ಮೇಘನಾರಾಜ್‌- ಚಿರು ಪುತ್ರನ ದೀಪಾವಳಿ ಸಂಭ್ರಮ ಬಲು ಚೆಂದ!

ನಟಿ ಮೇಘನಾ ರಾಜ್‌ ಮತ್ತು ಚಿರಂಜೀವಿ ಪುತ್ರ ರಾಯನ್‌ ರಾಜ್‌ ಸರ್ಜಾ ದೀಪಾವಳಿ ಸಂಭ್ರಮ ಜೋರಾಗಿದೆ. ಮಗನ ಸಂಭ್ರಮವನ್ನು ಮೇಘನಾ ರಾಜ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಯನ್‌ ರಾಜ್‌ಗೆ ಈಗಲೇ ಅಭಿಮಾನಿ ಬಳಗ ಇದೆ. ಅಂದರೆ ಈ ಮುದ್ದು ಕಂದ ಅದೆಷ್ಟೋ ಮಂದಿಗೆ ಅಚ್ಚು- ಮೆಚ್ಚು. ಹಾಗಾಗಿ ರಾಯನ್‌ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಮಂದಿ ಹಾತೊರೆಯುತ್ತಾ ಇರುತ್ತಾರೆ. ಹಾಗಾಗಿಯೇ ಮೇಘನಾ ಕೂಡ ಮಗನ ಬಗ್ಗೆ ಸಾಕಷ್ಟು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಈಗ ರಾಯನ್‌ ದೀಪಾವಳಿ ಸಂಭ್ರಮ ಹೇಗಿದೆ ಅನ್ನೋದನ್ನು ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ರಾಯನ್‌ ಫೊಟೋಗಳನ್ನು ಕ್ಲಿಕ್ಕಿಸಿ ಮೇಘನಾ ಅಪ್‌ಲೋಡ್ ಮಾಡಿದ್ದಾರೆ. " ಇದು ರಾಯನ್‌ನ ಹಲವು ಮನ ಸ್ಥಿತಿಗಳು. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಇವನು ನನ್ನ ಪುಟ್ಟ ಸಂಭ್ರಮ! ಈ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಮತ್ತು ಅನಿಯಮಿತ ಸಂತೋಷವನ್ನು ತರುತ್ತದೆ" ಎಂದು ಮೇಘನಾ ರಾಜ್‌ ಬರೆದುಕೊಂಡಿದ್ದಾರೆ. ಜೊತೆಗೆ ರಾಯನ್‌ ವಿಶೇಷ ಉಡುಪಿನ ಬಗ್ಗೆಯೂ ಮೇಘನಾ ರಾಜ್‌ ಪ್ರಸ್ತಾಪಿಸಿದ್ದಾರೆ.

ರಾಯನ್‌ ರಾಜ್‌ ಬಂದ ಮೇಲೆ ಎಲ್ಲರೂ ನಿಧಾನವಾಗಿ ಚಿರು ಇಲ್ಲದ ಕಹಿ ನೆನಪನ್ನ ಮರೆಯುತ್ತಿದ್ದಾರೆ. ಮಗ ರಾಯನ್‌ನಲ್ಲಿಯೇ ಚಿರುವನ್ನ ಕಾಣುತ್ತಿದ್ದಾರೆ. ಅಂತೆಯೇ ಮೇಘನಾ ರಾಜ್‌ ಕೂಡ ಚಿರಂಜೀವಿ ಆಸೆ ಮತ್ತು ಕನಸಿನಂತೆಯೇ ಮಗನನ್ನ ಬೆಳೆಸುತ್ತಿದ್ದಾರೆ. ಯಾವಗಲೂ ಮೇಘನಾ ರಾಜ್‌ ಹೇಳುತ್ತಿರುತ್ತಾರೆ. ಚಿರು ಹೇಳಿದ ಹಾಗೆ ಆಸೆ ಪಟ್ಟ ರೀತಿಯಲ್ಲೇ ಮಗನನ್ನು ಬೆಳೆಸುತ್ತೇನೆ ಎಂದು. ಇನ್ನು ಚಿರಂಜೀವಿಗೆ ಸಂಭ್ರಮ ಅಂದ್ರೆ ಇಷ್ಟ. ಹಾಗಾಗಿಯೇ ಬದುಕಿನ ಸಣ್ಣ ಸಣ್ಣ ವಿಚಾರಗಳಲ್ಲೂ ಮೇಘನಾ ಸಂಭ್ರಮ ಕಾಣುತ್ತಾರೆ. ಜೊತೆ ತಮ್ಮೊಂದಿಗೆ ಇರುವವರನ್ನ ಸಂತಸದಿಂದ ಸಂಭ್ರಮದಿಂದ ಇಡಲು ಪ್ರಯತ್ನಿಸುತ್ತಾರೆ.

Meghana Raj And Chiranjeevi Sarja Son Diwali Celebration

ಇತ್ತೀಚೆಗೆ ಅಕ್ಟೋಬರ್‌ 22ರಂದು ರಾಯನ್‌ ರಾಜ್‌ ಸರ್ಜಾ ಹುಟ್ಟು ಹಬ್ಬ ಇತ್ತು. ಮಗನ ಮೊದಲ ವರ್ಷದ ಹುಟ್ಟು ಹಬ್ಬವನ್ನ ಮೇಘನಾ ಮತ್ತು ಕುಟುಂಬ ಅದ್ದೂರಿಯಾಗಿ ಮಾಡಿತ್ತು. ಕನ್ನಡ ಸಿನಿಮಾ ರಂಗದ ಗಣ್ಯರು ರಾಯನ್‌ ಹುಟ್ಟು ಹಬ್ಬಕ್ಕೆ ಸಾಕ್ಷಿ ಆಗಿದ್ದರು. ಜೊತೆಗೆ ಪುಟ್ಟ ಕಂದನನ್ನ ಬಾಯಿತುಂಬ ಅರಸಿದ್ದರು. ರಾಯನ್‌ ಕುರಿತಾಗಿ ಏನೇ ವಿಚಾರ ಬಂದರೂ ಜನ ಚಾಚು ತಪ್ಪದೆ ಫಾಲೋ ಮಾಡುತ್ತಾರೆ. ಯಾಕೆಂದರೆ ರಾಯನ್‌ ಹುಟ್ಟುವುದಕ್ಕೂ ಮೊದಲೇ ಕರುನಾಡ ಜನರ ಮನದಲ್ಲಿ ನೆಲೆಗಳಿಸಿದ್ದ. ನಟ ಚಿರಂಜೀವಿ ಅಗಲಿಕೆಯ ಸಮಯದಲ್ಲಿ ರಾಯನ್‌ ಅಮ್ಮನ ಗರ್ಭದಲ್ಲಿ ಅವಿತು ಕೂತಿದ್ದ. ಆದರೆ ಚಿರುಗಾಗಿ ಮರುಗಿದ ಮನಸ್ಸುಗಳು ರಾಯನ್‌ಗೆ ಮನಸ್ಸು ಪೂರ್ವಕವಾಗಿ ಆರ್ಶೀರ್ವದಿಸಿವೆ. ಹಾಗಾಗಿ ರಾಯನ್‌ಗೆ ತಮ್ಮ ಕುಟುಂಬಸ್ಥರು ಮಾತ್ರವಲ್ಲದೆ. ಇಡೀ ಕರುನಾಡಿನ ಆಶೀರ್ವಾದ ಇದೆ.

Meghana Raj And Chiranjeevi Sarja Son Diwali Celebration

ಸದ್ಯ ರಾಯನ್‌ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದ್ದಾನೆ. ಅಮ್ಮ ಮೇಘನಾ ಮಗನ ಖುಷಿಯನ್ನು ಕರುನಾಡಿಗೆ ಹಂಚಿದ್ದಾರೆ. ರಾಯನ್‌ ಈ ದೀಪಾವಳಿ ಲುಕ್‌ಗೆ ಸಾಕಷ್ಟು ಮೆಚ್ಚುಗೆಗಳು ಬಂದಿವೆ. ಇನ್ನು ಮೇಘನಾ ಕೊಂಚ ಗ್ಯಾಪ್‌ ಬಳಿಕ ಮತ್ತೆ ಸಿನಿಮಾ ಜರ್ನಿಯನ್ನು ಆರಂಭಿಸಿದ್ದಾರೆ. ತಮ್ಮ ಮುಂದಿನ ಸಿನಿಮಾದ ಲುಕ್‌ ಇತ್ತೀಚೆಗೆ ಮೇಘನ ರಿವೀಲ್‌ ಮಾಡಿದ್ದರು. ಮಹಾರಾಣಿಯ ರೂಪದಲ್ಲಿ ಮೇಘನಾ ಕಾಣಿಸಿಕೊಂಡಿದ್ದರು. ಚಿರಂಜೀವಿಯ ಭಾವ ಚಿತ್ರವನ್ನ ಚಿತ್ರಿಸುವ ಪೋಸ್ಟರ್‌ ರಿಲೀಸ್‌ ಆಗಿತ್ತು. ಚಿರಂಜೀವಿ ಹುಟ್ಟು ಹಬ್ಬದ ಪ್ರಯುಕ್ತ ಮೇಘನಾ ತಮ್ಮ ಮುಂದಿನ ಸಿನಿಮಾವನ್ನು ಪ್ರಕಟ ಮಾಡಿದ್ದಾರೆ.

More from Filmibeat

English summary
Actress Meghana Raj Share Son Rayan Raj Sarja Diwali Celebration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X