For Quick Alerts
  ALLOW NOTIFICATIONS  
  For Daily Alerts

  'ಖೈದಿ-150' ಚಿತ್ರದ ಸ್ಪೆಷಲ್ ಸಾಂಗ್ ಗೆ 'ಮೆಗಾಸ್ಟಾರ್ ಸ್ಟೆಪ್'

  By Bharath Kumar
  |

  ತೆಲುಗಿನ ಬಹುನಿರೀಕ್ಷೀತ 'ಖೈದಿ ನಂ 150' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಹುತೇಕ ಟಾಕಿ ಪೋಷನ್ ಮುಗಿಸಿರುವ ಚಿತ್ರತಂಡ ಈಗ ಹಾಡಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಇತ್ತೀಚಿಗೆ ಮೆಗಾಸ್ಟಾರ್ ನ ಮೆಗಾ ಚಿತ್ರದ ಸ್ಪೆಷಲ್ ಹಾಡನ್ನ ಚಿತ್ರೀಕರಿಸಲಾಗಿದೆ.

  ಚಿತ್ರರಂಗದಿಂದ ಬಹಳ ವರ್ಷಗಳ ಕಾಲ ದೂರ ಉಳಿದಿದ್ದ ಚೀರಂಜೀವಿಯ '150 ನೇ ಸಿನಿಮಾ, ಹಲವು ವಿಶೇಷತೆಗಳಿಂದ ಕೂಡಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಚಿರು ಕಮ್ ಬ್ಯಾಕ್ ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿತ್ತು.['ಕತ್ತಿ' ರೀಮೇಕ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ?]

  ಈಗ ದೀಪಾವಳಿ ಹಬ್ಬದ ವಿಶೇಷವಾಗಿ ಚಿತ್ರದ ಮತ್ತೆರಡು ಪೋಸ್ಟರ್ ಗಳನ್ನ ಅಧೀಕೃತವಾಗಿ ರಿಲೀಸ್ ಮಾಡಿದೆ. ವಿವಿ ವಿನಾಯಕ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲೇ ಬಿಗ್ ಸ್ಕ್ರೀನ್ ಗೆ ಬರುವ ತಯಾರಿಯಲ್ಲಿದೆ. ಮುಂದೆ ಓದಿ....

  ಸಾಂಗ್ ಶೂಟಿಂಗ್ ನಲ್ಲಿ 'ಖೈದಿ-150'

  ಸಾಂಗ್ ಶೂಟಿಂಗ್ ನಲ್ಲಿ 'ಖೈದಿ-150'

  ಇತ್ತೀಚೀಗೆ 'ಖೈದಿ-150' ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ಹೈದ್ರಾಬಾದ್ ನಲ್ಲಿ ನಡೆದಿದೆ. ಶೂಟಿಂಗ್ ಸ್ಟಿಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

  'ಲಕ್ಷ್ಮಿ ರೈ' ಜೊತೆ ಮೆಗಾಸ್ಟಾರ್

  'ಲಕ್ಷ್ಮಿ ರೈ' ಜೊತೆ ಮೆಗಾಸ್ಟಾರ್

  ಹೈದ್ರಾಬಾದ್ ನಲ್ಲಿ ನಡೆದ ಸಾಂಗ್ ಶೂಟಿಂಗ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಸೌತ್ ಸುಂದರಿ ಲಕ್ಷ್ಮಿ ರೈ ಹೆಜ್ಜೆ ಹಾಕಿದ್ದಾರೆ. ಚಿತ್ರದ ಒಂದು ಹಾಡಿಗೆ ಸ್ಪೆಷಲ್ ಸ್ಟೆಪ್ ಹಾಕುತ್ತಿರುವ ಲಕ್ಷ್ಮಿ ರೈ, ಚಿರು ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

  ಚಿರು ಅಭಿಮಾನಿ 'ಕೊರಿಯೋಗ್ರಫಿ'

  ಚಿರು ಅಭಿಮಾನಿ 'ಕೊರಿಯೋಗ್ರಫಿ'

  'ಖೈದಿ-150' ಚಿತ್ರದ ಈ ಸ್ಪೆಷಲ್ ಸಾಂಗ್ ಗೆ, ಚಿರಂಜೀವಿಯ ಅಪ್ಪಟ ಅಭಿಮಾನಿ ಹಾಗೂ ಖ್ಯಾತ ನಟ, ನಿರ್ದೇಶಕ, ರಾಘವ ಲಾರೇನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.

