For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿದ್ದ ಪಾವಲ ಶ್ಯಾಮಲಾಗೆ ಎರಡನೇ ಬಾರಿ ನೆರವು ನೀಡಿದ ಚಿರಂಜೀವಿ

  |

  ತೆಲುಗಿನ ಹಿರಿಯ ನಟಿ ಪಾವಲ ಶ್ಯಾಮಲಾ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, 'ನನಗೆ ನೆರವಿನ ಅಗತ್ಯವಿದೆ' ಎಂದು ಮನವಿ ಮಾಡಿದ್ದರು. ಹಿರಿಯ ನಟಿಯೊಬ್ಬರು ಸಂಕಷ್ಟದಲ್ಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿತ್ತು.

  ಇದೀಗ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ಪಾವಲ ಶ್ಯಾಮಲಾ ಅವರ ನೆರವಿಗೆ ಧಾವಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಶ್ಯಾಮಲಾ ಅವರಿಗೆ 1.15 ಲಕ್ಷ ರೂಪಾಯಿಗಳ ಚೆಕ್ ಅನ್ನು ತಲುಪಿಸಿದ್ದಾರೆ. ಜೊತೆಗೆ ಮನೆಗೆ ಅಗತ್ಯವಾದ ದಿನಸಿ ಸಹ ತಲುಪಿಸಿದ್ದಾರೆ.

  1.15 ಲಕ್ಷ ಹಣವನ್ನು ಪಾವಲ ಶ್ಯಾಮಲಾ ಅವರು ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ಸದಸ್ಯತ್ವ ಪಡೆಯಲು ಬಳಸುವಂತೆ ಚಿರು ಸೂಚಿಸಿದ್ದಾರೆ. ಶ್ಯಾಮಲಾ ಅವರು ಅಸೋಸಿಯೇಷನ್ ಸದಸ್ಯರಾದರೆ ಪ್ರತಿ ತಿಂಗಳು 6 ಸಾವಿರ ಮಾಸಾಶನ ಬರುವ ಜೊತೆಗೆ 3 ಲಕ್ಷದ ಜೀವ ವಿಮೆ ಅವರ ಹೆಸರಿಗೆ ಸೇರುತ್ತದೆ.

  ಅಸೋಸಿಯೇಷನ್‌ನ ಕರಾಟೆ ಕಲ್ಯಾಣಿ ಮತ್ತು ಸುರೇಶ್ ಕೊಂಡೇಟಿ ಅವರುಗಳು ಚಿರಂಜೀವಿ ನೀಡಿದ ಚೆಕ್ ಅನ್ನು ಪಾವಲ ಶ್ಯಾಮಲಾ ಅವರಿಗೆ ನೀಡಿದ್ದಾರೆ.

  ಈ ಹಿಂದೆಯೂ ಶ್ಯಾಮಲಾ ಅವರು ತಮ್ಮ ಅನಾರೋಗ್ಯ ಪೀಡಿತ ಮಗಳೊಂದಿಗೆ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ತೊಂದರೆ ಪಡುತ್ತಿದ್ದ ಸಮಯದಲ್ಲಿ ಎರಡು ಲಕ್ಷ ಹಣವನ್ನು ಶ್ಯಾಮಲಾಗೆ ನೀಡಿದ್ದರು.

  ಚಿರಂಜೀವಿ ಮಾಡಿರುವ ಸಹಾಯದ ಬಗ್ಗೆ ಮಾತನಾಡಿರುವ ಶ್ಯಾಮಲಾ, 'ನಾನು ಚಿರಂಜೀವಿ ಅವರ ಸಹಾಯವನ್ನು ಎಂದೂ ಮರೆಯುವುದಿಲ್ಲ. ನಾನು ಈ ಹಿಂದೆ ಕಷ್ಟದಲ್ಲಿದ್ದಾಗ 2 ಲಕ್ಷ ನೀಡಿದ್ದರು. ಈಗಲೂ 1.15 ಲಕ್ಷ ಹಣ ನೀಡಿ ನಾನು ಮಾಸಾಶನ ಪಡೆಯುವಂತೆ ಮಾಡುತ್ತಿದ್ದಾರೆ. ಅವರಿಗೆ ಜೀವನಪರ್ಯಂತ ಋಣಿಯಾಗಿರುತ್ತೇನೆ' ಎಂದಿದ್ದಾರೆ ಶ್ಯಾಮಲಾ.

  ಮೆಗಾಸ್ಟಾರ್ ಚಿರಂಜೀವಿ ಅವರು ತೆಲುಗು ಚಿತ್ರರಂಗದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಸಕ್ರಿಯವಾಗಿರುತ್ತಾರೆ. ಕೆಲವು ದಿನಗಳ ಹಿಂದಷ್ಟೆ ಕೊರೊನಾದಿಂದ ನಿಧನ ಹೊಂದಿದ ಸಿನಿಮಾ ಪತ್ರಕರ್ತ ವಿಮರ್ಶಕ ಕೆಎನ್‌ಆರ್ ಕುಟುಂಬಕ್ಕೂ ಚಿರಂಜೀವಿ ನೆರವು ನೀಡಿದ್ದಾರೆ.

  Yash ಗೆ ತುಂಬಾ Attitude‌ ಸಿನಿಮಾದಲ್ಲಿ ಯಶಸ್ಸು ಸಿಗಲ್ಲ ಅಂದಿದ್ರು Ramya | Fillmibeat Kannada

  ಪಾವಲ ಶ್ಯಾಮಲಾ ಅವರು ಈವರೆಗೆ ಸುಮಾರು 250 ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ವರ್ಷಂ', 'ಬಾಬಾಯಿ-ಅಬ್ಬಾಯಿ', 'ಖಡ್ಗಂ', 'ಆಂಧ್ರಾವಾಲ', 'ಗೌರಿ' ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Megastar Chiranjeevi sends 1.15 lakh rs cheque to Pavala Shyamala who is facing health and economic problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X