»   » ನಿರ್ದೇಶಕ ರತ್ನಜ ಬಗ್ಗೆ ನಟಿ ಅಕ್ಸಾ ಭಟ್ ಗಿದ್ದ ಡೌಟ್ ಏನು?

ನಿರ್ದೇಶಕ ರತ್ನಜ ಬಗ್ಗೆ ನಟಿ ಅಕ್ಸಾ ಭಟ್ ಗಿದ್ದ ಡೌಟ್ ಏನು?

Posted By:
Subscribe to Filmibeat Kannada

ನಟನೆ ಬಗ್ಗೆ ಎಳ್ಳಷ್ಟೂ ಗೊತ್ತಿರದ ಅಕ್ಸಾ ಭಟ್ ಗೆ ನಿರ್ದೇಶಕ ರತ್ನಜ ಮೊದಲ ಬಾರಿ ಫೋನ್ ಮಾಡಿ 'ಪ್ರೀತಿಯಲ್ಲಿ ಸಹಜ' ಚಿತ್ರಕ್ಕೆ ಆಫರ್ ಮಾಡಿದಾಗ, ಅಕ್ಸಾ ಭಟ್ ಡಢ್ ಅಂತ ಫೋನ್ ಕಟ್ ಮಾಡಿದ್ರಂತೆ. ''ಅವರು ಒಳ್ಳೆ ನಿರ್ದೇಶಕರು ಅಲ್ಲಾ ಅನ್ಸುತ್ತೆ. ಅದಕ್ಕೆ ಹೊಸಬರನ್ನ ಹುಡುಕ್ತಾಯಿದ್ದಾರೆ'' ಅಂತ ಅಕ್ಸಾ ಭಟ್ ಅಪ್ಪ-ಅಮ್ಮ ಹೇಳಿದ್ರಂತೆ.!

- ಹೀಗೆ ಮಾಡೆಲಿಂಗ್ ಕ್ಷೇತ್ರದಿಂದ ನಟನೆಗೆ ಹಾರಿ ಬಂದ ಬಗ್ಗೆ 'ಪ್ರೀತಿಯಲ್ಲಿ ಸಹಜ' ಚಿತ್ರದ ನಾಯಕಿ ಅಕ್ಸಾ ಭಟ್ ತಮ್ಮ ಫ್ಲ್ಯಾಶ್ ಬ್ಯಾಕ್ ಬಿಚ್ಚಿಟ್ಟರು.

meet-actress-aqsa-bhatt-heroine-of-kannada-movie-preethiyalli-sahaja

ಮೂಲತಃ ಕಾಶ್ಮೀರಿ ಆಗಿರುವ ಅಕ್ಸಾ ಭಟ್ ಬೆಂಗಳೂರಿನ ರೇಡಿಯನ್ಸ್ ಕಾಲೇಜ್ ನಲ್ಲಿ ಆಡಿಯೋಲಜಿ ಪದವಿ ಪಡೆದಿದ್ದಾರೆ. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಗೆ ಅಡಿಯಿಟ್ಟಿದ್ದ ಅಕ್ಸಾ ಭಟ್ ಫೋಟೋಗಳನ್ನ ನೋಡಿ ನಿರ್ದೇಶಕ ರತ್ನಜ ತಮ್ಮ 'ಪ್ರೀತಿಯಲ್ಲಿ ಸಹಜ' ಚಿತ್ರದ ನಾಯಕಿ ಪಾತ್ರಕ್ಕೆ ಓಕೆ ಮಾಡಿದ್ರಂತೆ. ['ಪ್ರೀತಿಯಲ್ಲಿ ಸಹಜ' ನಿರ್ದೇಶಕ ರತ್ನಜ ಜೊತೆ ಚಿಟ್-ಚಾಟ್]

ಈ ಬಗ್ಗೆ ಅಕ್ಸಾ ಭಟ್ ಜೊತೆ ಮಾತನಾಡಲು ರತ್ನಜ ಫೋನ್ ಮಾಡಿದಾಗ ಅಕ್ಸಾ ಯಾವುದೇ ಪ್ರತಿಕ್ರಿಯೆ ನೀಡದೆ ಫೋನ್ ಕಟ್ ಮಾಡಿದ್ರಂತೆ. ''ಅವರು ಯಾರು ಅಂತಲೇ ನನಗೆ ಗೊತ್ತಿರ್ಲಿಲ್ಲ. ಅದಕ್ಕೆ ಫೋನ್ ಕಟ್ ಮಾಡಿಬಿಟ್ಟೆ. ನಂತರ ನನ್ನ ಫೋಟೋಗ್ರಾಫರ್ ನನಗೆ ಫೋನ್ ಮಾಡಿ ಅವರ ಬಗ್ಗೆ ಹೇಳಿದರು.''

