For Quick Alerts
  ALLOW NOTIFICATIONS  
  For Daily Alerts

  'ಚಿರು' ನೆನಪಲ್ಲೇ 'ಮೇಘನ ರಾಜ್' 4ನೇ ವಿವಾಹ ವಾರ್ಷಿಕೋತ್ಸವ

  |

  ನಟಿ ಮೇಘನಾ ರಾಜ್ ಕುಟುಂಬದಲ್ಲಿ ಇಂದು (ಮೇ 2) ವಿಶೇಷವಾದ ದಿನ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮದುವೆ ಆಗಿ 4 ವರ್ಷ ಆಗಿದೆ. ಮೇಘನಾ ಮತ್ತು ಚಿರು 2018ರಲ್ಲಿ ವೈವಾಹಿಕ ಬಾಳಿಗೆ ಕಾಲಿಟ್ಟರು. ಈ ಸಂಭ್ರಮಕ್ಕೆ ಚಿರು ದೈಹಿಕವಾಗಿ ಇಲ್ಲ. ಆದರೆ ನಿತ್ಯವೂ ಮೇಘನಾ ಮನಸ್ಸಿಲ್ಲಿ, ಮನೆಯವರ ಬದುಕಲ್ಲಿ ಜೀವಂತವಾಗಿ ಇದ್ದಾರೆ.

  ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರದ್ದು ಸುಮಾರು ಹತ್ತು ವರ್ಷಗಳ ಸ್ನೇಹ ಹಾಗೂ ಐದು ವರ್ಷದ ಪ್ರೀತಿ. ಪರಸ್ಪರ ಪ್ರೀತಿಸಿದ ಈ ಜೋಡಿ ಮನೆಯವರ ಸಮ್ಮುಖದಲ್ಲಿ ವೈವಾಹಿಕ ಬಾಲಿಗೆ ಕಾಲಿಟ್ಟಿತು. ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2018 ಮೇ 2ರಂದು ಚಿರಂಜೀವಿ ಸರ್ಜಾ ಜೊತೆ ಮೇಘನಾ ಹಸೆಮಣೆ ಏರಿದ್ದಾರೆ.

  ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ; ಭಾವುಕ ಪತ್ರ ಹಂಚಿಕೊಂಡ ಸರ್ಜಾ ಕುಟುಂಬಚಿರಂಜೀವಿ ಸರ್ಜಾ ಪುಣ್ಯಸ್ಮರಣೆ; ಭಾವುಕ ಪತ್ರ ಹಂಚಿಕೊಂಡ ಸರ್ಜಾ ಕುಟುಂಬ

  ಕಳೆದ ವರ್ಷ ಮೇಘನಾ ಜೊತೆಗೆ ಚಿರು ಇರಲಿಲ್ಲ. ಆದರೆ ಅರ್ಥ ಪೂರ್ಣವಾಗಿ ಈ ದಿನವನ್ನು ಮೇಘನಾ ಸಂಭ್ರಮಿಸಿದ್ದರು. ಮಗ ರಾಯನ್‌ಗೆ ಅಪ್ಪನ ಫೋಟೊ ತೋರಿಸಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಚಿರು ಫೋಟೊ ಮುಂದೆ ಜೂನಿಯರ್ ಚಿರು ಆಟವಾಡುತ್ತಿರುವ ವಿಡಿಯೋ ಪ್ರತಿಯೊಬ್ಬರ ಮನ ಮುಟ್ಟುವಂತ್ತಿತ್ತು.

  ಇನ್ನು ಈ ವರ್ಷ ಮೇಘನಾ ಮತ್ತು ರಾಯನ್ ಏನು ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಚಿರಂಜೀವಿ ಬಗ್ಗೆ ನಟಿ ಮೇಘನಾ ಸದಾ ಒಂದು ಮಾತು ಹೇಳುತ್ತಲೇ ಇರುತ್ತಾರೆ. ಚಿರುಗೆ ಸಂಭ್ರಮ, ಸೆಲೆಬ್ರೇಷನ್ ಅಂದರೆ ತುಂಬಾ ಇಷ್ಟವಿತ್ತು. ಹಾಗಾಗಿ ಈ ಬಾರಿಯೂ ಮೇಘನಾ ಮತ್ತು ಕುಟುಂಬ ವಿಭಿನ್ನವಾಗಿ ಈ ದಿನವನ್ನು ಆಚರಣೆ ಮಾಡಲಿದ್ದಾರೆ.

  ಚಿರು ಇಲ್ಲದೇ ಮೇಘನಾ ಮೊದಲ ಹುಟ್ಟುಹಬ್ಬ: ಪುತ್ರನ ವಿಡಿಯೋ ಹಂಚಿಕೊಂಡ ನಟಿಚಿರು ಇಲ್ಲದೇ ಮೇಘನಾ ಮೊದಲ ಹುಟ್ಟುಹಬ್ಬ: ಪುತ್ರನ ವಿಡಿಯೋ ಹಂಚಿಕೊಂಡ ನಟಿ

  2018ರಲ್ಲಿ ಮೇಘನಾ ಮತ್ತು ಚಿರು ಮದುವೆ ಆದರು. ಆದರೆ ಚಿರಂಜೀವಿ ಹೆಚ್ಚು ದಿನ ಮೇಘನಾ ಜೊತೆಗೆ ಇರಲಿಲ್ಲ. 2020ರಲ್ಲಿ ಹೃದಯಾಗಾತದಿಂದ ಚಿರು ನಿಧನ ಹೊಂದಿದರು. ಚಿರು ಇಲ್ಲದೆ ಎರಡನೇ ಬಾರಿಗೆ ಮೇಘನಾ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಾ ಇದ್ದಾರೆ. ಇನ್ನು ಮುಂದೆ ಚಿರಂಜೀವಿ ಇರುವುದಿಲ್ಲ. ಆದರೆ ಚಿರು ನೋವಿನಲ್ಲಿರುವ ಅಮ್ಮನಿಗೆ ಮಗ ರಾಯನ್ ಖುಷಿ ತಂದಿದ್ದಾನೆ.

  Meghana Raj And Chiranjeevi Sarja 4th Wedding Anniversary, Meghana Celebrating without Chiranjeevi

  ಮದುವೆ, ಮಗು ಆದ ಬಳಿಕ ನಟಿ ಮೇಘನಾ ರಾಜ್ ಹಲವು ದಿನಗಳು ಬಣ್ಣದ ಲೋಕದಿಂದ ದೂರ ಇದ್ದರು.ಆದರೆ ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಿರುತೆರೆ ರಿಯಾಲಿಟಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಹತ್ತಿರವಾಗಿದ್ದಾರೆ ಮೇಘನಾ.

  English summary
  Meghana Raj And Chiranjeevi Sarja 4th Wedding Anniversary, Meghana Celebrating Without Chiranjeevi, Know More,
  Monday, May 2, 2022, 11:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X