'ಸೈರಾ' ಸಿನಿಮಾದ ಟಿಕೆಟ್ ರೇಟ್ ಕೇಳಿ ಬೆಚ್ಚಿಬಿದ್ದ ಕನ್ನಡ ಪ್ರೇಕ್ಷಕರು
Recommended Video
ತೆಲುಗಿನ ಬಹು ನಿರೀಕ್ಷೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಮುಂದಿನ ತಿಂಗಳು 2ಕ್ಕೆ ಚಿತ್ರ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಸೈರಾ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಬರುತ್ತಿದೆ. ಮೆಗಾ ಸ್ಟಾರ್ ಚಿರಂಜೀವಿ, ಬಿಗ್ ಬಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ ಸೇರಿದ್ದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿದ್ದಾರೆ.
ಸೈರಾ ಸಿನಿಮಾ ಕನ್ನಡಕ್ಕೆ ಡಬ್ ಆದರು, ಕನ್ನಡ ವರ್ಷನ್ ಗಿಂತ ಹೆಚ್ಚಾಗಿ ತೆಲುಗು ವರ್ಷನ್ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿರುವ ಸೈರಾ ಚಿತ್ರದ ಟಿಕೆಟ್ ದರ ಕೇಳಿದ್ರೆ ಬೆಚ್ಚಿಬೀಳುತ್ತೀರಾ.

ಬೆಂಗಳೂರಿನಲ್ಲಿ ಸೈರಾ ಮೊದಲ ಶೋ ರಾತ್ರಿ 3.30ಕ್ಕೆ ಪ್ರಾರಂಭವಾಗುತ್ತದೆ. ಎಂಜಿ ರಸ್ತೆಯಲ್ಲಿರುವ ಸ್ವಾಗತ್ ಶಂಕರ್ ಚಿತ್ರಮಂದಿರದಲ್ಲಿ ಸೈರಾ ರಾತ್ರಿಯೆ ಶೋ ಪ್ರಾರಂಭವಾಗುತ್ತಿದೆ. ಅಚ್ಚರಿಕರ ಸಂಗತಿ ಅಂದ್ರೆ ಸೈರಾ ಚಿತ್ರದ ಒಂದು ಟಿಕೆಟ್ ಬೆಲೆ 1200 ರೂ. ಗೋಲ್ಡ್ ರೆಕ್ಲೈನರ್ ಕ್ಲಾಸ್ ಗೆ 1200 ರೂ, ಗೋಲ್ಡ್ ಕ್ಲಾಸ್ ಗೆ 850 ಮತ್ತು ಸಿಲ್ವರ್ ಕ್ಲಾಸ್ ಗೆ 650 ರೂ ಟಿಕೆಟ್ ಬೆಲೆ ಇದೆ.
ಅಚ್ಚರಿ ಅಂದ್ರೆ ಈಗಾಗಲೆ ಚಿತ್ರದ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿದೆ. 1200 ರೂಪಾಯಿ ಕೊಟ್ಟು ರಾತ್ರಿ ಶೋ ಬುಕ್ ಮಾಡಿದ್ದಾರೆ ಪ್ರೇಕ್ಷಕರು. ಸೈರಾ ಚಿತ್ರದ ಟಿಕೆಟ್ ದರ ನೋಡಿ ಕನ್ನಡ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ರಾತ್ರಿಯೆ ಮೊದಲ ಶೋ ಪ್ರಾರಂಭವಾಗುತ್ತಿದೆ. ಇನ್ನು ಕನ್ನಡದಲ್ಲಿ ಡಬ್ ಆದರು ತೆಲುಗಿನಲ್ಲೆ ಪ್ರದರ್ಶನವಾಗುತ್ತಿರುವುದು ಕನ್ನಡಿಗರಿಗೆ ನಿರಾಸೆ ಮೂಡಿಸಿದೆ.


Click it and Unblock the Notifications