meet-actress-aqsa-bhatt-heroine-of-kannada-movie-preethiyalli-sahaja

''ಪಾರ್ಟ್ ಟೈಮ್ ಅಂತ ಮಾಡೆಲಿಂಗ್ ಮಾಡ್ತಿದ್ದೆ. ನನಗೆ ನಟನೆ ಬಗ್ಗೆ ಏನೂ ಗೊತ್ತಿಲ್ಲ. ನನ್ನ ಫ್ಯಾಮಿಲಿ ಕೂಡ ನಟನೆ ಅಂದ್ರೆ ಒಪ್ಪುವುದಿಲ್ಲ. ಇದನ್ನ ಹೇಳಿದಕ್ಕೆ ರತ್ನಜ ಕಾಶ್ಮೀರಕ್ಕೆ ಬಂದು ನಮ್ಮ ಫ್ಯಾಮಿಲಿ ಜೊತೆ ಮಾತನಾಡಿದರು.''

''ಒಳ್ಳೆ ನಿರ್ದೇಶಕರು ಅಲ್ಲಾ ಅನ್ಸುತ್ತೆ. ಅದಕ್ಕೆ ಹೊಸಬರ ಸಿನಿಮಾ ಮಾಡುತ್ತಿದ್ದಾರೆ ಅಂತ ನನ್ನ ಅಪ್ಪ-ಅಮ್ಮ ಕೂಡ ಹೇಳಿದ್ರು. ಆದ್ರೆ, ನಂತರ ಅವರ ಚಿತ್ರಗಳನ್ನ ನೋಡಿದಾಗ ಅವರ ಪ್ರತಿಭೆ ನನಗೆ ಅರಿವಾಯ್ತು. ನನಗೆ ಕನ್ನಡ ಭಾಷೆ ಬರಲ್ಲ. ನಾನು ನಿಮ್ಮ ಸಿನಿಮಾ ಹಾಳು ಮಾಡ್ತೀನಿ. ಬೇರೆಯವರನ್ನ ಹಾಕೊಳ್ಳಿ. ನಾನು ಬೇಡ ಅಂತ ಹೇಳಿದರೂ, ರತ್ನಜ ಕೇಳಲಿಲ್ಲ.'' [ಈ ಜೂನಿಯರ್ ದೇವರಾಜ್ ಯಾರು ಅಂತ ನಿಮಗೆ ಗೊತ್ತೇ?]

meet-actress-aqsa-bhatt-heroine-of-kannada-movie-preethiyalli-sahaja

''ನಟಿಸುವುದು ಬೇಕಾಗಿಲ್ಲ. ಈಗ ನೀನು ಇರುವ ಹಾಗೇ ಇರು. ಅದೇ ನಿನ್ನ ಪಾತ್ರ ಅಂತ ಹೇಳಿದ್ರು. ನನ್ನ ತರಹ ನಡವಳಿಕೆ ಇರುವ ಹುಡುಗಿಯನ್ನೇ ಅವರು ಹುಡುಕುತ್ತಿದ್ದರು ಅಂತ ಆಗಲೇ ನನಗೆ ಗೊತ್ತಾಗಿದ್ದು'' ಅಂತ 'ಪ್ರೀತಿಯಲ್ಲಿ ಸಹಜ' ಚಿತ್ರಕ್ಕೆ ತಾವು ಆಯ್ಕೆ ಆದ ಬಗೆಯನ್ನ ನಟಿ ಅಕ್ಸಾ ಭಟ್ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡರು.

'ಪ್ರೀತಿಯಲ್ಲಿ ಸಹಜ' ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಅಕ್ಸಾ ಭಟ್ ಎ.ಎಮ್.ಆರ್.ರಮೇಶ್ ನಿರ್ದೇಶನದ 'ಗೇಮ್' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ ಮಾಲಿವುಡ್ ನಲ್ಲೂ ಬಿಜಿಯಾಗಿದ್ದಾರೆ.

meet-actress-aqsa-bhatt-heroine-of-kannada-movie-preethiyalli-sahaja

ಅಕ್ಸಾ ಭಟ್ ಅಭಿನಯದ ಮೊದಲ ಚಿತ್ರ 'ಪ್ರೀತಿಯಲ್ಲಿ ಸಹಜ' ಫೆಬ್ರವರಿ 12 ರಂದು ಬಿಡುಗಡೆ ಆಗುತ್ತಿದೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

English summary
Actress Aqsa Bhatt shares her experience of working with Director Ratnaja in Kannada Movie 'Preethiyalli Sahaja'. The movie is releasing on February 12th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada