ಜಗ್ಗೇಶ್ ಮೇಲೆ ನಡೆದಿರುವುದು ಗೂಂಡಾಗಿರಿ: ನಟಿ ಮೇಘನಾ ಗಾಂವ್ಕರ್ ಆಕ್ರೋಶ

ಹಿರಿಯ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಘಟನೆಯನ್ನು ನಟಿ ಮೇಘನಾ ಗಾಂವ್ಕರ್ ಖಂಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಮೇಘನಾ, 'ನಿನ್ನೆ ಏನಾಯಿತು ಎಂದು ನಾನು ನೋಡಿದೆ. ನಿಮ್ಮಂಥಹಾ ಹಿರಿಯ ನಟರನ್ನು ಹೀಗೆ ನಡೆಸಿಕೊಳ್ಳಬಾರದಿತ್ತು. ಈ ರೀತಿಯ ಗೂಂಡಾಗಿರಿಯನ್ನು ಸಹಿಸಿಕೊಳ್ಳುವುದು ಅಸಾಧ್ಯ. ನೀವೊಬ್ಬ ಅದ್ಭುತ ವ್ಯಕ್ತಿ, ನಿಮ್ಮ ಬಗ್ಗೆ ಗೌರವ ಸದಾ ಇದ್ದೇ ಇರುತ್ತದೆ' ಎಂದಿದ್ದಾರೆ ಮೇಘನಾ ಗಾಂವ್ಕರ್.

ಮತ್ತೊಂದು ಟ್ವೀಟ್‌ನಲ್ಲಿ, 'ನಾನು ಜಗ್ಗೇಶ್ ಹಾಗೂ ದರ್ಶನ್‌ ಇಬ್ಬರಿಗೂ ಗೌರವ ಕೊಡುತ್ತೇನೆ. ಅವರಿಬ್ಬರೂ ಅದ್ಭುತವಾದ ವ್ಯಕ್ತಿಗಳು ಮತ್ತು ಕಲಾವಿದರು. ಜಗ್ಗೇಶ್ v/s ದರ್ಶನ್ ಎಂಬ ಚರ್ಚೆಗೆ ನಾವು ಬೆಂಬಲ ನೀಡಬಾರದು, ಕಲಾವಿದರಾಗಿ ನಾವೆಲ್ಲರೂ ಒಂದೇ ಮತ್ತು ಎಲ್ಲ ಕಲಾವಿದರಿಗೂ ಗೌರವ ಸಿಗಲೇ ಬೇಕು ಎಂದು ಮೇಘನಾ ಹೇಳಿದ್ದಾರೆ.

Meghana Gaonkar Extended Her Support To Jaggesh

ನಟಿ ಮೇಘನಾ ಗಾಂವ್ಕರ್ ಹಾಗೂ ಜಗ್ಗೇಶ್ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾವನ್ನು ಕವಿರಾಜ್ ನಿರ್ದೇಶಿಸಿದ್ದರು. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿಬಂದಿದ್ದವು.

ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಬಳಿಕ ನಟ ಜಗ್ಗೇಶ್ ಅವರಿಗೆ ಸಿನಿಮಾ ರಂಗದ ಹಲವರಿಂದ ಬೆಂಬಲ ವ್ಯಕ್ತವಾಗುತ್ತಿದೆ.

Recommended Video

ಏನ್ರಿ ದರ್ಶನ್ ಫೋನ್ ಮಾಡ್ಲಿಲ್ವ ಅಂತ ನನ್ನ ಹೆಂಡ್ತಿ ಕೇಳಿದ್ದು ನೋವಾಯ್ತು |Jaggesh |Parimala |Filmibeat Kannada

ಬಿಗ್‌ಬಾಸ್ ವಿನ್ನರ್ ಶೈನ್ ಶೆಟ್ಟಿ ಸಹ ಬೆಂಬಲ ವ್ಯಕ್ತಪಡಿಸಿದ್ದು, 'ಜಗ್ಗೇಶ್ ಅಣ್ಣ ನಿಮ್ಮ ಇಷ್ಟು ವರ್ಷದ ಕಲಾ ಸೇವೆ , ನಿಮ್ಮ ನಟನೆ ಇದನೆಲ್ಲ ನೋಡುತ್ತ ಬೆಳೆದ ನಿಮ್ಮ ಭಕ್ತ ಅಭಿಮಾನಿಗಳು ,ಕಲಾವಿದರು ನಾವು. ಬೇಸರ ಮಾಡಿಕೊಳ್ಳ ಬೇಡಿ ಅಣ್ಣ ನಮಗೆ ನಿಮ್ಮ ಮೇಲಿನ ಪ್ರೀತಿ ಗೌರವ ಇನ್ನೂ ಹತ್ತು ಪಟ್ಟು ಜಾಸ್ತಿ ಆಗುವುದೇ ಹೊರತು, ಯಾರೇನೇ ಅಂದರು ಊರೇನೆ ಅಂದರು ಯಾವುದೇ ಕಾರಣಕ್ಕೂ ಕಮ್ಮಿ ಆಗದು' ಎಂದು ಹೇಳಿದ್ದಾರೆ.

More from Filmibeat

English summary
Actress Meghana Gaonkar extended her supports to Jaggesh. She said It was hooliganism & not ok by any standards of our society.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X