ಗೋಲ್ಡನ್ ಸ್ಟಾರ್ ಜೊತೆ 'ತ್ರಿಬಲ್ ರೈಡಿಂಗ್' ಆರಂಭಿಸಿದ ಮೇಘಾ ಶೆಟ್ಟಿ

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ.

ಗೋಲ್ಡನ್ ಸ್ಟಾರ್ ಜೊತೆ ಮೂವರು ನಾಯಕಿಯರು ತ್ರಿಬಲ್ ರೈಡಿಂಗ್ ಹೊರಟಿದ್ದಾರೆ. ಮೂವರಲ್ಲಿ ಧಾರಾವಾಹಿಯ ಖ್ಯಾತ ನಟಿ ಮೇಘಾ ಶೆಟ್ಟಿ ಕೂಡ ಒಬ್ಬರು. ಕನ್ನಡ ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕಿಯಾಗಿ ಮಿಂಚುತ್ತಿರುವ ನಟಿ ಮೇಘಾ ಶೆಟ್ಟಿ ತ್ರಿಬಲ್ ರೈಡಿಂಗ್ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಈಗಾಗಲೇ ಮೇಘಾ ಶೆಟ್ಟಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣೇಶ್ ಮತ್ತು ಮೇಘಾ ಶೆಟ್ಟಿ ಇಬ್ಬರು ಚಿತ್ರೀಕರಣ ಸೆಟ್ ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Megha Shetty Joins Golden star Ganesh starrer triple riding shooting

ಅಂದಹಾಗೆ ತ್ರಿಬರ್ ರೈಡಿಂಗ್ ಸಿನಿಮಾಗೆ ಮಹೇಶ್ ಗೌಡ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಮೇಘಾ ಶೆಟ್ಟಿ ಸೇರಿದಂತೆ ಇನ್ನು ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಲವ್ ಮಾಕ್ ಟೇಲ್ ಖ್ಯಾತಿಯ ರಚನಾ ಮತ್ತು ನಟಿ ಅದಿತಿ ನಟಿ ಅದಿತಿ ಪ್ರಭುದೇವ.

ಇತ್ತೀಚಿಗೆ ಗಣೇಶ್ ಚಿಕ್ಕಮಗಳೂರಿನ ಮದರ್ ಮೇರಿ ಪ್ರತಿಮೆ ಬಳಿ ಚಿತ್ರೀಕರಣ ಮಾಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ಯುಗಪುರುಷ ಸಿನಿಮಾದ ಚಿತ್ರೀಕರಣ ಮದರ್ ಮೇರಿ ಪ್ರತಿಮೆ ಬಳಿ ನಡೆದಿತ್ತು. ಮದರ್ ಮೇರಿ ಪ್ರತಿಮೆ ಬಳಿ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಚಿಕ್ಕ ವಯಸ್ಸಿನಲ್ಲಿ ಯುಗಪುರುಷ ಸಿನಿಮಾ ನೋಡಿದ ನೆನಪಾಯಿತು ಎಂದು ಬರೆದುಕೊಂಡಿದ್ದರು.

ಅಂದಹಾಗೆ ಮೇಘಾ ಶೆಟ್ಟಿ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಧಾರಾವಾಹಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಮೇಘಾ ಶೆಟ್ಟಿ ನಟನೆಯ ಚೊಚ್ಚಲ ಸಿನಿಮಾ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

More from Filmibeat

English summary
Actress Megha Shetty Joins Golden star Ganesh starrer triple riding shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X