Sudeep- MN Kumar controversy: ರವಿಚಂದ್ರನ್ ಮನೆಯಲ್ಲಿ ಮಹತ್ವದ ಸಭೆ: ಶಿವಣ್ಣ, ಸುದೀಪ್, ಕುಮಾರ್ ಭಾಗಿ
ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿರುವ ಸುದೀಪ್ ಹಾಗೂ ಎಂ. ಎನ್ ಕುಮಾರ್ ಕಾಲ್‌ಶೀಟ್ ಜಟಾಪಟಿ ಸುಖಾಂತ್ಯ ಕಾಣುವ ಸುಳಿವು ಸಿಕ್ಕಿದೆ. ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಚಿತ್ರರಂಗದ ಮುಖಂಡರ ಈ ವಿಚಾರದ ಬಗ್ಗೆ ಸಭೆ ಸೇರಿ ಮಾತನಾಡುತ್ತಿದ್ದಾರೆ. ಈ ಸಭೆಯಲ್ಲಿ ನಟ ಸುದೀಪ್ ಹಾಗೂ ನಿರ್ಮಾಪಕ ಎಂ. ಎನ್‌ಕುಮಾರ್ ಸಹ ಭಾಗಿ ಆಗಿದ್ದಾರೆ.
ನಟ ಸುದೀಪ್ ಸಿನಿಮಾ ಮಾಡುವುದಾಗಿ ಹೇಳಿ ಅಡ್ವಾನ್ಸ್ ಪಡೆದು ಕಾಲ್‌ಶೀಟ್ ಕೊಡದೇ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕ ಎಂ. ಎನ್ ಕುಮಾರ್ ಆರೋಪ ಮಾಡಿದ್ದರು. ಈ ಸಂಬಂಧ ಫಿಲ್ಮ್‌ಚೇಂಬರ್‌ಗೂ ಮನವಿ ಪತ್ರ ಸಲ್ಲಿಸಿದ್ದರು. ಇದೇ ವಿಚಾರವಾಗಿ ಫಿಲ್ಮ್ ಚೇಂಬರ್ ಸುದೀಪ್‌ಗೂ ಪತ್ರ ಬರೆದಿದ್ದರು. ಪ್ರಯೋಜನವಾಗದೇ ಇದ್ದಾಗ ಕುಮಾರ್ ಮಾಧ್ಯಮಗಳ ಮುಂದೆ ಬಂದು ನ್ಯಾಯ ಕೇಳಿದ್ದರು. ಇನ್ನು ಸುದೀಪ್ ನಂಬಿ ನಾನು ಹಣ ಹಣ ಕಳೆದುಕೊಂಡಿದ್ದೇನೆ ಅದನ್ನು ಅವರು ವಾಪಸ್ ನೀಡಬೇಕು ಎಂದು 'ಹುಚ್ಚ' ಸಿನಿಮಾ ನಿರ್ಮಾಪಕ ರೆಹಮಾನ್ ಆಗ್ರಹಿಸಿದ್ದರು.

ತಮ್ಮ ವಿರುದ್ಧ ಕುಮಾರ್, ರೆಹಮಾನ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸುದೀಪ್ ಹೇಳಿದ್ದರು. ಇದೇ ವಿಚಾರ ಸಂಬಂಧ ಖುದ್ದಾಗಿ ನಟ ಸುದೀಪ್ ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ ಥಂಡಾ ಹೊಡೆದ ನಿರ್ಮಾಪಕ ಎಂ. ಎನ್ ಕುಮಾರ್ ಕೋರ್ಟ್ ಕಛೇರಿ ಬೇಡ ಫಿಲ್ಮ್ ಚೇಂಬರ್‌ನಲ್ಲೇ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದರು. ಚೇಂಬರ್ ಮುಂದೆ ಧರಣಿ ಕುಳಿತ್ತಿದ್ದರು. ನಟ ರವಿಚಂದ್ರನ್ ಮನೆಗೆ ಹೋಗಿ ಮನವಿ ಮಾಡಿದ್ದರು. ಹಾಗಾಗಿ ಇದೀಗ ಕ್ರೇಜಿಸ್ಟಾರ್ ಮನೆಯಲ್ಲಿ ಸಭೆ ನಡೀತಿದೆ.
ಹೊಸಕೆರೆ ಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಭೆ ನಡೀತಿದ್ದು ಶಿವರಾಜ್ ಕುಮಾರ್, ರವಿಚಂದ್ರನ್, ಸುದೀಪ್, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್, ರಾಕ್ ಲೈನ್ ವೆಂಕಟೇಶ್, ಎಮ್. ಎನ್ ಕುಮಾರ್ ಸಭೆಯಲ್ಲಿ ಭಾಗಿ ಆಗಿದ್ದಾರೆ.


Click it and Unblock the Notifications











