For Quick Alerts
  ALLOW NOTIFICATIONS  
  For Daily Alerts

  'ಯುವ ರಣಧೀರ ಕಂಠೀರವ' ಟೀಸರ್ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ

  |

  'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಡಾ ರಾಜ್ ಮೊಮ್ಮಗ ಯುವ ರಾಜ್ ಕುಮಾರ್ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ 5 ನಿಮಿಷಗಳ ಲಾಂಚ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

  ಯುವ ರಾಜ್ ಕುಮಾರ್ ಹೇಗೆ ತಯಾರಾಗಿದ್ದಾರೆ ಎನ್ನುವುದನ್ನು ಪ್ರದರ್ಶಿಸುವ ಟೀಸರ್ ಇದಾಗಿತ್ತು. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಮಗನ ನಟನೆ, ಡೈಲಾಗ್ ಡಿಲವರಿ, ಫೈಟ್ ಹೇಗಿರಲಿದೆ ಎಂದು ಈ ಟೀಸರ್‌ನಲ್ಲಿ ತೋರಿಸಲಾಗಿತ್ತು.

  ಅಣ್ಣಾವ್ರ ಮೊಮ್ಮಗನ ಭರ್ಜರಿ ಎಂಟ್ರಿ: 'ಯುವ ರಣಧೀರ ಕಂಠೀರವ' ಟೀಸರ್ಅಣ್ಣಾವ್ರ ಮೊಮ್ಮಗನ ಭರ್ಜರಿ ಎಂಟ್ರಿ: 'ಯುವ ರಣಧೀರ ಕಂಠೀರವ' ಟೀಸರ್

  ಯುವರಾಜ್ ಕುಮಾರ್ ಎಂಟ್ರಿಗೆ ಸ್ಯಾಂಡಲ್ ವುಡ್ ಊಘೆ ಎಂದಿದೆ. ಚೊಚ್ಚಲ ಸಿನಿಮಾಗೆ ತಕ್ಕಂತೆ ತಯಾರಿ ಮಾಡ್ಕೊಂಡು ಬರ್ತಿರುವ ಅಣ್ಣಾವ್ರ ಮೊಮ್ಮಗನಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

  ಇದೀಗ, ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು, ಯುವ ರಣಧೀರ ಕಂಠೀರವ ಲಾಂಚ್ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಅವರು ಸಿದ್ಧತೆ, ಡೆಡಿಕೇಶನ್ ಬಗ್ಗೆ ಖುಷಿಯಾಗಿದ್ದಾರೆ.

  ''ಯುವ ರಾಜ್ ಕುಮಾರ್ ತಯಾರಿ ನಿಜಕ್ಕೂ ಅದ್ಭುತವೆನಿಸುತ್ತಿದೆ. ರಾಜ್ ಕುಮಾರ್ ಅವರ ಮೊಮ್ಮಗ ಎಂಬ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರ ಡೈಲಾಗ್ ಡಿಲವರಿ, ಸಾಹಸ, ಆಕ್ಟಿಂಗ್ ನೋಡಿದ್ರೆ ಇಂಡಸ್ಟ್ರಿಯಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸುತ್ತಾರೆ ಎಂದೆನಿಸುತ್ತಿದೆ'' ಎಂದು ಮೆಗಾಸ್ಟಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

  ''ಸಾಮಾನ್ಯ ಚೊಚ್ಚಲ ಸಿನಿಮಾಗೆ ಕಮರ್ಷಿಯಲ್ ಚಿತ್ರ ಆಯ್ಕೆ ಮಾಡಿಕೊಳ್ತಾರೆ, ಲವ್ ಅಥವಾ ಆಕ್ಷನ್ ಸಿನಿಮಾ ಮಾಡೋದು ಸಹಜ. ಆದ್ರೆ, ಐತಿಹಾಸಿಕ ಪ್ರಾಜೆಕ್ಟ್ ಆಯ್ಕೆ ಮಾಡಿರುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಚೆನ್ನಾಗಿ ನಿಭಾಯಿಸ್ತಾರೆ ಮತ್ತು ಸಕ್ಸಸ್ ಕಾಣ್ತರೆ ಎಂಬ ನಂಬಿಕೆ ಹುಟ್ಟಿದೆ'' ಎಂದು ಚಿರು ಶುಭ ಕೋರಿದ್ದಾರೆ.

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada

  ಇನ್ನುಳಿದಂತೆ ಯುವ ಅವರ ಮೊದಲ ಸಿನಿಮಾಗೆ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ಟೀಸರ್‌ನಲ್ಲೇ ಸದ್ದು ಮಾಡಿದೆ. ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ನಿರ್ದೇಶನವಿದೆ.

  English summary
  Telugu Megastar Chiranjeevi appreciated to Yuva rajkumar after watching Yuva Ranadheera Kanteerava first look teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X