For Quick Alerts
  ALLOW NOTIFICATIONS  
  For Daily Alerts

  ನಟನೆಗೆ ಮರಳಿದ ಮೇಘನಾ ರಾಜ್, ಗೆಳೆಯನದ್ದೇ ನಿರ್ಮಾಣ

  |

  ನಟಿ ಮೇಘನಾ ರಾಜ್ ಇದೀಗ ಮತ್ತೆ ಸಿನಿಮಾ ನಟನೆಯತ್ತ ಮರಳಿದ್ದಾರೆ. ಮೇಘನಾ ನಟಿಸುತ್ತಿರುವ ಹೊಸ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಲಿದೆ.

  ವಿಶೇಷವೆಂದರೆ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಮೇಘನಾ ರಾಜ್ ಆತ್ಮೀಯ ಗೆಳೆಯ ಪನ್ನಗಾಭರಣ. ಅವರ ನಿರ್ಮಾಣದ ಮೊದಲ ಸಿನಿಮಾ ಇದು. ಪನ್ನಗಾಭರಣಗೆ ಚಿರು ಸರ್ಜಾ ಜೊತೆಗೆ ಸಿನಿಮಾ ಮಾಡಬೇಕೆಂಬ ಆಸೆ ಇತ್ತಂತೆ ಆದರೆ ಅದು ಸಾಧ್ಯವಾಗಲಿಲ್ಲ. ಈಗ ಮೇಘನಾ ರಾಜ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ.

  ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿರುವ ಪನ್ನಗಾಭರಣ, ಮೇಘನಾ ರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಮತ್ತು ವಿಶಾಲ್ ಹೆಸರಿನ ಹೊಸಬರು ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ವಾಸುಕಿ ವೈಭವ್.

  ''ಚಿರಂಜೀವಿ ಸರ್ಜಾ ಜೊತೆಗೆ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಆಗಲಿಲ್ಲ, ಈಗ ಮೇಘನಾ ರಾಜ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನ (ಅಕ್ಟೋಬರ್ 17) ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಮುಹೂರ್ತ ಸಮಾರಂಭಕ್ಕೆ ಟಿ.ಎಸ್.ನಾಗಾಭರಣ, ಸುಂದರ್ ಇನ್ನು ಕೆಲವು ಹಿರಿಯ ನಟರು ಆಗಮಿಸಲಿದ್ದಾರೆ'' ಎಂದು ಪನ್ನಗಾಭರಣ ಮಾಹಿತಿ ನೀಡಿದ್ದಾರೆ.

  ಚಿರು ಸರ್ಜಾ ಕಾಲವಾದ ಬಳಿಕ ಮೇಘನಾ ರಾಜ್ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಸಿನಿಮಾ ನಟನೆಯಿಂದ ದೂರ ಉಳಿದಿದ್ದರು. ಮಗುವಿನ ಆರೈಕೆ ಸಹ ಮಾಡಬೇಕಾಗಿದ್ದ ಕಾರಣ ಸಿನಿಮಾದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಸಿನಿಮಾಕ್ಕೆ ಮರಳುತ್ತಿದ್ದಾರೆ ಮೇಘನಾ ರಾಜ್.

  2019 ರಲ್ಲಿ ಬಿಡುಗಡೆ ಆದ 'ಕುರುಕ್ಷೇತ್ರ' ಸಿನಿಮಾದ ಬಳಿಕ ಇನ್ನಾವುದೇ ಮೇಘನಾ ರಾಜ್ ನಟಿಸಿರುವ ಇನ್ನಾವುದೇ ಸಿನಿಮಾಗಳು ಬಿಡುಗಡೆ ಆಗಿಲ್ಲ.

  English summary
  Meghana Raj acting in new movie after long time. Her friend Pannagabharana producing the movie. New comer Vishal directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X