ಪವಿತ್ರಾ ಗೌಡ ರೆಡ್ ಕಾರ್ಪೆಟ್ 777 ಸ್ಟುಡಿಯೋ ಡಿಸೈನರ್ ಲೆಹಂಗಾದಲ್ಲಿ ಮೇಘಾ ಫೋಟೋಶೂಟ್ ವೈರಲ್

By ಫಿಲ್ಮಿಬೀಟ್ ಡೆಸ್ಕ್

'ಜೊತೆ ಜೊತೆಯಲಿ' ಧಾರಾವಾಹಿಯ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೊಶೂಟ್‌ನಲ್ಲಿ ಮಿಂಚುತ್ತಿದ್ದಾರೆ. ಲೆಹೆಂಗಾ ತೊಟ್ಟು ಅಪ್ಸರೆಯಂತೆ ಕ್ಯಾಮರಾ ಮುಂದೆ ಕಂಗೊಳಿಸುತ್ತಿದ್ದಾರೆ ಕಳೆದೆರಡು ದಿನಗಳಿಂದ ಈ ಫೋಟೊಶೂಟ್‌ ಫೋಟೊಗಳು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ತಿಳಿ ಗುಲಾಬಿ ಬಣ್ಣದ ಲೆಹಂಗಾ ತೊಟ್ಟು ವಧುವಿನಂತೆ ಮೇಘಾ ಶೆಟ್ಟಿ ಕಂಗೊಳಿಸಿದ್ದಾರೆ.

ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಪವಿತ್ರಾ ಗೌಡ ಸದ್ಯ ಸಿನಿಮಾಗಳಿಂದ ದೂರಾಗಿದ್ದಾರೆ. ಆರ್‌ಆರ್‌ ನಗರದಲ್ಲಿ ಡಿಸೈನರ್ ಸ್ಟುಡಿಯೋ ಆರಂಭಿಸಿದ್ದಾರೆ. ಇಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆಗಳು ದೊರೆಯುತ್ತದೆ. ಹಬ್ಬ ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಡಿಸೈನರ್ ಸೀರೆ, ಲೆಹಂಗಾ ಸೇರಿದಂತೆ ಬಗೆ ಬಗೆಯ ಉಡುಗೆಗಳು ದೊರೆಯುತ್ತವೆ. ಸ್ಯಾಂಡಲ್‌ವುಡ್‌ ನಟಿಯರು, ಕನ್ನಡ ಕಿರುತೆರೆಯ ನಟಿಯರು ಇಲ್ಲಿ ಬಟ್ಟೆ ಖರೀದಿಸುತ್ತಾರೆ.

Megha shetty looks beautiful as she turns bride for Pavitra Gowdas red carpet studio 777collection

ನಟಿಯರಾದ ಮೇಘಾ ಶೆಟ್ಟಿ, ಸೋನಲ್ ಮಂಥೆರೋ ಸೇರಿದಂತೆ ಕೆಲ ನಟಿಯರು ರೆಡ್ ಕಾರ್ಪೆಟ್ 777 ಸ್ಟುಡಿಯೋದ ಬ್ರ್ಯಾಂಡ್ ಅಂಬಾಸಿಡರ್‌ ಅಂದರೆ ತಪ್ಪಾಗಲ್ಲ. ಈ ರೀತಿ ವಿಶೇಷವಾಗಿ ಡಿಸೈನ್ ಮಾಡಿರುವ ಕಾಸ್ಟ್ಯೂಮ್ಸ್ ಧರಿಸಿ ಫೋಟೊಶೂಟ್‌ಗಳನ್ನು ಮಾಡುತ್ತಿರುತ್ತಾರೆ. ಸದ್ಯ ಮೇಘಾ ಶೆಟ್ಟಿ ಮಾಡಿಸಿರುವ ಫೋಟೊಶೂಟ್ ಸಖತ್ ವೈರಲ್ ಆಗಿದೆ. ಥೇಟ್ ಅಪ್ಸರೆಯಂತೆ ಕ್ಯಾಮರಾ ಮುಂದೆ ಮಿಂಚಿದ್ದಾರೆ. ಪವಿತ್ರಾ ಗೌಡ ಡಿಸೈನ್ ಮಾಡಿರುವ ಲೆಹಂಗಾ ತೊಟ್ಟು ಪ್ರಶಾಂತ್ ಮೇಕ್‌ ಓವರ್‌ನಲ್ಲಿ ಮೋಡಿ ಮಾಡಿದ್ದಾರೆ.

ಮದುವೆಗೆ ವಧು ಧರಿಸುವಂತಹ ಲೆಹಂಗಾ, ಅದಕ್ಕೊಪ್ಪುವ ಆಭರಣಗಳನ್ನು ಧರಿಸಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಈ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇನ್ನು ಮೇಘಾ ಶೆಟ್ಟಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸೋದರ ಜೊತೆ ಜೊತೆಗೆ ಸಿನಿಮಾಗಳಲ್ಲೂ ನಟಿಸಲು ಆರಂಭಿಸಿದ್ದಾರೆ. ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಸಿನಿಮಾದಿಂದ ಶುರುವಾದ ಆಕೆಯ ಸಿನಿಜರ್ನಿ ನಿಧಾನವಾಗಿ ಮುಂದುವರೆದಿದೆ.

'ತ್ರಿಬಲ್ ರೈಡಿಂಗ್' ನಂತರ ಡಾರ್ಲಿಂಗ್ ಕೃಷ್ಣ ನಟನೆಯ 'ದಿಲ್‌ಪಸಂದ್' ಚಿತ್ರದಲ್ಲೂ ಮೇಘಾ ಶೆಟ್ಟಿ ನಟಿಸಿದ್ದರು. ಸದ್ಯ 'ಆಪರೇಷನ್ ಲಂಡನ್ ಕೆಫೆ' ಅನ್ನುವ ಚಿತ್ರದಲ್ಲಿ ಮೇಘಾ ಬಣ್ಣ ಹಚ್ಚಿದ್ದು ಇದು ಏಕಕಾಲಕ್ಕೆ ಮರಾಠಿ ಭಾಷೆಯಲ್ಲೂ ರಿಲೀಸ್ ಆಗ್ತಿದೆ. ಈ ಮೂಲಕ ಮರಾಠಿ ಚಿತ್ರರಂಗಕ್ಕೂ ಆಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ಕವೀಶ್ ಶೆಟ್ಟಿ ಜೋಡಿಯಾಗಿ ಮೇಘಾ ನಟಿಸಿದ್ದು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Megha shetty looks beautiful as she turns bride for Pavitra Gowdas red carpet studio 777collection

ಇನ್ನು ಮೇಘಾ ನಟನೆಯ 'ಜೊತೆ ಜೊತೆಯಲಿ' ಧಾರಾವಾಹಿ ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಆರ್ಯವರ್ಧನ್ ಪಾತ್ರದಿಂದ ನಟ ಅನಿರುದ್ಧ್ ಹೊರಬಂದ ಮೇಲೆ ಟಿಆರ್‌ಪಿ ಮತ್ತಷ್ಟು ಕಮ್ಮಿ ಆಗಿದೆ. ಕಥೆಯನ್ನು ಎಲ್ಲೆಲ್ಲೋ ಎಳೆಯಲಾಗುತ್ತಿದೆ. ವೀಕ್ಷಕರು ಈ ಬಗ್ಗೆ ಬೇಸರಗೊಂಡಿದ್ದಾರೆ. ಸದ್ಯ ಅನಿರುದ್ಧ್ ಮಾಡುತ್ತಿದ್ದ ಆರ್ಯವರ್ಧನ್ ಪಾತ್ರವನ್ನು ಸ್ಯಾಂಡಲ್‌ವುಡ್ ನಟ ಹರೀಶ್ ರಾಜ್ ಮುಂದುವರೆಸಿದ್ದಾರೆ. ಶೀಘ್ರದಲ್ಲೇ ಧಾರಾವಾಹಿಯನ್ನು ಮುಗಿಸುವ ಬಗ್ಗೆಯೂ ಗುಸುಗುಸು ಶುರುವಾಗಿದೆ.

ಇನ್ನು ಪವಿತ್ರಾ ಗೌಡ, ಮೇಘಾ ಶೆಟ್ಟಿ ಎಲ್ಲರೂ ಆತ್ಮೀಯ ಸ್ನೇಹಿತರು. ಈ ಸ್ನೇಹಿತೆಯರೆಲ್ಲಾ ಸೇರಿ ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದರು. ಆ ವಿಡಿಯೋವನ್ನು ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದು ಭಾರೀ ಸುದ್ದಿ ಆಗಿತ್ತು. ನಂತರ ಮೇಘಾ ಆ ಪೋಸ್ಟ್ ಡಿಲೀಟ್ ಮಾಡಿದ್ದರು.

More from Filmibeat

English summary
Megha shetty looks beautiful as she turns bride for Pavitra Gowda's red carpet studio 777 collection. Her Latest Photoshoot Goes Viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X