿಯಲ್ಲಿ ಸಹಜ' ಚಿತ್ರದ ನಾಯಕನಾಗಿದ್ದಾರೆ. ''ಮುಹೂರ್ತದ ದಿನ ಕೂಡ ಚಿತ್ರಕ್ಕೆ ನಾನೇ ಹೀರೋ ಅನ್ನೋ ವಿಷಯ ನನಗೆ ಗೊತ್ತಿರ್ಲಿಲ್ಲ. ಸಂಜೆ ಸರ್ಪ್ರೈಸ್ ಕೊಡ್ತೀನಿ ಅಂತ ರತ್ನಜ ಸರ್ ಹೇಳಿದರು. ಹಾಗೇ, ನಾನೇ ಹೀರೋ ಅಂತ ಸರ್ಪ್ರೈಸ್ ನೀಡಿದರು'' ಎನ್ನುತ್ತಾರೆ ನಟ ಸೂರ್ಯ. ['ಪ್ರೀತಿಯಲ್ಲಿ ಸಹಜ' ನಿರ್ದೇಶಕ ರತ್ನಜ ಜೊತೆ ಚಿಟ್-ಚಾಟ್]

  ''ದೇವರಾಜ್ ರವರ ತಾರುಣ್ಯದ ಪಾತ್ರ ಕೊಟ್ಟಾಗ ಸ್ವಲ್ಪ ಭಯ ಆಯ್ತು. ಆನಂತರ ಅವರ ಡೈಲಾಗ್, ಮ್ಯಾನರಿಸಂ ಎಲ್ಲಾ ಪ್ರ್ಯಾಕ್ಟೀಸ್ ಮಾಡ್ದೆ. ರತ್ನಜ ಸರ್ ಇರುವಾಗ ಯಾವುದೂ ಕಷ್ಟ ಆಗ್ಲಿಲ್ಲ'' ಅಂತಾರೆ ಸೂರ್ಯ.

  ದೇವರಾಜ್ ರವರ ತಾರುಣ್ಯ ಪಾತ್ರದ ಜೊತೆ ದೇವರಾಜ್ ಮಗನ ಪಾತ್ರವೆರಡನ್ನೂ ಸೂರ್ಯ ಪೋಷಿಸಿದ್ದಾರೆ. ಸೂರ್ಯ ಜೊತೆ ಅಕ್ಸಾ ಡ್ಯುಯೆಟ್ ಹಾಡಿದ್ದಾರೆ.

  ಪ್ರೇಮಿಗಳ ದಿನದ ಪ್ರಯುಕ್ತ ಫೆಬ್ರವರಿ 12 ರಂದು 'ಪ್ರೀತಿಯಲ್ಲಿ ಸಹಜ' ಚಿತ್ರ ಬಿಡುಗಡೆ ಆಗುತ್ತಿದೆ. ನೋಡೋಕೆ ನೀವು ರೆಡಿನಾ.?

  English summary
  Kannada Actor Surya shares his experience of working with Director Ratnaja in Kannada Movie 'Preethiyalli Sahaja'. The movie is releasing on February 12th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X