For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಹೊಸ ಚಿತ್ರಕ್ಕೆ ಮೆಘನಾ ರಾಜ್ ಗ್ರೀನ್ ಸಿಗ್ನಲ್!

  |

  ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್, ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಬಹಳ ದಿನಗಳ ನಂತರ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ಮೇಘನಾ. ಮೇಘನಾ ಅವರನ್ನು ತೆರೆಯ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಸರ್ಜಾ ಕುಟುಂಬದ ಸೊಸೆ, ಸುಂದರ್ ರಾಜ್ ಮತ್ತು ಪ್ರಮೀಳಾ ಸುಂದರ್ ದಂಪತಿಯ ಮುದ್ದಿನ ಮಗಳು ಮೇಘನಾ ರಾಜ್ ಸ್ಯಾಂಡಲ್ ವುಡ್ ನ ಖ್ಯಾತ ನಟಿ. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಹ ಫೇಮಸ್ ಆಗಿದ್ದಾರೆ ನಟಿ ಮೇಘನಾ ರಾಜ್. ಮೇಘನಾ ರಾಜ್ ಅವರು ಈಗೀಗ ಮನೆಯಿಂದ ಹೊರಬಂದು ಸಹಜ ಜೀವನದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ ಮೇಘನಾ.

  ಮೇಘನಾ ರಾಜ್ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಮೇಘನಾ ರಾಜ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಹೊಸ ಸಿನಿಮಾದ ಹೆಸರು ಶಬ್ದ. ಮೇಘನಾ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ 'ಇರುವುದೆಲ್ಲವ ಬಿಟ್ಟು' ಸಿನಿಮಾ ತಂಡದ ಜೊತೆಗೆ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಮೇಘನಾ. ಇದರ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಈ ತಂಡದ ಜೊತೆ ಕೆಲಸ ಮಾಡುವುದು ವರ ಎಂದು ಹೇಳಿದ್ದಾರೆ ಮೇಘನಾ.

  ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್‌ಗಾಗಿ ಮಾಡಿಟ್ಟ ಆಸ್ತಿ ಇದು! ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್‌ಗಾಗಿ ಮಾಡಿಟ್ಟ ಆಸ್ತಿ ಇದು!

  ಈ ಸುದ್ದಿ ಮೇಘನಾ ರಾಜ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷದ ವಿಚಾರ ಆಗಿದೆ. ಮತ್ತೊಮ್ಮೆ ಮೇಘನಾ ಅವರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ ಮೇಘನಾ ರಾಜ್ ಅವರ ಅಭಿಮಾನಿಗಳು.

  ಅಂದಹಾಗೇ ಮೇಘನಾ ರಾಜ್ ತೆರೆ ಮೇಲೆ ಕಾಣಿಸಿಕೊಂಡು ವರ್ಷಗಳೇ ಕಳೆದವು. ಗರ್ಭಿಣಿಯಾಗಿದ್ದ ಕಾರಣ ಚಿರು ಇದ್ದಾಗಲೇ ಸಿನಿಮಾ ದಿಂದ ಕೊಂಚ ದೂರ ಉಳಿದಿದ್ದರು ಮೇಘನಾ. ಆದರೆ ಆನಂತರ ಜೀವನದ ಸಾಕಷ್ಟು ಏರುಪೇರುಗಳ ನೋವಿನ ದಿನಗಳನ್ನು ದಾಟುವ ಸಮಯದಲ್ಲಿ ಬಹುಶಃ ಬಣ್ಣದ ಲೋಕದಿಂದ ಮೇಘನಾ ರಾಜ್ ಸಂಪೂರ್ಣವಾಗಿ ದೂರ ಉಳಿಯಬಹುದು ಎಂದುಕೊಂಡಿದ್ದರು ಫ್ಯಾನ್ಸ್‌. ಆದರೆ ಈ ನಡುವೆಯೇ ಸಿನಿಮಾನೇ ನಮ್ಮ ಜೀವನ. ಅದನ್ನು ಬಿಟ್ಟು ನಮಗೆ ನಮ್ಮ ಕುಟುಂಬಕ್ಕೆ ಬೇರೆ ಕೆಲಸವೇ ಗೊತ್ತಿಲ್ಲ. ಮತ್ತೆ ಬಣ್ಣ ಹಚ್ಚುವುದಾಗಿ ತಿಳಿಸಿದ್ದರು ಮೇಘನಾ ರಾಜ್. ಅದರಂತೆ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ನಿರೂಪಕಿಯಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

  ಮೇಘನಾ ರಾಜ್ ಅವರು 8 ವರ್ಷಗಳ ಕಾಲ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ, ಎರಡು ಕುಟುಂಬದವರನ್ನು ಒಪ್ಪಿಸಿ, ಮದುವೆಗೆ ಸಿದ್ಧರಾದ ಮೇಘನಾ ಚಿರು. 2018ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ಮದುವೆಯಾದರು. ಚಂದನವನದ ಕ್ಯೂಟ್ ಜೋಡಿಯಾಗಿದ್ದ ಇವರಿಬ್ಬರು, ಎಲ್ಲರ ಫೇವರಿಟ್ ಆಗಿದ್ದರು. ಆದರೆ ವಿಧಿಯ ನಿಯಮವೇ ಬೇರೆ ಆಗಿತ್ತು, ಮದುವೆಯಾದ ಎರಡೇ ವರ್ಷಕ್ಕೆ ಚಿರುವನ್ನು ಕಳೆದುಕೊಂಡರು ಮೇಘನಾ. ಈಗ ಮೇಘನಾ ಅವರ ಜೀವನದಲ್ಲಿ ಬೆಳಕಾಗಿ ಇರುವುದು ರಾಯನ್ ರಾಜ್ ಸರ್ಜಾ.
  Meghana Raj Announced Her New Movie
  ಈಗ ಮೇಘನಾ ರಾಜ್ ಅವರು ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರುತ್ತಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಮೇಘನಾ ರಾಜ್ ಅವರಿಗೆ ತುಂಬಾ ಸ್ಪೆಶಲ್. ಬಣ್ಣದ ಲೋಕಕ್ಕೆ ಮತ್ತೆ ಬಂದಿರುವ ಮೇಘನಾ ರಾಜ್, ಕಳೆದ ವರ್ಷ ಹೊಸ ಸಿನಿಮಾ ಒಪ್ಪಿಕೊಂಡಿರುವ ಗುಡ್ ನ್ಯೂಸ್ ನೀಡಿದ್ದರು. ನಿನ್ನೆಯಷ್ಟೇ ಮೇಘನಾ ಅವರು ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡು ಅದರ ಬಗ್ಗೆ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ಹೊಸ ಸಿನಿಮಾ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಮೇಘನಾ ರಾಜ್.
  English summary
  Meghana Raj announced her new movie with the team of 'Iruvudellava Bittu'. Here is more information about the new film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X