ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮದುವೆಗೆ ಕ್ಷಣಗಣನೆ
ಸ್ಯಾಂಡಲ್ ವುಡ್ ನ ಮುದ್ದು ಮುಖದ ಚೆಲುವೆ ನಟಿ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಮೇಘನಾ ಮತ್ತು ಚಿರು ಮದುವೆ ಸಮಾರಂಭ ಎರಡು ಸಂಪ್ರದಾಯದಲ್ಲಿ ನಡೆಯುತ್ತಿದ್ದು ಇಂದು ಕ್ರೈಸ್ತ ಧರ್ಮದ ಸಂಪ್ರದಾಯದಂತೆ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕ್ರಿಶ್ಚಿಯನ್ ಸಂಪ್ರದಾಯದಂತೆ ಇಂದು ಬೆಂಗಳೂರಿನಲ್ಲಿ ಚಿರು- ಮೇಘನ ಮದುವೆ ನಡೆಯಲಿದೆ. ಕೋರಮಂಗಲದಲ್ಲಿರೋ ಸೇಂಟ್ ಆಂಥೋನಿ ಫ್ರೈರಿ ಚರ್ಚ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ಉಂಗುರ ಬದಲಿಸಿಕೊಳ್ಳುವ ಮೂಲಕ ಚಿರು ಮತ್ತು ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಚರ್ಚ್ ನಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಕುಟುಂಬಸ್ಥರು ಹಾಗೂ ಮೇಘನಾ ರಾಜ್ ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ. ಚಿತ್ರರಂಗದ ವತಿಯಿಂದ ತುಂಬಾ ಹತ್ತಿರದ ಸ್ನೇಹಿತರಿಗೆ ಮಾತ್ರ ಚರ್ಚ್ ಮದುವೆಗೆ ಆಹ್ವಾನ ನೀಡಲಾಗಿದೆ.

ಇತ್ತೀಚಿನ ವರ್ಷಗಳನ್ನ ಗಣನೆಗೆ ತೆಗೆದುಕೊಂಡರೆ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯುತ್ತಿರುವ ಮೊದಲ ಮದುವೆ ಇದಾಗಿದ್ದು ಚಿತ್ರರಂಗದ ಗಣ್ಯರಿಗೆ ಹಾಗೂ ಅಭಿಮಾನಿಗಳಿಗೆ ಇಂದು ನಡೆಯಲಿರುವ ಚಿರು ಮತ್ತು ಮೇಘನಾ ಮದುವೆ ಬಗ್ಗೆ ಭಾರಿ ಕುತೂಹಲ ಹುಟ್ಟುಹಾಕಿದೆ. ಉಂಗುರು ಬದಲಿಸಿಕೊಂಡ ಜೋಡಿಗಳು ಮೂರು ದಿನಗಳ ನಂತರ ಮೇ 2 ರಂದು ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಪ್ಯಾಲೆಸ್ ಗ್ರೌಂಡ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.


Click it and Unblock the Notifications











