»   » ರನ್ನ, ರಣವಿಕ್ರಮ ನಡುವೆ ನಡೆಯಲಿದೆ ಮೆಗಾಫೈಟ್

ರನ್ನ, ರಣವಿಕ್ರಮ ನಡುವೆ ನಡೆಯಲಿದೆ ಮೆಗಾಫೈಟ್

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಸದ್ಯದಲ್ಲೇ ಮತ್ತೊಂದು ಮೆಗಾಫೈಟ್ ಗೆ ಸಾಕ್ಷಿಯಾಗಲಿದೆ. ಸ್ಯಾಂಡಲ್ ವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳ ಸಿನಿಮಾಗಳು ಥಿಯೇಟರ್ ಅನ್ನೋ ರಣರಂಗದಲ್ಲಿ ಮದಗಜಗಳಂತೆ ಘೀಳಿಡಲಿವೆ. ಯುದ್ಧ ಸಾರಿ ಗುದ್ದಾಡಲಿವೆ.

ಪವರ್ ಸ್ಟಾರ್ ಪುನೀತ್ ಅಭಿನಯದ ರಣವಿಕ್ರಮ ಮತ್ತು ಕಿಚ್ಚ ಸುದೀಪ್ ಅಭಿನಯದ ರನ್ನ ಎರಡೂ ಚಿತ್ರಗಳ ಟೀಸರ್ ಹೊರ ಬಂದಿದೆ. ರಣವಿಕ್ರಮ ಸಿನಿಮಾ ಕೊನೆಯ ಹಂತದ ತಾಂತ್ರಿಕ ಕೆಲಸಗಳಲ್ಲಿ ಬಿಜಿಯಾಗಿದ್ದು ಚಿತ್ರತಂಡ ಕೊನೆಯ ಹಾಡಿನ ಚಿತ್ರೀಕರಣದಲ್ಲಿದೆ. [ಸುದೀಪ್ ಅಭಿನಯದ 'ಹೆಬ್ಬುಲಿ'ಯಲ್ಲಿ ಅಮಿತಾಬ್]

ಇನ್ನೊಂದು ಕಡೆ ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರತಂಡ ಶೂಟಿಂಗ್ ಜೊತೆ ಜೊತೆಗೆ ಎಡಿಟಿಂಗ್ ಮುಗಿಸಿಕೊಮಡು ಬಂದಿದೆ. ಈ ಎರಡೂ ಚಿತ್ರಗಳು ಫೆಬ್ರವರಿಯಲ್ಲಿ ಪ್ರೇಕ್ಷಕರ ಮುಂದಿರಲಿವೆ.

Mega battle takes place between Ranna and Rana Vikrama

ಏಕದಿನ ಕ್ರಿಕೆಟ್ ವಿಶ್ವಕಪ್ ಫೆಬ್ರವರಿ ತಿಂಗಳಲ್ಲಿ ಶುರುವಾಗಲಿದ್ದು ಚಿತ್ರಮಂದಿರಗಳು ಖಾಲಿ ಹೊಡೆಯೋ ಭಯದ ನಡುವೆ ಹೊಸಬರು ಚಿತ್ರಗಳನ್ನ ರಿಲೀಸ್ ಮಾಡೋ ಧೈರ್ಯ ತೋರಿಸೋದು ಕಷ್ಟ. ಉಳಿದ ಚಿತ್ರಗಳು ರಿಲೀಸ್ ಮಾಡದಿರೋ ಸಮಯಕ್ಕಾಗಿ ಕಾದಿರೋ ಸ್ಟಾರ್ ಸಿನಿಮಾಗಳು ಈ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಅಬ್ಬರಸಲಿವೆ.

ಅದ್ರಲ್ಲೂ ಈ ಇಬ್ಬರೂ ಸ್ಟಾರ್ ಗಳ ಸಿನಿಮಾಗಳು ಹೆಚ್ಚೂ ಕಡಿಮೆ ಒಂದೇ ವಾರದಲ್ಲಿ ತೆರೆಗೆ ಬಂದ್ರೆ ಮತ್ತೊಂದು ಸ್ಟಾರ್ ವಾರ್ ಪಕ್ಕಾ. ರಣ ವಿಕ್ರಮ ಚಿತ್ರ ಸ್ವಮೇಕ್ ಆದರೆ ರನ್ನ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. [2015ರಲ್ಲಿ ಸ್ವಮೇಕ್ ಸಿನಿಮಾಗಳದ್ದೇ ಚಕ್ರಾಧಿಪತ್ಯ]

ಪುನೀತ್ ಅವರ 'ರಣ ವಿಕ್ರಮ' ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ರನ್ನ' ಚಿತ್ರ ನಂದ ಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಎರಡೂ ಚಿತ್ರಗಳ ನಡುವೆ ಬಿಗ್ ಫೈಟಂತೂ ನಿರೀಕ್ಷಿಸಲಾಗಿದೆ.

English summary
Two big budget upcoming Kannada movies are all set to release at same time in Sandalwood. Sudeep lead Ranna and Puneeth Rajkumar starrer Rana Vikrama both movies are facing mega battle in the year 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada