ರಶ್ಮಿಕಾ ಅಭಿನಯ ನೋಡಿ 'ವಾಹ್' ಎಂದ ಮೆಗಾಸ್ಟಾರ್
ರಶ್ಮಿಕಾ ಮಂದಣ್ಣ ಅವರ ಚಿತ್ರ ಹಾಗೂ ಅವರ ಅಭಿನಯ ನೋಡಿ ತೆಲುಗು ಸೂಪರ್ ಸ್ಟಾರ್ ನಟರೆಲ್ಲಾ ಮೆಚ್ಚಿಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು, ಸ್ಟೈಲಿಶ ಸ್ಟಾರ್ ಅಲ್ಲು ಅರ್ಜುನ್, ರಾಮ್ ಚರಣ್ ತೇಜ ಟ್ವಿಟ್ಟರ್ ಮೂಲಕ 'ಕಿರಿಕ್ ಹುಡುಗಿ'ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದರು.
ಇದೀಗ, ಟಾಲಿವುಡ್ ಲೆಜೆಂಡ್ ನಟ ಮೆಗಾಸ್ಟಾರ್ ಚಿರಂಜೀವಿ ಕೂಡ ರಶ್ಮಿಕಾ ಮಂದಣ್ಣಗೆ ಬೋಲ್ಡ್ ಆಗಿದ್ದಾರೆ. ಹೌದು, 'ಗೀತಾಗೋವಿಂದಂ' ಚಿತ್ರದ ಸಕ್ಸಸ್ ಮೀಟ್ ಗೆ ಮುಖ್ಯ ಅತಿಥಿಯಾಗಿ ಆಗಮನಿಸಿದ್ದ ಚಿರಂಜೀವಿ ಅವರು ಚಿತ್ರದ ನಾಯಕಿ ಬಗ್ಗೆ ಮಾತನಾಡಿ ಗಮನ ಸೆಳೆದರು.
''ರಶ್ಮಿಕಾ ಮಂದಣ್ಣ ಅವರದ್ದು ನಾಯಕನ ಪಾತ್ರವನ್ನೇ ಡಾಮಿನೇಟ್ ಮಾಡುವಂತಹ ಪಾತ್ರ. ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಕಣ್ಣಲ್ಲೇ ಕೋಪ ತೋರಿಸುತ್ತಾ, ಅಭಿನಯದಲ್ಲೂ ವಾಹ್ ಎನ್ನುವಂತೆ ಮಾಡಿದ್ದಾರೆ'' ಎಂದು ಮೆಗಾಸ್ಟಾರ್ ಸಂತಸ ವ್ಯಕ್ತಪಡಿಸಿದರು.

ಶೂಟಿಂಗ್ ಕಾರಣದಿಂದ ಬ್ಯಾಂಕಾಕ್ ಗೆ ಹೋಗಿರುವ ರಶ್ಮಿಕಾ, 'ಗೀತಾಗೋವಿಂದಂ' ಚಿತ್ರದ ಸಕ್ಸಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಅಂದ್ಹಾಗೆ, ರಶ್ಮಿಕಾಗೆ ಇದು ಎರಡನೇ ತೆಲುಗು ಸಿನಿಮಾ. 'ಚಲೋ' ಚಿತ್ರದ ಮೂಲಕ ತೆಲುಗಿನಲ್ಲಿ ರಶ್ಮಿಕಾ ಎಂಟ್ರಿ ಕೊಟ್ಟರು. 'ಗೀತಾಗೋವಿಂದಂ' ಎರಡನೇ ಸಿನಿಮಾ. ಇದಾದ ನಂತರ 'ಟ್ಯಾಕ್ಸಿವಾಲಾ' ಚಿತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ.
ಆಗಸ್ಟ್ 15ರಂದು 'ಗೀತಾ ಗೋವಿಂದಂ' ಸಿನಿಮಾ ಬಿಡುಗಡೆಯಾಗಿತ್ತು. 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ ದೇವರಕೊಂಡ ಈ ಚಿತ್ರದಲ್ಲಿ ನಾಯಕರಾಗಿದ್ದರು. ಅಲ್ಲು ಅರವಿಂದ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











