ಸೃಜನ್ - ಮೇಘನಾ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ
ನಟಿ ಮೇಘನಾ ರಾಜ್ ಇತ್ತೀಚೆಗೆ ತಮ್ಮ ಪತಿ ಚಿರಂಜೀವಿ ಸರ್ಜಾ ಅವರ 'ಸಿಂಗ' ಸಿನಿಮಾಗೆ ಹಾಡು ಹಾಡಿದ್ದರು. ಇದೀಗ ಅವರು ಒಂದು ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ.
ನಟ ಸೃಜನ್ ಲೋಕೇಶ್ ಅಭಿನಯದ ಹೊಸ ಸಿನಿಮಾಗೆ ಮೇಘನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುತ್ತಿದೆ. 'ರವಿ ಹಿಸ್ಟರಿ' ಚಿತ್ರದ ನಿರ್ದೇಶಕ ಮಧುಚಂದ್ರ ಈ ಸಿನಿಮಾವನ್ನು ಮಾಡುತ್ತಿದ್ದಾರೆ.
ಮತ್ತೊಂದು ವಿಶೇಷ ಅಂದರೆ, ಮೇಘನಾ ಮದುವೆಯ ಬಳಿಕ ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ. ಕಾಂತ ಕನ್ನಲಿ ನಿರ್ದೇಶನದ 'ಇರುವುದೆಲ್ಲ ಬಿಟ್ಟು' ಸಿನಿಮಾ ಮೇಘನಾ ಮದುವೆ ಬಳಿಕ ಬಿಡುಗಡೆಯಾಗಿತ್ತು. ಆದರೆ, ಮದುವೆಗೆ ಮುಂಚೆಯೇ ಆ ಚಿತ್ರವನ್ನು ಶುರು ಮಾಡಲಾಗಿತ್ತು.

ಇನ್ನು 'ಮಜಾ ಟಾಕೀಸ್' ಮೂಲಕ ವೀಕ್ಷಕರಿಗೆ ಮಜಾ ನೀಡುವ ಸೃಜ ಹಾಗಾಗ ಹಿರಿತೆರೆಗೂ ಬರುತ್ತಾರೆ. ಸೃಜನ್ ಅವರ ಈ ಹೊಸ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
English summary
Actress Meghana Raj and Srujan Lokesh came together for there new movie. The movie is directing by Madhu Chandra.


Click it and Unblock the Notifications