  ಡಿ.ಎಸ್.ಪಿ ಬೀಟ್ಸ್

  ಡಿ.ಎಸ್.ಪಿ ಬೀಟ್ಸ್

  ಮೆಗಾಸ್ಟಾರ್ ಗಾಗಿ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸ್ಪೆಷಲ್ ಸಾಂಗ್ ಮಾಡಿದ್ದು, ಸೂಪರ್ ಮ್ಯೂಸಿಕ್ ಕೊಟ್ಟಿದ್ದಾರೆ. 'ರಥಳು ರಥಳು' ಎಂಬ ಹಾಡಿಗೆ ಡಿ.ಎಸ್.ಪಿ ಕಂಪೋಸ್ ಮಾಡಿದ್ದು ಈ ಹಾಡು ಸಖತ್ ಸೌಂಡ್ ಮಾಡಲಿದೆ ಎನ್ನಲಾಗುತ್ತಿದೆ.

  ಹೊಸ ಪೋಸ್ಟರ್

  ಹೊಸ ಪೋಸ್ಟರ್

  ದೀಪಾವಳಿ ಹಬ್ಬದ ವಿಶೇಷವಾಗಿ, 'ಖೈದಿ-150' ಚಿತ್ರದ ಹೊಸ ಪೋಸ್ಟರ್ಗಳನ್ನ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಮೆಗಾಸ್ಟಾರ್ ಅವರ ಗೆಟಪ್ ಹೇಗಿದೆ ಅಂತ ರಿವಿಲ್ ಮಾಡಿದ್ದಾರೆ.

  ರಾಮ್ ಚರಣ್ ಬ್ಯಾನರ್

  ರಾಮ್ ಚರಣ್ ಬ್ಯಾನರ್

  ಈಗಾಗಲೇ ಗೊತ್ತಿರುವಾಗೆ ಮೆಗಾಸ್ಟಾರ್ ಕಮ್ ಬ್ಯಾಕ್ ಸಿನಿಮಾಗೆ ಚಿರಂಜೀವಿಯ ಮಗ ರಾಮ್ ಚರಣ್ ಬಂಡವಾಳ ಹಾಕಿದ್ದಾರೆ. ಕಾಜಲ್ ಅಗರ್ ವಲ್ ಚಿತ್ರದ ನಾಯಕಿಯಾಗಿದ್ದಾರೆ.[ಚಿರಂಜೀವಿ 150ನೇ ಸಿನ್ಮಾ ಕತ್ತಿ ರಿಮೇಕ್: ರಾಮ್ ಚರಣ್]

  ವಿವಿ ವಿನಾಯಕ್ ಆಕ್ಷನ್ ಕಟ್

  ವಿವಿ ವಿನಾಯಕ್ ಆಕ್ಷನ್ ಕಟ್

  ಅಂದ್ಹಾಗೆ, 'ಖೈದಿ-150', ತಮಿಳಿನಲ್ಲಿ ವಿಜಯ್ ಅಭಿನಯಿಸಿ ಸೂಪರ್ ಹಿಟ್ ಆಗಿದ್ದ ಕತ್ತಿ ಚಿತ್ರದ ರೀಮೇಕ್. ಈ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ ವಿವಿ ವಿನಾಯಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಜನವರಿ 'ರಿಲೀಸ್'

  ಜನವರಿ 'ರಿಲೀಸ್'

  ಸದ್ಯ, ಹಾಡಿನ ಚಿತ್ರೀಕರಣ ಮಾಡುತ್ತಿರುವ 'ಖೈದಿ-150', ಮುಂದಿನ ವರ್ಷದ ಆರಂಭದಲ್ಲಿ ಅಂದ್ರೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ತೆರೆಮೇಲೆ ಬರುವ ಯೋಚನೆಯಲ್ಲಿದೆ.

  English summary
  Megastar Chiranjeevi recently shot a special song for his career's 150th film "Khaidi No 150". The song has been choreographed by actor-director Raghava Lawrence, The song composed by Devi Sri Prasad features Chiranjeevi. the movie directed by VV vinayak.
  Sunday, October 30, 2016, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X