»   » 'ರಾಕಿಂಗ್ ಸ್ಟಾರ್'ನ ಫಾಲೋ ಮಾಡ್ತಿದ್ದಾರಾ ಈ ತೆಲುಗು ನಟ?

'ರಾಕಿಂಗ್ ಸ್ಟಾರ್'ನ ಫಾಲೋ ಮಾಡ್ತಿದ್ದಾರಾ ಈ ತೆಲುಗು ನಟ?

Posted By:
Subscribe to Filmibeat Kannada
ರಾಕಿಂಗ್ ಸ್ಟಾರ್'ನ ಫಾಲೋ ಮಾಡ್ತಿದ್ದಾರಾ ಈ ತೆಲುಗು ನಟ? | Filmibeat Kannada

ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರಕ್ಕಾಗಿ ಉದ್ದನೆಯ ಗಡ್ಡ ಬಿಟ್ಟು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಸುಮಾರು ತಿಂಗಳುಗಳಿಂದ ಗಡ್ಡ ತೆಗೆಯದೇ ಪಾತ್ರಕ್ಕಾಗಿ ತಮ್ಮ ಲುಕ್ ನ್ನೇ ಬದಲಾಯಿಸಿಕೊಂಡಿದ್ದಾರೆ ಯಶ್.

ಯಶ್ ಅವರಂತೆ ಅವರ ಅಭಿಮಾನಿಗಳು ಕೂಡ ಉದ್ದನೆಯ ಗಡ್ಡ ಬಿಟ್ಟು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ರಾಕಿಂಗ್ ಸ್ಟಾರ್ ರೀತಿಯಲ್ಲಿ ತೆಲುಗು ಸ್ಟಾರ್ ನೊಬ್ಬ ಗಡ್ಡ ಬಿಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ

Megastar Chiranjeevi and Ram Charan in a single frame

ಹೌದು, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ತಮ್ಮ ಮುಂದಿನ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದಾರೆ. ಇಲ್ಲಿ ಯಶ್ ಕೂಡ ಮುಂದಿನ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದಾರೆ. ಇವರಿಬ್ಬರ ಸ್ಟೈಲ್ ಬಹುತೇಕ ಒಂದೇ ರೀತಿ ಕಾಣುತ್ತಿದೆ. ಹೀಗಾಗಿ, ಅಭಿಮಾನಿಗಳಲ್ಲಿ ಕುತೂಹಲ ಕೆರಳಿದೆ.

ಯಶ್ ಹುಟ್ಟುಹಬ್ಬಕ್ಕೆ 'ಕೆ.ಜಿ.ಎಫ್' ಟೀಂ ಕಡೆಯಿಂದ ಉಡುಗೊರೆ

Megastar Chiranjeevi and Ram Charan in a single frame

ರಾಮ್ ಚರಣ್ ಮಾತ್ರವಲ್ಲದೇ ಮೆಗಾಸ್ಟಾರ್ ಚಿರಂಜೀವಿ ಕೂಡ ಗಡ್ಡ ಬಿಟ್ಟಿದ್ದಾರೆ. ರಾಮ್ ಚರಣ್ ಮತ್ತು ಚಿರಂಜೀವಿ ಇಬ್ಬರು ಒಂದೇ ಸ್ಟೈಲ್ ನಲ್ಲಿ ಕೂತು ಕಾಫಿ ಕುಡಿಯುತ್ತಿರುವ ಫೋಟೋವನ್ನ ರಾಮ್ ಚರಣ್ ಪೋಸ್ಟ್ ಮಾಡಿದ್ದಾರೆ.

ಅಂದ್ಹಾಗೆ, ರಾಮ್ ಚರಣ್ 'ರಂಗಸ್ಥಳಂ-1985' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹಳ್ಳಿ ಯುವಕನ ಪಾತ್ರ ನಿರ್ವಹಿಸುತ್ತಿದ್ದು, ಆಕ್ಷನ್ ಸಿನಿಮಾ ಇದಾಗಿದೆಯಂತೆ. ಇನ್ನು ಚಿರಂಜೀವಿ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದೇನೆ ಇರಲಿ, ಯಶ್ ಅವರ 'ಕೆಜಿಎಫ್' ಸ್ಟೈಲ್ ಬೇರೆ ಭಾಷೆಯಲ್ಲೂ ಟ್ರೆಂಡ್ ಆಗುತ್ತಿರುವುದು ಖುಷಿಯ ವಿಚಾರ.

ಟ್ರೆಂಡ್ ಸೆಟ್ ಮಾಡುತ್ತಿದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್'

English summary
A special moment for mega fans is watching their favorite stars Megastar Chiranjeevi and Ram Charan in a single frame. Have a look at this pic. ಚಿರಂಜೀವಿ ಮತ್ತು ರಾಮ್ ಚರಣ್ ಅವರ ಫೋಟೋ ಯಶ್ ಅವರ ಸ್ಟೈಲ್ ನ ಫಾಲೋ ಮಾಡಿದಂತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada