ಮಾಧವನ್ ಜೊತೆ ಮೇಘಾ ಶೆಟ್ಟಿ ಸೆಲ್ಫಿ ; ಪರಭಾಷೆ ಪಾಲಾಗ್ತಾರಾ ಅನು ಸಿರಿಮನೆ..?

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದವರು ಮೇಘಾ ಶೆಟ್ಟಿ. ಕನ್ನಡ ಕಿರುತೆರೆಯ ಮೂಲಕ ಕನ್ನಡಿಗರ ಮನೆ ಮಗಳಾದ ಈ ಅನು ಸಿರಿಮನೆ ಆ ನಂತರ ಬೆಳ್ಳಿತೆರೆಗೆ ಬಂದರು. ತ್ರಿಬಲ್ ರೈಡಿಂಗ್.. ದಿಲ್ ಪಸಂದ್.. ಕೈವ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಆದರೆ... ಕಿರುತೆರೆಯಲ್ಲಿ ಸಿಕ್ಕ ಪ್ರೇಕ್ಷಕರ ಪ್ರೀತಿ ಇವರಿಗೆ ಹಿರಿತೆರೆಯಲ್ಲಿ ಇನ್ನೂ ಸಿಕ್ಕಿಲ್ಲ. ದೊಡ್ಡದೊಂದು ಗೆಲುವು ಮೇಘಾ ಶೆಟ್ಟಿ ಅವರಿಗೆ ದಕ್ಕಿಲ್ಲ. ಹೀಗಿರುವಾಗ ಮೇಘಾ ಶೆಟ್ಟಿ ಎಲ್ಲಿ ರಶ್ಮಿಕಾ ಮಂದಣ್ಣ.. ಶ್ರೀಲೀಲಾ ಅವರಂತೆ ಪರಭಾಷೆಯ ಪಾಲಾಗುತ್ತಾರೆ ಅನ್ನುವ ಚಿಂತೆ ಈಗ ಇವರ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಆರ್.ಮಾಧವನ್ ಜೊತೆ ಮೇಘಾ ಶೆಟ್ಟಿ ತೆಗೆಸಿಕೊಂಡ ಸೆಲ್ಫಿ.

megha-shetty-spotted-with-r-madhavan-will-the-actress-make-a-leap-into-bollywood

ಹೌದು.. ಬಹುಭಾಷೆಯಲ್ಲಿ ತಮ್ಮ ಛಾಪು ಮೂಡಿಸಿರುವ ಆರ್.ಮಾಧವನ್ ಅವರನ್ನ ಮೇಘಾ ಶೆಟ್ಟಿ ಭೇಟಿಯಾಗಿದ್ದಾರೆ. ಮುಖದ ತುಂಬಾ ನಗು ಹೊತ್ತು ಸೆಲ್ಫಿಗೆ ಫೋಸ್ ನೀಡಿದ್ದಾರೆ. ಆದರೆ ಈ ಅಪರೂಪದ ಭೇಟಿಯ ಕ್ಷಣಗಳನ್ನ ಸಂದರ್ಭ ಸಹಿತ ವಿವರಿಸದ ಮೇಘಾ ಶೆಟ್ಟಿ ಅದ್ಭುತ ನಟನೊಂದಿಗೆ ಚರ್ಚೆ ಮಾಡುತ್ತಾ ಸಮಯ ಕಳೆದೆ. ಒಂದೊಳ್ಳೆಯ ಕಲಿಕೆಯ ಅನುಭವ ಎಂದು ಮಾತ್ರ ಬರೆದುಕೊಂಡಿದ್ದಾರೆ.

ಹೀಗಾಗಿಯೇ ಬಗೆ ಬಗೆಯ ಅಭಿಪ್ರಾಯಗಳನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿರುವ ಮೇಘಾ ಶೆಟ್ಟಿ ಅವರ ಅಭಿಮಾನಿಗಳು ನೀವು ಪರಭಾಷೆಯತ್ತ ಮುಖ ಮಾಡುತ್ತಿದ್ದೀರಾ ಎಂಬ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಆರ್.ಮಾಧವನ್ ಜೊತೆ ಸಿನಿಮಾ ಮಾಡ್ತಿರಬಹುದು ಎಂದುಕೊಂಡು ತಮ್ಮ ನೆಚ್ಚಿನ ನಾಯಕಿಗೆ ಶುಭಾಶಯವನ್ನೂ ಕೋರುತ್ತಿದ್ದಾರೆ. ಟಾಲಿವುಡ್.. ಕಾಲಿವುಡ್‌.. ಬೇಡ ಸೀದಾ ಬಾಲಿವುಡ್‌ನಲ್ಲಿಯೇ ನೀವು ಸಿನಿಮಾ ಮಾಡಿ ಎಂಬ ಸಲಹೆಯನ್ನು ಕೂಡ ಕೆಲವರು ಮೇಘಾ ಶೆಟ್ಟಿ ಅವರಿಗೆ ಕೊಡುತ್ತಿದ್ದಾರೆ.

megha-shetty-spotted-with-r-madhavan-will-the-actress-make-a-leap-into-bollywood

ಸದ್ಯಕ್ಕೆ ಮ್ಯಾಡಿ ಜೊತೆ ಮೇಘಾ ಶೆಟ್ಟಿ ತೆಗೆಸಿಕೊಂಡಿರುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಎಲ್ಲರ ಚಿತ್ತವನ್ನೂ ಕದಿಯುತ್ತಿವೆ. 14 ಘಂಟೆಯಲ್ಲಿ 33.000ಕ್ಕೂ ಅಧಿಕ ಜನ ಈ ಫೋಟೋಗಳನ್ನ ಮೆಚ್ಚಿಕೊಂಡಿದ್ದರೆ, 60ಕ್ಕೂ ಹೆಚ್ಚಿನ ಅಭಿಪ್ರಾಯಗಳು ವ್ಯಕ್ತವಾಗಿವೆ.

ಉಳಿದಂತೆ ಮೇಘಾ ಶೆಟ್ಟಿ 'ಆಪರೇಷನ್ ಲಂಡನ್ ಕೆಫೆ' ಚಿತ್ರದಲ್ಲಿ ಸದ್ಯಕ್ಕೆ ನಟಿಸಿದ್ದಾರೆ. ಚಿತ್ರದ ಬಿಡುಗಡೆಯ ದಿನವನ್ನ ಎದುರು ನೋಡುತ್ತಿದ್ದಾರೆ. ಕನ್ನಡ, ಮರಾಠಿ , ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಕವೀಶ್ ನಾಯಕನ ಪಾತ್ರವನ್ನ ನಿರ್ವಹಿಸಿದ್ದಾರೆ. ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರವನ್ನ ಸಡಗರ ರಾಘವೇಂದ್ರ ನಿರ್ದೇಶಿಸಿದ್ದಾರೆ.

megha-shetty-spotted-with-r-madhavan-will-the-actress-make-a-leap-into-bollywood

ಆಪರೇಷನ್ ಲಂಡನ್ ಕೆಫೆ ಹೊರತು ಪಡಿಸಿದರೆ, ಪ್ರಜ್ವಲ್ ದೇವರಾಜ್ ಅಭಿನಯದ ಚೀತಾ ಚಿತ್ರದಲ್ಲಿ ಕೂಡ ಮೇಘಾ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಗ್ರಾಮಾಯಣ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರ ಜೊತೆ ತೆರೆಯನ್ನ ಹಂಚಿಕೊಳ್ಳುತ್ತಿದ್ದಾರೆ.

ಒಟ್ನಲ್ಲಿ ಆರ್.ಮಾಧವನ್ ಅವರ ಜೊತೆ ಮೇಘಾ ಶೆಟ್ಟಿ ತೆಗೆಸಿಕೊಂಡ ಈ ಫೋಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳ ತಲೆಯಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ನಿಜಕ್ಕೂ ಮೇಘಾ ಶೆಟ್ಟಿ ಪರಭಾಷೆಯ ಪಾಲಾಗ್ತಾರಾ..? ಕಾದು ನೋಡಬೇಕಿದೆ

More from Filmibeat

English summary
Jote Joteyali Tv Serial Fame Actress Megha Shetty spotted with R. Madhavan, Will the actress make a leap into Bollywood..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X