»   » ಬನ್ನಿ ಆಡೋಣ ಚೋಟಾ ಭೀಮ್ ಜೊತೆ ಜೂಟಾಟ

ಬನ್ನಿ ಆಡೋಣ ಚೋಟಾ ಭೀಮ್ ಜೊತೆ ಜೂಟಾಟ

Posted By:
Subscribe to Filmibeat Kannada

ಪೋಗೋ ವಾಹಿನಿಯ ನಂಬರ್ ಒನ್ ಕಾರ್ಯಕ್ರಮ 'ಚೋಟಾ ಭೀಮ್'. ಈ ಅನಿಮೇಷನ್ ಪ್ರೋಗ್ರಾಂ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಡೋಲಕ್ ಪುರಿಯ ಈ ಭೀಮ ತನ್ನದೇ ಗೆಳೆಯರ ಬಳಗ ಚುಟುಕಿ, ರಾಜು, ಕಾಲಿಯಾ, ಜಗ್ಗು ಜೊತೆ ಸೇರಿಕೊಂಡು ಹಲವಾರು ಸಾಹಸಗಳನ್ನು ಮಾಡುತ್ತಿರುತ್ತಾನೆ.

ಅವನು ಮಾಡುವ ಸಾಹಸಗಳನ್ನು ನೋಡುತ್ತಾ ಮಕ್ಕಳು ಕುರ್ಚಿ ಬಿಟ್ಟು ಕದುಲುವುದಿಲ್ಲ. ಕಾರ್ಟೂನ್ ನೆಟ್ ವರ್ಕ್, ಡಿಸ್ನಿ, ಹಂಗಾಮಾ, ಸಬ್ ಟಿವಿಯ ಬೆನ್ ಟೆನ್, ಡೊರೆಮನ್, ಮಿ.ಬೀನ್ ಮತ್ತು ಟಾಮ್ ಆಂಡ್ ಜೆರ್ರಿ ಕಾರ್ಯಕ್ರಮಗಳಿಗೆ ಹೋಲಿಸಿದರೆ 'ಚೋಟಾ ಭೀಮ್' ಕಾರ್ಯಕ್ರಮ ತನ್ನದೇ ಶೈಲಿಯಿಂದಾಗಿ ಬಹಳಷ್ಟು ಜನಪ್ರಿಯವಾಗಿದೆ. ಮಕ್ಕಳ ಮನಸ್ಸನ್ನೂ ಸೂರೆಗೊಂಡಿದೆ.

Meet Chhota Bheem

ಚಿಣ್ಣರ ಜೊತೆ ಜೂಟಾಟ ಆಡಲು ಈಗ ಬೆಂಗಳೂರಿಗೆ ಬರುತ್ತಿದ್ದಾನೆ ಚೋಟಾ ಭೀಮ್. . Kidzee ಸಂಸ್ಥೆಯ ಸಹಯೋಗದಲ್ಲಿ Chhota Bheem and the throne of Bali ಆಯೋಜಿಸಿರುವ ಕಾರ್ಯಕ್ರಮದಲ್ಲಿ ಚೋಟಾ ಭೀಮ್ ನನ್ನು ಚಿಣ್ಣರು ಭೇಟಿ ಮಾಡಬಹುದು.

ಈ ಕಾರ್ಟೂನ್ ಸೂಪರ್ ಹೀರೋ ಜೊತೆ ಡಾನ್ಸ್ ಮಾಡಬಹುದು, ಫ್ಯಾನ್ಸಿ ಡ್ರೆಸ್ ಕೊಂಡುಕೊಳ್ಳಬಹುದು, ಟ್ಯಾಟ್ಯೂ ಹಾಕಿಸಿಕೊಳ್ಳಬಹುದು. ಇದರ ಜೊತೆಗೆ ಇನ್ನೊಂದಿಷ್ಟು ತಮಾಷೆ, ಮನರಂಜನೆ ಕಾರ್ಯಕ್ರಮಗಳು ಇರುತ್ತವೆ.

ಪೋಷಕರೊಂದಿಗೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಇಲ್ಲಿ ಅನೇಕ ಬಹುಮಾನಗಳು, ಸೂಪರ್ ತಾಯಂದಿರಿಗಾಗಿ ಲಡ್ಡು ಮೇಕಿಂಗ್ ಮುಂತಾದ ಚಟುವಟಿಕೆಗಳು ಇರುತ್ತವೆ. ಇದೇ ಶನಿವಾರ (ಜೂನ್. 29) ಮಧ್ಯಾಹ್ನ 2 ರಿಂದ 5 ಗಂಟೆ ತನಕ.

ಕಾರ್ಯಕ್ರಮ ನಡೆಯುವ ಸ್ಥಳ: St. Thomas Parish Hall (Roof Top), Christ School Road, Near Diary Circle,
Bangalore - 560 029. (ಒನ್ಇಂಡಿಯಾ ಕನ್ನಡ)

English summary
Meet the bare-chested homegrown legendary animation superstar 'Chhota Bheem' in Bangalore on Saturday, June 29th, 2013. Venue: St. St. Thomas Parish Hall (Roof Top), Christ School Road, Near Diary Circle, Bangalore – 560 029.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada